ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಸಾಫ್ಟ್‌ವೇರ್‌ ರಫ್ತು ಶೇ.25ರಷ್ಟು ಹೆಚ್ಚಳ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಅಗ್ರಮಾನ್ಯ ರಾಜ್ಯವಾದ ಕರ್ನಾಟಕ, 2002-03ನೇ ಸಾಲಿನ ಸಾಫ್ಟ್‌ವೇರ್‌ ರಫ್ತಿನಲ್ಲಿ ಪ್ರತಿಶತ 25ರ ಹೆಚ್ಚಳ ಸಾಧಿಸಿದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ 2002-03 ನೇ ಸಾಲಿನಲ್ಲಿ ರಾಜ್ಯ ಶೇ.25ರ ಹೆಚ್ಚಳ ಸಾಧಿಸಿದೆ. 12,350 ಕೋಟಿ ರುಪಾಯಿ ಸಾಫ್ಟ್‌ವೇರ್‌ ರಫ್ತನ್ನು ಕರ್ನಾಟಕ ಗಳಿಸಿದೆ ಎಂದು ಬೆಂಗಳೂರಿನಲ್ಲಿರುವ ಭಾರತದ ಸಾಫ್ಟ್‌ವೇರ್‌ ಪಾರ್ಕ್‌ ನಿರ್ದೇಶಕ ಬಿ.ವಿ.ನಾಯ್ಡು ಬುಧವಾರ (ಏ.23) ಸುದ್ದಿಗಾರರಿಗೆ ತಿಳಿಸಿದರು.

41 ಕಂಪನಿಗಳ ಸೇರ್ಪಡೆಯಾಂದಿಗೆ ಬಿಪಿಒ ಘಟಕ (business process outsourcing) ಅತ್ಯಂತ ವೇಗದ ಬೆಳವಣಿಗೆ ಹೊಂದಿದೆ. 988 ಕೋಟಿ ರುಪಾಯಿ ರಫ್ತು ಸಾಧಿಸಿರುವ ಬಿಪಿಒ, ರಾಜ್ಯದಲ್ಲಿ 18 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದೆ ಎಂದು ನಾಯ್ಡು ತಿಳಿಸಿದರು.

ಭಾರತದ ಒಟ್ಟು ಸಾಫ್ಟ್‌ವೇರ್‌ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.28ರಿಂದ 30ರಷ್ಟಿದೆ. ಪ್ರತಿ ಹದಿನೈದು ದಿನದಲ್ಲಿ ಬೆಂಗಳೂರು ಮೂರು ವಿದೇಶಿ ಕಂಪನಿಗಳನ್ನು ಆಕರ್ಷಿಸುತ್ತಿದ್ದು , 2002-03ನೇ ಸಾಲಿನಲ್ಲಿ ಒಟ್ಟು 79 ಹೊಸ ಕಂಪನಿಗಳು ರಾಜ್ಯದಲ್ಲಿ ನೋಂದಾವಣೆ ಹೊಂದಿವೆ. ಈ ಕಂಪನಿಗಳು 1,025 ಕೋಟಿ ರುಪಾಯಿ ಬಂಡವಾಳ ಹೂಡಿವೆ ಎಂದರು.

ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಅಗ್ಗಳಿಕೆಯನ್ನು ಉಳಿಸಿಕೊಂಡಿದೆ ಎಂದು ನಾಯ್ಡು ಬಣ್ಣಿಸಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X