ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ. ಕ. ಅಭಿವೃದ್ಧಿಗಾಗಿ ಹೊಸ ಕಾರ್ಯಪಡೆ ರಚನೆ

By Staff
|
Google Oneindia Kannada News

ಬೆಂಗಳೂರು: ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಸರಕಾರ ಉತ್ತರ ಕರ್ನಾಟಕ ಕಾರ್ಯಪಡೆ ರಚಿಸಿದೆ.

ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ಆರ್ಥಿಕ ಹಾಗೂ ವಾಣಿಜ್ಯ ಬೆಳವಣಿಗೆಗಳಿಗೆ ಪೂರಕವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌ ಮಾದರಿಯಲ್ಲಿಯೇ ಈ ಕಾರ್ಯಪಡೆಯೂ ಕೆಲಸ ನಿರ್ವಹಿಸಲಿದೆ.

ಈ ಯೋಜನೆಯ ಅನ್ವಯ ಮೊದಲ ಹಂತದಲ್ಲಿ ಹುಬ್ಬಳ್ಳಿ ಗೋಕುಲ್‌ ಕ್ರಾಸ್‌ನಿಂದ ತಾರಿಹಾಳ್‌ ವರೆಗೆ 8. 4 ಕಿ.ಮಿ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಬೆಳಗಾವಿಯಲ್ಲಿ ವಿಮಾನ ನಿಲ್ದಾಣ, ಹುಬ್ಬಳ್ಳಿಯಲ್ಲಿ ವಸ್ತು ಪ್ರದರ್ಶನ ಮಳಿಗೆ ಆರಂಭ ಕೂಡ ಕಾರ್ಯಪಡೆಯ ಮುಂದಿರುವ ಯೋಜನೆ.

ಧಾರವಾಡ ಬೆಳಗಾವಿ ಮತ್ತು ಗದಗದ ಜಿಲ್ಲಾಧಿಕಾರಿಗಳು, ಕ್ಷೇಮ ಟೆಕ್ನಾಲಜೀಸ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಪಿ. ವಿ. ದೇಶಪಾಂಡೆ ಈ ಕಾರ್ಯಪಡೆಯ ಸದಸ್ಯರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X