ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಷ್ಟಗಿ: ಮನೆ ಮನೆಯಲ್ಲಿ ಮಲೇರಿಯಾ, 4 ಸಾವು

By Staff
|
Google Oneindia Kannada News

ಕುಷ್ಟಗಿ: ಇಲ್ಲಿನ ಕಣ್ಣಾಳದಲ್ಲಿ ಎರಡು ತಿಂಗಳ ಹಿಂದೆ ಕಾಣಿಸಿಕೊಂಡ ಮಲೇರಿಯಾ ಈಗಾಗಲೇ ನಾಲ್ವರ ಬಲಿ ತೆಗೆದುಕೊಂಡಿದೆ.

ಇನ್ನಷ್ಟು ಮಂದಿಗೆ ಮಲೇರಿಯಾ ಅಂಟಿರುವುದು ಪರೀಕ್ಷೆಯಿಂದ ಸಾಬೀತಾಗಿದೆ.

ಹಳ್ಳಿಯಲ್ಲಿ ಸುಮಾರು 70 ಮನೆಗಳಿವೆ. 600 ಮಂದಿ ನಿವಾಸಿಗಳಿದ್ದಾರೆ. ಗ್ರಾಮಸ್ಥರ ಪ್ರಕಾರ ಇಲ್ಲಿನ ಪ್ರತಿಯಾಂದು ಮನೆಯಲ್ಲಿ ಒಬ್ಬ ವ್ಯಕ್ತಿಗಾದರೂ ಮಲೇರಿಯಾ ಸೋಂಕು ತಗುಲಿದೆ.

ಎರಡು ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಹರಡುತ್ತಿರುವ ಮಲೇರಿಯಾವನ್ನು ಪತ್ತೆ ಹಚ್ಚಿ ಔಷಧಿ ವಿತರಿಸಲಾಗಿದೆ. ಆದರೆ ಹರಡುತ್ತಿರುವ ಮಲೇರಿಯಾ ನಿಯಂತ್ರಣಕ್ಕೆ ಬಂದಿಲ್ಲ.

ತಾವರೆಗೆರೆ ಆರೋಗ್ಯ ಕೇಂದ್ರ 400ಕ್ಕೂ ಹೆಚ್ಚು ಮಂದಿಯ ರಕ್ತ ಪರೀಕ್ಷೆ ನಡೆಸಿದೆ. ಹೆಚ್ಚಿನವರಿಗೆ ಮಲೇರಿಯಾ ಇರುವುದು ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಮಲೇರಿಯಾ ಸೋಂಕದಂತೆ ಔಷಧಿ ನೀಡಲಾಗಿದೆ. ಹಳ್ಳಿಯಲ್ಲಿ ಡಿಡಿಟಿ ಸಿಂಪಡಿಸಲಾಗಿದೆ. ಇವೆಲ್ಲದರ ಹೊರತಾಗಿಯೂ ಪ್ರತಿ ದಿನ ಮಲೇರಿಯಾ ಸೋಂಕು ತಗುಲಿದ ಹೊಸ ರೋಗಿಗಳು ಆಸ್ಪತ್ರೆಗೆ ಬರುತ್ತಲೇ ಇದ್ದಾರೆ. ಇಷ್ಟು ತೀವ್ರವಾಗಿ ಮಲೇರಿಯಾ ಹರಡುತ್ತಿರುವುದರ ಹಿಂದಿರುವ ಕಾರಣವೇನೆಂಬುದು ಹಳ್ಳಿಯ ವೈದ್ಯರಿಗೆ ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X