ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠದ ವಿಷಯದಲ್ಲಿ ತೋಚಿದ್ದು ಆಡಕೂಡದು- ಕೃಷ್ಣ

By Staff
|
Google Oneindia Kannada News

ಶೃಂಗೇರಿ : ದೇವೇಗೌಡರ ಮಠಮಾನ್ಯ ರಾಜಕೀಯಕ್ಕೆ ಬೆಂಗಳೂರಲ್ಲಿ ಈವರೆಗೆ ಪ್ರತಿಕ್ರಿಯಿಸದೆ ತಣ್ಣಗಿದ್ದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ , ಗುರುವಾರ ಶೃಂಗೇರಿಯ ಶಾರದಾ ಪೀಠದಲ್ಲಿ ನಿಂತು ‘ಮಠಗಳ ಬಗ್ಗೆ ಮಾತಾಡುವಾಗ ಜವಾಬ್ದಾರಿಯಿಂದಿರಬೇಕು’ ಎಂಬ ಕಿವಿಮಾತನ್ನಾಡಿದರು.

ನಾಲ್ಕು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ ಮಠದ ಪ್ರಾರ್ಥನೆ ಮತ್ತು ಪೂಜಾ ಸಭಾಂಗಣ ‘ಗುರು ಭವನ’ವನ್ನು ಉದ್ಘಾಟಿಸಿ ಕೃಷ್ಣ ಮಾತಾಡುತ್ತಿದ್ದರು. ಆಧುನಿಕ ಜಗತ್ತಿನಲ್ಲಿ ಮನುಷ್ಯನಿಗೆ ಎಲ್ಲಾ ಸವಲತ್ತುಗಳು ದೊರಕಿದ್ದರೂ ಸಹ ಆಧ್ಯಾತ್ಮ ಹಾಗೂ ಶಾಂತಿಗಾಗಿ ಹುಡುಕುವ ಪರಿಸ್ಥಿತಿ ಇವತ್ತು ಒದಗಿದೆ. ಮಠ ಹಾಗೂ ಪೀಠಗಳು ಜನರಿಗೆ ಮನಶ್ಶಾಂತಿಯನ್ನು ಕೊಡುವಂಥವು. ಇಂಥಾ ಧಾರ್ಮಿಕ ಸಂಸ್ಥೆಗಳ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದಿರಬೇಕು ಎಂದರು.

ದೇವೇಗೌಡರು ಬಾಲಗಂಗಾಧರನಾಥ ಸ್ವಾಮೀಜಿಗೆ ಬಹಿರಂಗವಾಗಿ ಸವಾಲು ಹಾಕಿದ ನಂತರ ಮೊದಲ ಬಾರಿಗೆ ಕೃಷ್ಣ ಪರೋಕ್ಷವಾಗಿ ಗೌಡರಿಗೆ ಹೇಳಿರುವ ಕಿವಿಮಾತು ಇದು. ಎಚ್ಚರಿಕೆಯ ನುಡಿಯ ನಂತರ ಕೃಷ್ಣ ಆಡಿದ ಮಾತುಗಳು ಶೃಂಗೇರಿ ಶಾರದಾ ಪೀಠದ ಶ್ಲಾಘನೆಗೆ ಮೀಸಲಾದವು. 12 ಶತಮಾನಗಳ ಹಿಂದೆ ಅದ್ವೆ ೖತ ತತ್ತ್ವ ಪ್ರತಿಪಾದಕ ಶಂಕರಾಚಾರ್ಯರು ಹುಟ್ಟುಹಾಕಿದ ಶೃಂಗೇರಿ ಶಾರದಾ ಪೀಠ ಧಾರ್ಮಿಕ ಪುನರುತ್ಥಾನಕ್ಕೆ ಎಡೆಬಿಡದೆ ಶ್ರಮಿಸುತ್ತಿರುವುದನ್ನು ಕೃಷ್ಣ ಕೊಂಡಾಡಿದರು.

ಶಂಕರ ಜಯಂತಿ ಇನ್ನು ಮುಂದೆ ತತ್ತ್ವಜ್ಞಾನಿಗಳ ದಿನ
ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಕೊಟ್ಟಿರುವ ಸಲಹೆಯಂತೆ ಆದಿ ಶಂಕರಾಚಾರ್ಯರ ಜಯಂತಿಯನ್ನು ತತ್ತ್ವಜ್ಞಾನಿಗಳ ದಿನ ಎಂದು ಆಚರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದಾಗ ಕರತಾಡನ ಜೋರಾಯಿತು.

ಸಮಗ್ರ ಯೋಜನೆ : ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೃಂಗೇರಿಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಅಧಿಕಾರಿಗಳ ಸಭೆಯಾಂದನ್ನು ದೆಹಲಿಯಲ್ಲಿ ಆಯೋಜಿಸುತ್ತೇವೆ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಬಡತನಾ ನಿರ್ಮೂಲನೆ ಸಚಿವ ಅನಂತ್‌ಕುಮಾರ್‌ ಘೋಷಿಸಿದರು.

ಶೃಂಗೇರಿ ಮೂಲಕ ಹಾದುಹೋಗುವ ಶಿವಮೊಗ್ಗ- ಚಿಕ್ಕಮಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕೆಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವೆ ಡಿ.ಬಿ.ಚಂದ್ರೇಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X