ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಮರಾ ಕಣ್ಣಿನಲ್ಲಿ ‘ನಾಯಿ ನೆರಳು’

By Super
|
Google Oneindia Kannada News

ಕೇಶವ ವಿಟ್ಲ ವೃತ್ತಿಯಲ್ಲಿ ಕನ್ನಡಪ್ರಭ , ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ಛಾಯಾಚಿತ್ರ ಪತ್ರಕರ್ತ. ಸಾಮಾನ್ಯವಾಗಿ ವಿಟ್ಲ ಅವರ ಚಿತ್ರಗಳು ತಾಂತ್ರಿಕ ಕಸರತ್ತಿನ ಸರಕುಗಳಾಗಿರುವುದಿಲ್ಲ . ಅವರ ಚಿತ್ರಗಳ ವಸ್ತುಗಳು ತಮ್ಮ ಛಾಯಾಚಿತ್ರದ ಚೌಕಟ್ಟನ್ನು ಮೀರಿ ಏನನ್ನೋ ಹೇಳಲು ತುಡಿಯುತ್ತಿರುತ್ತವೆ. ಆ ತುಡಿತದ ಜೀವಂತಿಕೆಯೇ ವಿಟ್ಲ ಅವರ ಚಿತ್ರಗಳ ಹೆಚ್ಚುಗಾರಿಕೆ. ದಿ ಫೆಯ್ತ್‌ಫುಲ್‌ ಪ್ರದರ್ಶನದಲ್ಲಿನ ನಾಯಿಗಳ ಚಿತ್ರಗಳು- ಮೊದಲ ನೋಟಕ್ಕೆ ಸೆಳೆಯುತ್ತವೆ, ನೋಡಿದ ನಂತರವೂ ಕಾಡುತ್ತಿರುತ್ತವೆ.

ಅಂದಹಾಗೆ, ಏಪ್ರಿಲ್‌ 27ರಂದು ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಸಿ.ರಾಜಗೋಪಾಲ್‌ ಉದ್ಘಾಟಿಸಿದ ' THE FAITHFUL" ಪ್ರದರ್ಶನ ಮೇ ನಾಲ್ಕರವರೆಗೆ ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವುದು. ಸಾಧ್ಯವಾದರೆ ಒಮ್ಮೆ ಚಿತ್ರಕಲಾ ಪರಿಷತ್ತಿನತ್ತ ಹೆಜ್ಜೆ ಹಾಕಿ ವಿಟ್ಲ ಅವರ ಕೆಮರಾ ಕಣ್ಣಿನ ಕೃತಿಗಳ ಕಾಣಿರಿ. ಪ್ರದರ್ಶನದ ಆಯ್ದ ಚಿತ್ರಗಳ ಗ್ಯಾಲರಿ ಇಲ್ಲಿದೆ. ಚಿತ್ರ ನೋಡಿ ; ಅಭಿಪ್ರಾಯ ಬರೆಯಿರಿ.

English summary
Street Dogs is a daunting menace in Bangalore-India. But a news photographer Keshav Vitla over the years shooting Street dogs pictures in Bangalore. A photo Gallery- The Faithful
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X