ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಂಡೇಲಿ ಪುರಸಭೆಯಲ್ಲಿ ನೌಕರರ ಕೊರತೆ

By Staff
|
Google Oneindia Kannada News

ದಾಂಡೇಲಿ : ಇಲ್ಲಿನ ಸ್ಥಳೀಯ ಪುರಸಭೆಯಲ್ಲಿ ಈಗ ನೌಕರರ ಕೊರತೆ. ಪುರಸಭೆಯ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವುದಕ್ಕೆ ಬೇಕಾಗುವಷ್ಟು ಮಂದಿ ನೌಕರರು ಇಲ್ಲ ಎಂಬುದು ಪುರಸಭೆ ಅಧ್ಯಕ್ಷರ ದೂರು.

ನಗರದಲ್ಲಿ ಕೇವಲ ನೈರ್ಮಲ್ಯ ಕಾರ್ಯಗಳಿಗೇ 75 ಮಂದಿ ನೌಕರರು ಹಾಗೂ ಐವರು ಕಿರಿಯ ಆರೋಗ್ಯ ವೀಕ್ಷಣಾಧಿಕಾರಿಗಳ ಅಗತ್ಯವಿದೆ. ಆದರೆ, ನಗರ ನೈರ್ಮಲ್ಯ ವಿಭಾಗದಲ್ಲಿ ಕೇವಲ 30 ಮಂದಿ ನೌಕರರು ಹಾಗೂ ಒಬ್ಬ ಆರೋಗ್ಯ ವೀಕ್ಷಣಾಧಿಕಾರಿ ಇದ್ದಾರೆ.

ಆಫೀಸು ಮ್ಯಾನೇಜರ್‌, ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ, ಲೆಕ್ಕ ಪತ್ರ ಅಧೀಕ್ಷಕ, ಲೆಕ್ಕ ಪರಿಶೋಧಕ, ಕಿರಿ ಇಂಜಿನಿಯರ್‌ಗಳು ಮತ್ತು ಸಮೀಕ್ಷಕರ ಹುದ್ದೆಗಳು ಖಾಲಿ ಇವೆ. ಕೆಲವರು ನಿವೃತ್ತಿ ಹೊಂದಿದ್ದರೆ ಇನ್ನು ಕೆಲವರು ವರ್ಗವಾಗಿ ಬೇರೆ ಊರುಗಳಿಗೆ ತೆರಳಿದ್ದಾರೆ. ಪುರಸಭೆಯಲ್ಲಿ ಈ ಮೇಲಿನ ಸುಮಾರು 30 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ತುರ್ತಾಗಿ ನೇಮಕಾತಿ ಕಾರ್ಯ ನಡೆಯಬೇಕಿದೆ. ಪುರಸಭೆಯಲ್ಲಿರುವ ಅಧಿಕಾರಿಗಳು ಪುರಸಭೆಯನ್ನು ನಡೆಸಿಕೊಂಡು ಹೋಗಲು ಹೆಣಗಾಡುತ್ತಿದ್ದಾರೆ. ನಗರದ ಸ್ವಚ್ಛತೆಗಾಗಿ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ ನೆರವಿನಿಂದ ಒಂದು ಜೆಸಿಬಿ ಇದ್ದರೂ ಅದಕ್ಕೊಬ್ಬ ಚಾಲಕನಿಲ್ಲ. ರಿಪೇರಿ ಕೆಲಸಗಳಿಗೆ ನೌಕರರಿಲ್ಲ. ಸ್ವಚ್ಛತೆಗಾಗಿ ಕೂಲಿಗಳನ್ನು ದಿನಗೂಲಿ ಆಧಾರದ ಮೇಲೆ ಕರೆಸಿಕೊಳ್ಳಲಾಗುತ್ತಿದೆ.

ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸುವಂತೆ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಕೌನ್ಸಿಲರ್‌ಗಳು ಸರಕಾರಕ್ಕೆ ಪತ್ರ ಬರೆಯುತ್ತಲೇ ಇದ್ದಾರೆ. ಸರ್ಕಾರ ಮಾತ್ರ ಇರುವ ಹುದ್ದೆಗಳ ರದ್ದು ಮಾಡುವತ್ತ ಮಾತ್ರ ಯೋಚಿಸುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X