• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಬಿಆರ್‌ ಹಿಲ್ಸ್‌ ನೋಡಿಬಂದೆ !

By Staff
|

*ಎಚ್‌. ಚಂದ್ರಶೇಖರ, ಬೆಂಗಳೂರು

ಮಕ್ಕಳಿಗೆ ಬೇಸಿಗೆ ರಜೆ. ಇದೇ ಮನೆ, ಇದೇ ಊರು- ರಜೆಯೆಲ್ಲಾದರೂ ಹೊರಗೆ ಹೋಗಬೇಕು ಅನ್ನೋದು ಮಕ್ಕಳ ಹಠ. ಮನೆಯಾಡತಿಗೂ ಒಂದು ಬದಲಾವಣೆ ಬೇಡವೇ. ಆಫೀಸು-ಟ್ರಾಫಿಕ್ಕು-ಧೂಳು-ಮಣ್ಣು ಮಸಿ ಎಂದು ಉತ್ಸಾಹವೆಲ್ಲ ಸೋರಿಹೋಗುವ ಮನೆಯಾಡೆಯನಿಗೂ ಬೇಕು ಹೊಸ ಚೇತನ. ಈ ಲೆಕ್ಕಾಚಾರದೊಂದಿಗೆ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ದೀರ್ಘ ಪಿಕ್‌ನಿಕ್‌ಗೆ ಹೊರಟಿದ್ದು.

ಪಿಕ್‌ನಿಕ್‌ ಎಂದೊಡನೆ ನೆನಪಿಗೆ ಬಂದದ್ದು ಬಿ.ಆರ್‌ ಹಿಲ್ಸ್‌ ಅರ್ಥಾತ್‌ ಬಿಳಿಗಿರಿರಂಗನ ಬೆಟ್ಟ . ಜಂಗಲ್‌ ಲಾಡ್ಜ್‌ನ ಸವಲತ್ತು ಬೇರೆ ಕೈ ಬೀಸಿ ಕರೆಯಿತು. ಡಬ್ಬಲ್‌ ಬೆಡ್‌ರೂಂನ ಪುಟ್ಟ ಮನೆಯಲ್ಲಿ ಹೈಕ್ಲಾಸ್‌ ಬಾತ್‌ ರೂಂ. ಕಾಡ ನಡುವೆ ಸುತ್ತಾಟ, ಊಟ ಗೀಟ ಎಲ್ಲ ಸೇರಿ ದಿನಕ್ಕೆ ಒಂದು ಸಾವಿರ ರುಪಾಯಿ ತೆರಬೇಕು. ಹಣ ತೆತ್ತರೆ ಉಳಿದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಯೇ ಇಲ್ಲ . ರಿಲ್ಯಾಕ್ಸ್‌ ಎಂದರೆ ತಲೆಯಾಳಗೆ ಏನೂ ಇರಬಾರದು. ಬರೀ ಹಸಿರು ಸೊಬಗು ಮತ್ತು ನೆಮ್ಮದಿ.

ಕಾಟೆಜ್‌ನವರ ಈ ಸವಲತ್ತಿನೊಂದಿಗೆ ಸುತ್ತ ಮುತ್ತ ಕಾಡಿನಿಂದ ಬೀಸುವ ತಂಗಾಳಿ ಮತ್ತು ಹಕ್ಕಿಗಳಿಂಚರ ಫ್ರೀ. ಹೀಗೇ ಫ್ರೀಯಾಗಿರುವುದೇ ಹೆಚ್ಚು ರುಚಿಯಾಗಿರುವುದು. ಸುಡು ಬೇಸಿಗೆಯಲ್ಲಿ ಬಿಆರ್‌ ಹಿಲ್ಸ್‌ ಇನ್ನಷ್ಟು ಆಪ್ಯಾಯಮಾನವಾಗಿರುತ್ತದೆ.

ಮೊದಲ ದಿನ ಬೆಳಗಿನ ಚುಮು ಚುಮು ನಿದ್ದೆಯನ್ನು ಮಿಸ್‌ ಮಾಡಿಕೊಳ್ಳಲು ಇಷ್ಟವಿಲ್ಲ . ಸಂಜೆ ಹೊತ್ತಿಗೆ ಸುತ್ತಾಟ ಆನೆ ಮೇಲೆ ಸವಾರಿ. ಭಲೆ ಮಜಾ. ಆನೆ ಮೇಲೆ ಕುಳಿತು ಊರು ನೋಡುವ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ. ಈ ಬೆಟ್ಟದಲ್ಲಿ ಆನೆಗಳ ಸಂಸಾರವೇ ಇದೆ. ಆ ಆನೆಗಳಿಗೆ ಸುಂದರ ಹೆಸರುಗಳು. ಕವಿತಾ, ಆಕೆಯ ಮಗರಾಯ, ಮತ್ತೆ ಆಕೆಯ ಸ್ನೇಹಿತರು.. ಎಲ್ಲಾ ಹೆಸರುಗಳು ನೆನಪಿಗೆ ಬರುತ್ತಿಲ್ಲ . ಈ ಆನೆಗಳು ಪ್ರವಾಸಿಗರನ್ನು ಹೊತ್ತೊಯ್ಯಲಿಕ್ಕೆಂದೇ ತರಬೇತಿ ಹೊಂದಿವೆ.

ಆನೆ ಮೇಲೆ ಕೂತು ಸ್ವಲ್ಪ ದೂರ ಹೋದಾಗ ಸೋಲಿಗ ಜನಾಂಗದವರು ಕಣ್ಣಿಗೆ ಬೀಳುತ್ತಾರೆ. ಅವರ ಸಂಸ್ಕೃತಿ, ಜೀವನ ಪದ್ಧತಿ ಕುತೂಹಲದ ವಿಷ್ಯ. ಸೋಲಿಗರು ಶತಮಾನಗಳಿಂದ ಇಲ್ಲಿ ವಾಸಿಸುತ್ತಿದ್ದಾರಂತೆ. ಕಾಡ ನಡುವೆ ಅರಳುವ ಅವರ ಬದುಕು, ಆ ಹಳ್ಳಿಗಳನ್ನು ನೋಡುವುದು ಚೆಂದವೋ ಚೆಂದ.

ಮುಂದೆ ಹೋದ ಹಾಗೆಯೇ ಕಾಡು ದಟ್ಟವಾಗುತ್ತಾ ಹೋಗುತ್ತದೆ. ನೀವು ಲಕ್ಕಿಯಾಗಿದ್ದರೆ ಅಲ್ಲೊಂದಷ್ಟು ಜಿಂಕೆ ಸಂಸಾರ, ಇಲ್ಲೊಂದು ಕಾಡು ಕೋಣ ಕಾಣಸಿಗಬಹುದು. ನಾವಂತೂ ಅದೃಷ್ಟವಂತರಾಗಿದ್ದೆವು. ಮತ್ತಷ್ಟು ಮುಂದೆ ಹೋದರೆ ಯಾವುದೋ ಪೊದರಿನೆಡೆಯಲ್ಲಿ ಕರಡಿಯಾಂದು ನಿಮ್ಮತ್ತಲೇ ನೋಡುತ್ತಿರಬಹುದು.

ಎರಡನೇ ದಿನ- ಬಿಳಿಗಿರಿ ರಂಗನ ಬೆಟ್ಟದಿಂದ ನಾಲ್ಕು ಕಿಲೋಮೀಟರ್‌ ದೂರ ಇರುವ ದೊಡ್ಡ ಸಂಪಿಗೆಗೆ ಹೋದೆವು. ಅಲ್ಲೊಂದು ಹೊಸ ಲೋಕ. ದೊಡ್ಡ ಸಂಪಿಗೆ ಎಂಬ ಪ್ರದೇಶದಲ್ಲಿ ಇರುವ ಮರಗಳು ಜಗತ್ತಿನ ಅತ್ಯಂತ ಪುರಾತನ ಮರಗಳು ಎಂಬ ಅಗ್ಗಳಿಕೆ ಪಡೆದಿವೆ. ಬೃಹತ್‌ ಆಕಾರದ ಸಂಪಿಗೆ ಮರಗಳು ಇಲ್ಲಿವೆ. ಆ ಮರಗಳು ಸುಮಾರು ಸಾವಿರ ವರ್ಷ ಪ್ರಾಯದವು ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಸುಂದರವಾದ ಎತ್ತರ ಗಂಗನಚುಂಬಿ ಮರಗಳು. ಈ ಮರಗಳು ಮಹಾಭಾರತದ ಕಾಲದಿಂದಲೂ ಇಲ್ಲಿವೆ ಎಂಬುದು ನಂಬಿಕೆ. ಆ ಮರಗಳ ಎತ್ತರ ನೋಡಿದರೆ ಅಲ್ಲಿನ ಜನರ ನಂಬಿಕೆ ನಿಜವಿದ್ದರೂ ಇರಬಹುದು ಎನಿಸುತ್ತದೆ.

ಮೈಮರೆತೀರಿ... ಎಚ್ಚರೆಚ್ಚರ...

ಈ ದಟ್ಟ ಕಾಡಿನಲ್ಲಿ ಕಾಡು ಪ್ರಾಣಿಗಳು ತುಂಬಾ ಇವೆ. ಕಾಡಾನೆಗಳ ಗುಂಪೇ ಇಲ್ಲಿ ಅಡ್ಡಾಡುತ್ತವೆ. ಆದ್ದರಿಂದ ರೌಂಡ್ಸ್‌ಗೆ ಹೋಗುವಾಗ ತುಂಬಾ ಜಾಗರೂಕತೆಯಿಂದ ಇರಬೇಕು. ಕಾಡಿನಲ್ಲಿ ನೋಡುವುದಕ್ಕೆ ಬರೀ ಪ್ರಾಣಿಗಳಷ್ಟೇ ಇರುವುದಿಲ್ಲ. ಆ ಮರ ನೋಡಿ, ಹೇಗೆ ಬೆಳೆದಿದೆ ಅಂತ. ಎತ್ತರೆತ್ತರ ಮರಗಳು. ಕ್ರಾಪಿಂಗ್‌ ಕತ್ತರಿಗೆ ಸಿಕ್ಕದೆ ಸಹಜವಾಗಿ ಬೆಳೆದ ಸುಂದರ ಮರಗಳು.

‘ಇಲ್ಲಿ ಯಾರೂ ಟ್ರೀ ಕ್ರಾಪಿಂಗ್‌ ಮಾಡುವುದಿಲ್ಲ. ಆದರೂ ಆ ಮರಗಳು ಹೇಗೆ ಸುಂದರ ಆಕಾರ ಪಡೆಯುತ್ತವೆ..’ ಅಂತೆಲ್ಲ ನನ್ನ ಹೆಂಡತಿ ಹಸಿರ ನೋಡಿದ ಖುಷಿಯಲ್ಲಿ ಭಾಷಣ ಮಾಡುತ್ತಿದ್ದಳು. ನನಗೂ ಹೌದು ಅನಿಸಿತು. ರೂಮಿಗೆ ಬಂದೆವು. ಕಣ್ಣು ಮುಚ್ಚಿದರೆ ಹಸಿರು ಮರ, ಬೆಟ್ಟ ಗುಡ್ಡ... ಪಚ್ಚೆ ಸಿರಿ.

ಈ ಹಕ್ಕಿಗಳಿಂಚರ, ಪ್ರಾಣಿಗಳ ಕೂಗು, ಮರಗಳ ಸರಬರ, ಮೊಂಟೆ ಹುಳುವಿನ ಟಿರಿಟಿರಿ ಸದ್ದು ಕೇಳುವುದಕ್ಕೂ ಕಾಸು ಕೊಡಬೇಕಾದ ಕಾಲ ಬಂತಲ್ಲಪ್ಪಾ ಅಂತ ಹೆಂಡತಿ ಅವಳದೇ ವಾದ ಮಂಡಿಸುತ್ತಿದ್ದಳು. ಕಾಸು ಕೊಟ್ಟಾದರೂ ನೋಡುವುದಕ್ಕೆ ಅಂತ ಇಂತಹುದೊಂದು ಜಾಗ ಇದೆಯಲ್ಲಾ ಅಂತ ನಾನೆಂದೆ. ಮಕ್ಕಳಿಗೆ ಇಂಥ ವಾದಗಳೆಲ್ಲಾ ಅರ್ಥವಾಗುವುದಿಲ್ಲ ; ಆನಂದಿಸುವುದಷ್ಟೇ ಅವರಿಗೆ ಗೊತ್ತು !

ನೀವೂ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಬೇಕಾ ?

ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ 100 ಕಿಮೀ ಪ್ರಯಾಣ. ಮೈಸೂರಿನಿಂದಾದರೆ 85. ಕಿಮೀ. ದೂರ. ಮೈಸೂರಿನಿಂದ ದಿನಕ್ಕೆರಡು ಬಸ್‌ ಬಿಳಿಗಿರಿ ರಂಗನ ಬೆಟ್ಟಕ್ಕೆ ಓಡಾಡುತ್ತವೆ.

ಈ ಬೆಟ್ಟದ ಪಕ್ಕ ವಸತಿ ವ್ಯವಸ್ಥೆಗಳು ಸಾಕಷ್ಟಿವೆ. ಜಂಗಲ್‌ ಲಾಡ್ಜ್‌ಗಳು, ವಸತಿ ಗೃಹಗಳು ಪ್ರವಾಸಿಗರಿಗೆ ಅನುಕೂಲಗಳನ್ನು ಕಲ್ಪಿಸಿವೆ. ಬಿಳಿಗಿರಿ ರಂಗನ ಬೆಟ್ಟಕ್ಕೆ ಟ್ರಿಪ್‌ ಹಾಕುವವರು ಅಲ್ಲೇ ಪಕ್ಕದಲ್ಲಿ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನವನ್ನೂ ನೋಡಬಹುದು. ಸಫಾರಿ ವ್ಯವಸ್ಥೆಯೂ ಇರುವುದರಿಂದ ಪ್ರಾಣಿಗಳನ್ನು ನೋಡುವುದಕ್ಕೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಬೇಕಾಗಿಲ್ಲ. ಲಾಡ್ಜ್‌ ವತಿಯಿಂದಲೇ ಎಲ್ಲ ಸೌಕರ್ಯಗಳೂ ಲಭ್ಯ.

ಬಿಳಿಗಿರಿ ರಂಗನ ಬೆಟ್ಟದ ಪಕ್ಕ ಇರುವ ಸಕಲ ವ್ಯವಸ್ಥೆಗಳೂ ಇರುವ ಲಾಡ್ಜ್‌ E-mail: junglelodges@vsnl.com

Booking : Bangalore H.O. 080-5597021 / 24

B.R.Hills Local : 08226-23182

Post your views

ಪೂರಕ ಓದಿಗೆ

ಬೇಸಿಗೆಗೊಂದು ರಮ್ಯ ಗಿರಿತಾಣ

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more