ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರ ಮಹಿಳಾ ವಿವಿಗೆ ಯಾರ ಹೆಸರಿಡಬೇಕು ?

By Staff
|
Google Oneindia Kannada News

ಬಿಜಾಪುರ: ರಾಜ್ಯದ ಪ್ರಥಮ ಮಹಿಳಾ ವಿಶ್ವ ವಿದ್ಯಾಲಯವು ಜೂನ್‌ 15ರಿಂದ ಬಿಜಾಪುರದಲ್ಲಿ ಆರಂಭವಾಗಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗುವ ಈ ವಿವಿಯಲ್ಲಿ 10 ಕೋರ್ಸುಗಳನ್ನು ಪ್ರಾರಂಭಿಸಲಾಗುವುದು. ಅಗತ್ಯವಿರುವ 100 ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಬೇರೆ ವಿವಿಗಳಿಂದ ಹೆಚ್ಚುವರಿ ಸೇವೆ ಮೇಲೆ ಕರೆಸಿಕೊಳ್ಳಲಾಗುವುದು ಎಂದು ವಿವಿ ಸ್ಥಾಪನೆಗೆ ಬೇಕಾಗುವ ಕಟ್ಟಡಗಳ ಪರಿಶೀಲನೆ ನಡೆಸಿದ ರಾಜ್ಯ ಮಹಿಳಾ ವಿವಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಜಾಮದಾರ್‌ ಸುದ್ದಿಗಾರರಿಗೆ ತಿಳಿಸಿದರು.

ವಿವಿ ಸ್ಥಾಪನೆಯ ವಿಷಯ ಸ್ಪಷ್ಟವಾಗುತ್ತಲೇ ವಿವಿಗೆ ಯಾರ ಹೆಸರಿಡಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಮಹಿಳಾ ವಿವಿಗೆ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹೆಸರು ನಾಮಕರಣ ಮಾಡಬೇಕು ಎಂದು ವಕ್ಫ್‌ ಸಚಿವ ಎಂ. ಎಲ್‌. ಜಮಾದಾರ್‌ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಆದರೆ ಈ ಸಲಹೆಗೆ ರಾಜ್ಯವ್ಯಾಪೀ ವಿರೋಧ ವ್ಯಕ್ತವಾಗಿದ್ದು, ಬಿಜಾಪುರದ ವಿವಿಗೆ ಅಕ್ಕ ಮಹಾದೇವಿ ಅಥವಾ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿಡಬೇಕು ಎಂಬ ಸಲಹೆ ಮಹಿಳಾ ಸಾಹಿತ್ಯ ವಲಯದಿಂದ ವ್ಯಕ್ತವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X