ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆಗಳಿಗೆ ಅಸ್ತು, ಲಾರಿ ಸ್ಟ್ರೈಕ್‌ ಮುಗೀತು

By Staff
|
Google Oneindia Kannada News

ನವದೆಹಲಿ: ಲಾರಿ ಮಾಲಿಕರ ಸಂಘದ ಹತ್ತು ಬೇಡಿಕೆಗಳಲ್ಲಿ ಒಂಭತ್ತು ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ದೇಶವ್ಯಾಪೀ ಲಾರಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.

ಡೀಸೆಲ್‌ ಬೆಲೆ ಶೀಘ್ರ ಕಡಿತವೂ ಸೇರಿದಂತೆ ಒಟ್ಟು 9 ಬೇಡಿಕೆಗಳಿಗೆ ಸರಕಾರ ಒಪ್ಪಿಕೊಂಡಿದ್ದು, ರಸ್ತೆ ತೆರಿಗೆ ರದ್ಧತಿ ಬೇಡಿಕೆಯನ್ನು ನಿರಾಕರಿಸಿದೆ. ತೈಲ ಬೆಲೆ ಪರಿಷ್ಕರಣೆಗೆ ನಿಗದಿತ ದಿನ ಏಪ್ರಿಲ್‌ 30 ಆಗಿದ್ದರೂ , ತೈಲ ಕಂಪೆನಿಗಳು ಅದಕ್ಕೂ ಮುಂಚೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸಲಿವೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಎಎಂಟಿಸಿ ಅಧ್ಯಕ್ಷ ಬಿ. ಎನ್‌. ಧುಮಲ್‌ ತಿಳಿಸಿದ್ದಾರೆ.

ರಾಜ್ಯದಲ್ಲಿಯೂ ಲಾರಿ ಮುಷ್ಕರ ಅಂತ್ಯಗೊಂಡಿದ್ದು ಲಾರಿಗಳ ಓಡಾಟ ಬುಧವಾರ ಸಂಜೆಯಿಂದ ಆರಂಭವಾಗಿದೆ. ಸರಕು ಸಾಗಾಣಿಕೆ ಕಾರ್ಯವೂ ಮುಂದುವರೆದಿದೆ. ಮಾರುಕಟ್ಟೆಗಳಲ್ಲಿ , ಸಗಟು ವ್ಯಾಪಾರ ಕೇಂದ್ರಗಳಲ್ಲಿ ಕೂಲಿಗಳಿಗೆ ಬಿಡುವಿಲ್ಲದ ಕೆಲಸ ದೊರೆತಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X