• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಯ್ಸಳೋತ್ಸವದಲ್ಲಿ ಹೇಮಾಮಾಲಿನಿ- ಶೋಭನಾ ನಾಟ್ಯ

By Staff
|

ಹಾಸನ : ಏಪ್ರಿಲ್‌ 26ರ ಶನಿವಾರದಿಂದ ನಡೆಯುವ ‘ಹೊಯ್ಸಳೋತ್ಸವ’ಕ್ಕೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಕಾರ್ಯಕ್ರಮದ ಉದ್ಘಾಟನೆ ಅಥವಾ ಭಾಷಣ ಗೀಷಣಕ್ಕಿಂತಲೂ ಜಿಲ್ಲೆಯ ಮಂದಿಗೆ ಕನಸಿನ ಕನ್ಯೆ ಹೇಮಾಮಾಲಿನಿ ಹಾಗೂ ನಟಿ ಶೋಭನಾರನ್ನು ನೋಡುವ ತವಕ. ಅದಕ್ಕಾಗಿ ಹೊಯ್ಸಳೋತ್ಸವವನ್ನು ಪ್ರತಿಯಾಬ್ಬರೂ ಎದುರು ನೋಡುತ್ತಿದ್ದಾರೆ.

ಶೋಭನಾ ಗೊತ್ತಲ್ಲ . ಮೊನ್ನೆ ಮೊನ್ನೆ ‘ಮಿತ್ರ್‌ ಮೈ ಫ್ರೆಂಡ್‌’ ಚಿತ್ರದಲ್ಲಿ ಮಿಂಚಿದವರು. ಅತ್ಯುತ್ತಮ ನಟಿ ಎಂಬ ರಾಷ್ಟ್ರ ಪ್ರಶಸ್ತಿಯನ್ನೂ ಸೀನಿಯರ್‌ ನಟಿ ತಬು ಜೊತೆ ಹಂಚಿಕೊಂಡವರು. ಹೊಯ್ಸಳೋತ್ಸವದಲ್ಲಿ ಶೋಭನಾ ಮತ್ತು ಅವರ ತಂಡ ಭರತನಾಟ್ಯಂ ಪ್ರದರ್ಶಿಸಲಿದೆ.

ಅಂದಹಾಗೆ, ಉತ್ಸವದ ಮೊದಲ ದಿನದ ಕಾರ್ಯಕ್ರಮ ಹಳೇಬೀಡಿನಲ್ಲಿ ಆರಂಭವಾಗುವುದು. ನಟಿ ಶೋಭನಾ ನೇತೃತ್ವದ ತಂಡದ ನೃತ್ಯ ಹಳೇಬೀಡಿನ ಪ್ರಕೃತಿ ಹಾಗೂ ಶಿಲ್ಪ ಸೌಂದರ್ಯದ ನಡುವೆ ಮೂಡಿ ಬರಲಿದೆ.

ಹೇಮಾಮಾಲಿನಿ ಕೂಡ ನೃತ್ಯ ಪ್ರದರ್ಶನ ನೀಡುವರು. ಹೊಯ್ಸಳೋತ್ಸವದ ಸಮಾರೋಪದಂದು(ಏ. 29), ಹೇಮಮಾಲಿನಿ ಭರತ್ಯ ನಾಟ್ಯ ಹಾಗೂ ದುರ್ಗಾ ನೃತ್ಯ ಪ್ರದರ್ಶಿಸುವರು.

ಈ ನಡುವೆ ಹೊಯ್ಸಳೋತ್ಸವದ ಅಂಗವಾಗಿ ಬೇಲೂರಿನಲ್ಲಿ ಕುನ್ನಕುಡಿ ವೈದ್ಯನಾಥನ್‌ ಅವರಿಂದ ವಯಲಿನ್‌ ವಾದನ, ಶ್ರವಣ ಬೆಳಗೊಳದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಂದ ಹಾಡುಗಳು ಪ್ರೇಕ್ಷಕರನ್ನು ರಂಜಿಸಲಿವೆ. ವಸುಂದರಾ ದೊರೆಸ್ವಾಮಿ ಹಾಗೂ ಪುತ್ತೂರು ನರಸಿಂಹನಾಯಕ್‌ ಕೂಡ ಹೊಯ್ಸಳೋತ್ಸವದಲ್ಲಿ ಭಾಗವಹಿಸುವರು.

ಕಾರ್ಯಕ್ರಮ ಉದ್ಘಾಟನೆಯ ಹೊಣೆ ಪಿಡಬ್ಲ್ಯೂಡಿ ಸಚಿವ ಧರಮ್‌ಸಿಂಗ್‌ ಹೆಗಲಿಗೆ ಬಿದ್ದಿದೆ. ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಅತಿಥಿಗಳ ಸಾಲಿನಲ್ಲಿರುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more