ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ:ಅಕ್ರಮ ನೀರು ಸಂಪರ್ಕಗಳ ವಿರುದ್ಧ ಸಮರ

By Staff
|
Google Oneindia Kannada News

ಹುಬ್ಬಳ್ಳಿ : ನಗರದ ವಿವಿಧ ಪ್ರದೇಶಗಳಲ್ಲಿ ಅಕ್ರಮ ನೀರು ಸರಬರಾಜು ಸಂಪರ್ಕ ಕಲ್ಪಿಸಿಕೊಂಡಿರುವ ಮನೆಗಳಿಗೆ ನೀರು ಸಂಪರ್ಕವನ್ನು ಜೂನ್‌ 1ರಿಂದ ಕಡಿದು ಹಾಕಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ಧರಿಸಿದೆ.

ಬಿಲ್‌ ಪಾವತಿಯ ದಾಖಲೆ ಇಲ್ಲದಿರುವ ಸಂಪರ್ಕಗಳನ್ನು ಅಕ್ರಮ ನೀರು ಸಂಪರ್ಕ ಹೊಂದಿರುವ ಮನೆಗಳೆಂದು ಗುರುತಿಸಲಾಗುತ್ತದೆ. ಇಂಥ ಮನೆಗಳಿಗೆ ನೀರು ಸರಬರಾಜನ್ನು ಜೂನ್‌ 1ರಿಂದ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನೀರು ಸರಬರಾಜು ಮಂಡಳಿಯ ಅಧ್ಯಕ್ಷ ಸಿ. ಎಂ. ಲಿಂಗಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಕ್ರಮ ಸಂಪರ್ಕ ಹೊಂದಿರುವವರು ಮೇ ತಿಂಗಳ 31ರೊಳಗೆ ತಮ್ಮ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಬೇಕು. ಮಂಡಳಿಯ ಅಧಿಕಾರಿಗಳು ನೀರಿನ ಮೀಟರ್‌ ಪರೀಕ್ಷಿಸಲು ಬಂದಾಗ ಅಕ್ರಮ ಸಂಪರ್ಕಗಳು ಪತ್ತೆಯಾದರೆ ದಂಡ ವಿಧಿಸಲಾಗುವುದು ಎಂದು ಲಿಂಗಪ್ಪ ಎಚ್ಚರಿಸಿದರು.

ಸಮೀಕ್ಷೆಯಾಂದರ ಪ್ರಕಾರ ಅವಳಿ ನಗರಗಳಲ್ಲಿ ಸುಮಾರು 24 ಸಾವಿರ ಅಕ್ರಮ ಸಂಪರ್ಕಗಳಿರುವುದು ತಿಳಿದುಬಂದಿದೆ. ಜೂನ್‌ ತಿಂಗಳಿನಿಂದ ಮಂಡಳಿಯು ಪ್ರತಿ ತಿಂಗಳೂ ಬಿಲ್‌ ಪಾವತಿ ವ್ಯವಸ್ಥೆಯನ್ನು ಕಲ್ಪಿಸಲಿದೆ. ಪ್ರತಿ ತಿಂಗಳು ಬಿಲ್‌ ತಲುಪದೇ ಇದ್ದಲ್ಲಿ , ಗ್ರಾಹಕರು ಮಂಡಳಿಯನ್ನು ನೇರವಾಗಿ ಸಂಪರ್ಕಿಸಬೇಕು ಎಂದು ಲಿಂಗಪ್ಪ ಸೂಚಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X