ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಎಂ.ಕೃಷ್ಣ-72 : ತಿರುಪತಿ ತಿಮ್ಮಪ್ಪನಿಗೆ ಪೂಜೆ

By Staff
|
Google Oneindia Kannada News

ತಿರುಪತಿ : ಮೇ 1ರ ಗುರುವಾರ ತಮ್ಮ 72ನೇ ಹುಟ್ಟು ಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ , ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಪ್ರೇಮಾ ಜೊತೆಗೆ ಹುಟ್ಟುಹಬ್ಬದ ನಿಮಿತ್ತ ಬುಧವಾರ ಸಂಜೆಯೇ ಮುಖ್ಯಮಂತ್ರಿ ಕೃಷ್ಣ ತಿರುಪತಿಗೆ ತೆರಳಿದ್ದರು. ಕೃಷ್ಣ ಅವರು ಖಾಸಗಿ ಧಾರ್ಮಿಕ ಕೇಂದ್ರದಲ್ಲಿ ಸುದರ್ಶನ ಹೋಮ ನಡೆಸಿದರು ಎಂದು ತಿರುಪತಿ ದೇವಸ್ಥಾನದ ಮೂಲಗಳು ತಿಳಿಸಿವೆ.

ತಿರುಪತಿಯಿಂದ ಬೆಂಗಳೂರಿಗೆ ಹೊರಡುವ ಮುನ್ನ ತಿರುಪತಿ ಬೆಟ್ಟದ ತಪ್ಪಲಿನ ತಿರುಚನೂರಿನಲ್ಲಿರುವ ಅಲಮೇಲ್‌ ಮಂಗೈ ದೇವಸ್ಥಾನಕ್ಕೆ ಹಾಗೂ ಕಾಳಹಸ್ತಿಯ ಈಶ್ವರ ದೇವಸ್ಥಾನಕ್ಕೆ ಕೃಷ್ಣ ಅವರು ಪತ್ನಿ ಜೊತೆಗೆ ಭೇಟಿ ನೀಡಿದರು. ಹುಟ್ಟುಹಬ್ಬದ ದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸುವುದು ಕೃಷ್ಣ ಅವರ ವಾರ್ಷಿಕ ಸಂಪ್ರದಾಯ.

(ಪಿಟಿಐ)

Post your views

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X