ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಮರಿಸ್ವಾಮಿ ಬೆಂಗಳೂರು ಪೊಲೀಸ್‌ ಕಮೀಷನರ್‌

By Staff
|
Google Oneindia Kannada News

ಬೆಂಗಳೂರು : ನಗರದ ಪೊಲೀಸ್‌ ಮಹಾನಿರ್ದೇಶಕರಾಗಿ ಎಸ್‌.ಮರಿಸ್ವಾಮಿ ಅವರನ್ನು ನೇಮಿಸಿ ಏಪ್ರಿಲ್‌ 30ರ ಬುಧವಾರ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ನಗರ ಪೊಲೀಸ್‌ ಕಮೀಷನರ್‌ ಆಗಿರುವ ಎಂ.ಡಿ.ಸಿಂಗ್‌ ಅವರು ಸಿಓಡಿ ಪೊಲೀಸ್‌ ಮಹಾ ನಿರ್ದೇಶಕರಾಗಿ ಬಡ್ತಿ ಹೊಂದಿದ್ದು , ಇದರಿಂದಾಗಿ ತೆರವಾಗುವ ಬೆಂಗಳೂರು ಮಹಾನಗರ ಪೊಲೀಸ್‌ ಮಹಾ ನಿರ್ದೇಶಕರ ಸ್ಥಾನವನ್ನು ಎಸ್‌.ಮರಿಸ್ವಾಮಿ ತುಂಬುವರು.
ಈವರೆಗೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿ)ರಾಗಿ ಮರಿಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಸ್ಥಾನಕ್ಕೆ ಭಾರೀ ಪೈಪೋಟಿ ಕಂಡುಬಂದಿದ್ದು , ಅನೇಕ ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರು ಸ್ಪರ್ಧೆಯಲ್ಲಿ ಚಾಲ್ತಿಯಲ್ಲಿದ್ದವು. ಹಿರಿಯ ಪೊಲೀಸ್‌ ಅಧಿಕಾರಿಗಳಾದ ಸುಭಾಷ್‌ ಭರಣಿ, ಬೋರ್ಕರ್‌, ಜೀಜಾ ಹರಿಸಿಂಗ್‌ ಮುಂತಾದವರು ಸ್ಪರ್ಧೆಯ ರೇಸಿನಲ್ಲಿದ್ದರು.

ಕಮೀಷನರ್‌ ಯಾರಾದರೆ ಏನಂತೆ ? ಬೆಂಗಳೂರು ನಗರದಲ್ಲಿ ಅಪರಾಧಗಳು ಕಡಿಮೆಯಾಗಬೇಕು. ಕೆಟ್ಟು ಕೇಸೆದ್ದಿರುವ ಸಂಚಾರ ಸಮಸ್ಯೆಗಳು ಹದ್ದುಬಸ್ತಿಗೆ ಬರಬೇಕು. ಠಾಣೆಗಳಲ್ಲಿ ಮೈಉಂಡಿರುವ ಸೋಮಾರಿ ಮತ್ತು ಅದಕ್ಷ ಹಾಗೂ ಭ್ರಷ್ಟ ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಆಡಳಿತವನ್ನು ಚುರುಕುಗೊಳಿಸಬೇಕು. ಹಾಗೆ ಮಾಡುವ ತಾಕತ್ತು ಮರಿಸ್ವಾಮಿ ಅವರಿಗಿದೆ. ನೋಡುವಾ !

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X