ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಮೇಲೆ ಗಣೇಶ; ಯುಎಸ್‌ ಕಂಪನಿಗೆ ಛೀಮಾರಿ

By Staff
|
Google Oneindia Kannada News

ಬೆನಕ ಬೆನಕ ಏಕದಂತ
ಪಚ್ಚಕಲ್ಲು ಪಾಣಿಪೀಠ
ಒಪ್ಪವುಳ್ಳ ವಿಘ್ನೕಶ್ವರನಿಗೆ
ತಪ್ಪದೆ, ಮತ್ತೆ ಇಪ್ಪತ್ತೊಂದು ನಮಸ್ಕಾರಗಳು..

ಹಿಂದೂ ಮತದ ಅನುಯಾಯಿಗಳ ಆರಾಧ್ಯ ದೈವ ಗಣೇಶ. ಆತನೊಲುಮೆ ಇಲ್ಲದನಕ ಒಂದು ಹುಲ್ಲು ಕಡ್ಡಿಯೂ ಅಲುಗಾಡಲಾರದು ! ತೃಣಮಪಿ ನಚಲತಿ !

ಸಕಲ ವಿಘ್ನ ವಿನಾಶಕನೂ, ವಿದ್ಯಾಧಿಪತಿಯೂ ಆಗಿರುವ ಹೇರಂಭನು ಎಲ್ಲರಿಗೂ ಸದ್ಭುದ್ಧಿಯನ್ನು ಕೊಡಲಿ. ಮಂಗಳವನ್ನು ಉಂಟು ಮಾಡಲಿ. ಆತನ ನಿತ್ಯ ಸ್ಮರಣೆಗೋಸ್ಕರ ಗಣೇಶನ ಒಂದು ಅಪೂರ್ವ ಕಲಾಕೃತಿಯನ್ನು ನಿಮ್ಮ ಮನೆಯ ಗೋಡೆಗೆ ನೇತು ಹಾಕಿರಿ.

ಜೈ ಗಣೇಶ.

ಅಮೆರಿಕನ್‌ ಚಪ್ಪಲಿ ತಯಾರಿಕಾ ಕಂಪೆನಿಯಾಂದು ಗಣೇಶನ ಚಿತ್ರಗಳಿರುವ ಹವಾಯಿ ಚಪ್ಪಲಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ಅಲ್ಲಿನ ಭಾರತೀಯರ ಸಿಟ್ಟಿಗೆ ಗುರಿಯಾಗಿದೆ.

ಏಪ್ರಿಲ್‌ ತಿಂಗಳಿಲ್ಲಿ ಬಿಡುಗಡೆಗೊಂಡ ಬೇಸಗೆ ಉತ್ಪನ್ನಗಳ ಅಡಿಯಲ್ಲಿ ಗಣೇಶನ ಚಿತ್ರಗಳ ಫ್ಲಿಪ್‌ಫ್ಲಾಪ್‌ ಹವಾಯಿ ಚಪ್ಪಲಿಗಳಿಗೆ 12. 5 ಡಾಲರ್‌ಗಳು. ಆದರೆ ಚಪ್ಪಲಿಗಳು ಮಾರುಕಟ್ಟೆ ಪ್ರವೇಶಿಸಿದ ಕೂಡಲೇ ಅಲ್ಲಿರುವ ಭಾರತೀಯರ ವಿರೋಧವನ್ನು ಎದುರಿಸುತ್ತಿವೆ. ಅಮೆರಿಕಾದಲ್ಲಿರುವ ಭಾರತೀಯ ಹೋರಾಟ ಸಂಸ್ಥೆ ಇಂಡಿಯಾ ಕಾಸ್‌ ವೆಬ್‌ಸೈಟ್‌ಗೆ ಚಪ್ಪಲಿಯನ್ನು ವಿರೋಧಿಸಿ ಸಾವಿರಾರು ಈ-ಮೇಯ್ಲ್‌ಗಳು ಬಂದಿವೆ.

ಪ್ರಸ್ತುತ ಚಪ್ಪಲಿ ತಯಾರಿಕಾ ಕಂಪೆನಿ ಅಮೆರಿಕನ್‌ ಈಗಲ್ಸ್‌ , ಅಮೆರಿಕಾ ವಾಸಿ ಭಾರತೀಯರ ಬಳಿ ಕ್ಷಮೆ ಯಾಚಿಸಿದೆ. ಗಣೇಶನ ಚಿತ್ರಗಳಿರುವ ಚಪ್ಪಲಿಗಳನ್ನು ವಾಪಾಸು ತೆಗೆದುಕೊಳ್ಳುವುದಾಗಿ ಕಂಪನಿ ಭರವಸೆ ನೀಡಿದೆ.

ಚಪ್ಪಲಿಗಳ ಮೇಲಿರುವ ಚಿತ್ರಗಳನ್ನು ಇನ್ನು ಮುಂದೆ ಬಳಸುವುದಿಲ್ಲ. ಹಿಂದೂ ಸಮುದಾಯದ ಗ್ರಾಹಕರೊಂದಿಗಿನ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಲು ಯತ್ನಿಸುತ್ತೇವೆ ಎಂದು ಕಂಪೆನಿಯ ಉಪಾಧ್ಯಕ್ಷ ನೀಲ್‌ಬುಲ್ಮನ್‌ ಇಂಡಿಯಾ ಕಾಸ್‌ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಇದೇ ಕಂಪನಿ ಹಿಂದೂ ದೇವತೆಗಳ ಚಿತ್ರವನ್ನು ಟಾಯ್ಲೆಟ್‌ ಟೈಲ್ಸ್‌ಗಳ ಮೇಲೆ ಮುದ್ರಿಸಿ, ಅಮೆರಿಕಾ ವಾಸಿ ಭಾರತೀಯರ ವಿರೋಧ ಎದುರಿಸಿತ್ತು.

(ಇನ್ಫೋ ವಾರ್ತೆ)

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X