• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಳಲ್ಕೆರೆಯಲ್ಲಿ ಕುಡಿಯುವ ನೀರಿಗಾಗಿ ಧರಣಿ

By Staff
|

ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆಯಲ್ಲಿ ಕುಡಿಯುವ ನೀರಿಗೆ ಬಂದ ತತ್ವಾರದಿಂದ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ಕುಡಿಯುವ ನೀರು ಒದಗಿಸುವಂತೆ ಮೇ 13ರಂದು ಗ್ರಾಮಸ್ಥರು ಸ್ಥಳೀಯ ತಹಸೀಲ್ದಾರ್‌ ಕಚೇರಿಯ ಮುಂದೆ ಧರಣಿ ನಡೆಸಿದರು.

ಗ್ರಾಮಸ್ಥ ಧರಣಿಗೆ ಪಟ್ಟಣ ಪಂಚಾಯತ್‌ ಸದಸ್ಯರು ಕೈ ಜೋಡಿಸಿದ್ದರು. ಪಟ್ಟಣ ಪಂಚಾಯತ್‌ ಉಪಾಧ್ಯಕ್ಷೆ ಜಲಜಾಕ್ಷಮ್ಮ, ಸದಸ್ಯರಾದ ಹೆಚ್‌. ಜಿ. ಆನಂದ, ಕೆ. ಎಸ್‌. ತಿಪ್ಪೇ ಸ್ವಾಮಿ ಮತ್ತು ಶಾರದಾಂಬ ಧರಣಿಯ ಮುಂದಾಳತ್ವ ವಹಿಸಿದ್ದು, ಪಟ್ಟಣ ಪಂಚಾಯತ್‌ಗೆ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದರು.

ಈಗಾಗಲೇ ಹೊಳಲ್ಕೆರೆ ನಿವಾಸಿಗಳು ಉತ್ತಮ ಕುಡಿಯುವ ನೀರಿನ ಪೂರೈಕೆಗಾಗಿ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಗ್ರಾಮಸ್ಥರ ದೂರಿಗೆ ಕಿವಿಗೊಟ್ಟಿಲ್ಲ.

ಪಟ್ಟಣ ಪಂಚಾಯತ್‌ನ ಸದಸ್ಯರಲ್ಲಿ ಸಾಕಷ್ಟು ಹೊಂದಾಣಿಕೆ ಇಲ್ಲದೇ ಇರುವುದರಿಂದ ನೀರು ಪೂರೈಕೆಯಲ್ಲಿ ತೊಂದರೆಯುಂಟಾಗುತ್ತಿದೆ ಎಂಬುದು ಗ್ರಾಮಸ್ಥರ ಅಂಬೋಣ. ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಅಭಿವೃದ್ಧಿ ಕಾರ್ಯ ಕೂಡ ಸ್ಥಗಿತಗೊಂಡಿದೆ. ಪಟ್ಟಣ ಪಂಚಾಯತ್‌ ಉಪಾಧ್ಯಕ್ಷೆ ಜಲಜಾಕ್ಷಮ್ಮ ಮತ್ತು ತಂಡದವರ ಸಲಹೆ ಮೇರೆಗೆ ಮೇ 14ರಂದು ಪ್ರತಿಭಟನೆ ನಡೆದಿದೆ.

ಆದರೆ ಪ್ರತಿಭಟನೆಯ ನಂತರ ಪಟ್ಟಣ ಪಂಚಾಯತ್‌ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್‌ ಹೆಚ್‌. ಪಿ.ನಾಗರಾಜ್‌, ಪ್ರತಿಭಟನಾ ನಿರತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ದಬಾಯಿಸಿ, ಪೊಲೀಸರನ್ನು ಕರೆಸಿದ್ದಾರೆ. ಚರ್ಚೆ, ವಾಗ್ವಾದಗಳು ಕಾವೇರುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪ ಆಯುಕ್ತ ಸಯ್ಯದ್‌ ಆಲಿ ರಿರಿkು್ವ ಅವರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು. ಶೀಘ್ರವೇ ಕುಡಿಯುವ ನೀರಿನ ಪೂರೈಕೆಗಾಗಿ ಕ್ರಮ ಕೈಗೊಳ್ಳುವುದಾಗಿ ಸಯ್ಯದ್‌ ಆಲಿ ಅವರಿಂದ ಭರವಸೆಯೂ ದೊರಕಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more