ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು- ಕೊಡಗಿನಲ್ಲಿ ಸಾರ್ಸ್‌ ಸಾರ್‌ ಸಾರ್ಸ್‌ ?

By Staff
|
Google Oneindia Kannada News

ಬೆಂಗಳೂರು : ವಿಶ್ವದಾದ್ಯಂತ ತಲ್ಲಣ ಉಂಟು ಮಾಡಿರುವ ಸಾರ್ಸ್‌ ರೋಗಾಣು ಈಗಾಗಲೇ ಕರ್ನಾಟಕವನ್ನೂ ಪ್ರವೇಶಿಸಿರುವ ಸಾಧ್ಯತೆಯಿದ್ದು - ಬೆಂಗಳೂರು ಹಾಗೂ ಕೊಡಗುಗಳಲ್ಲಿ ಸಾರ್ಸ್‌ ಶಂಕಿತ ರೋಗಿಗಳು ಪತ್ತೆಯಾಗಿದ್ದಾರೆ.

ಕೆನಡಾದಿಂದ ಬೆಂಗಳೂರಿಗೆ ಆಗಮಿಸಿರುವ ವ್ಯಕ್ತಿಯಾಬ್ಬರು ತೀವ್ರ ಜ್ವರದ ಕಾರಣ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದು , ಆತನಿಗೆ ಸಾರ್ಸ್‌ ಸೋಂಕು ತಗುಲಿರುವ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಈ ರೋಗಿಯ ಕುರಿತು ಮಾಹಿತಿ ರವಾನಿಸಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ರೋಗಿ ಸುರಕ್ಷಿತವಾಗಿದ್ದು , ರೋಗಪತ್ತೆ ಕಾರ್ಯ ನಡೆಯುತ್ತಿದೆ ಎಂದು ಮಣಿಪಾಲ್‌ ಆಸ್ಪತ್ರೆಯ ನಿರ್ದೇಶಕರಾದ ಎ.ಮಾಲತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಡಿಕೇರಿ ವರದಿ :

ಶಾರ್ಜಾದಿಂದ ಬೆಂಗಳೂರು ಮಾರ್ಗವಾಗಿ ಕೊಡಗಿನ ಚೆಟ್ಟಳ್ಳಿಗೆ ಬಂದಿರುವ ವ್ಯಕ್ತಿಯೋರ್ವನಿಗೆ ಸಾರ್ಸ್‌ ಸೋಂಕು ತಗುಲಿರುವ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಕೊಪ್ಪ , ಬೈಲುಕೊಪ್ಪ ಪ್ರದೇಶಗಳಲ್ಲಿ ಟಿಬೆಟಿಯನ್ನರು ಬೀಡುಬಿಟ್ಟಿದ್ದು , ಈ ಪ್ರದೇಶಗಳಿಗೆ ಸಾವಿರಾರು ಹೆಚ್ಚಿನ ಸಂಖ್ಯೆಯ ವಿದೇಶಿಯರು ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಮಗ್ರ ತಪಾಸಣೆ ಕೈಗೊಳ್ಳಲು ವೈದ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X