• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈನಲ್ಲಿ ಮುಖ್ಯಮಂತ್ರಿ ಕೃಷ್ಣ ‘ಪ್ಯಾರಿಸ್‌ ಪ್ರಣಯ’

By Staff
|

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಮುಂಬರುವ ಜುಲೈ ತಿಂಗಳಲ್ಲಿ ಫ್ರಾನ್ಸ್‌ಗೆ ಭೇಟಿ ನೀಡುವರು.

ಕಳೆದ ಮೂರು ವರ್ಷಗಳಿಂದ ಫ್ರಾನ್ಸ್‌ಗೆ ಭೇಟಿ ನೀಡುವಂತೆ ಫ್ರಾನ್ಸ್‌ ಸರ್ಕಾರದಿಂದ ತಮಗೆ ಆಹ್ವಾನ ಬರುತ್ತಿದೆ. ಈ ಆಹ್ವಾನವನ್ನು ಇದುವರೆಗೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ . ಮುಂಬರುವ ಜುಲೈ ತಿಂಗಳಲ್ಲಿ ಫ್ರಾನ್ಸ್‌ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಬುಧವಾರ (ಮೇ14) ಕೃಷ್ಣ ಪ್ರಕಟಿಸಿದರು. ಬೆಂಗಳೂರು ನಗರದ ಹೊರ ವಲಯದಲ್ಲಿನ ಯಲಹಂಕದಲ್ಲಿ ಬುಧವಾರ ನಡೆದ ಭಾರತದ ಅತ್ಯಾಧುನಿಕ ಕಲುಷಿತ ನೀರು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೃಷ್ಣ ಅವರು ಉದ್ಘಾಟಿಸಿದ ಕಲುಷಿತ ನೀರು ಸಂಸ್ಕರಣಾ ಘಟಕವು 34 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಭಾರತದಲ್ಲಿಯೇ ಅತ್ಯಾಧುನಿಕ ಸ್ಥಾವರ ಎನ್ನುವ ಹಿರಿಮೆಯ ಈ ಘಟಕ ಪ್ರತಿದಿನ 10 ಲಕ್ಷ ಲೀಟರ್‌ ನೀರು ಸಂಸ್ಕರಣೆಯ ಸಾಮರ್ಥ್ಯ ಹೊಂದಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ :

ದೇವನಹಳ್ಳಿ ಬಳಿ ನಿರ್ಮಿಸಲಾಗುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಜೂನ್‌ 1ರಿಂದ ಪ್ರಾರಂಭವಾಗುವುದು ಎಂದು ಕೃಷ್ಣ ಘೋಷಿಸಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯರೂಪಕ್ಕೆ ಬರುತ್ತಿದ್ದಂತೆಯೇ ರಾಜ್ಯಕ್ಕೆ ಹರಿದುಬರುವ ವಿದೇಶಿ ಬಂಡವಾಳದ ಪ್ರಮಾಣ ಹೆಚ್ಚುವ ಕುರಿತು ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ರಾಜ್ಯದ ತೋಟಗಾರಿಕಾ ಉತ್ಪನ್ನಗಳ ರಫ್ತಿಗೆ ಅನುಕೂಲವಾಗುವುದೆಂದು ಅವರು ಹೇಳಿದರು.

ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌, ಸಾಮಾಜಿಕ ಕಲ್ಯಾಣ ಸಚಿವ ಎ.ಕೃಷ್ಣಪ್ಪ ಮತ್ತಿತರರು ಕಲುಷಿತ ನೀರು ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more