• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾನ್ಸರ್‌ನಿಂದ ತಪ್ಪಿಸಿಕೊಂಡ, ಸಾವು ಬೆಂಬಿಡಲಿಲ್ಲ !

By Staff
|

ಹೆಸರು : ಸಹಿಲ್‌ ಅಹಮದ್‌

ವಯಸ್ಸು : 11

ವಾಸ : ಅಮೆರಿಕ

ಮೇಲಿನ ವಿವರಗಳ ನಿವಾಸಿ ಭಾರತೀಯ ಬಾಲಕ ಸಹಿಲ್‌ ಅಹಮದ್‌ ಈಗಿಲ್ಲ . ಇಷ್ಟು ಹೇಳಿದ ಮಾತ್ರಕ್ಕೆ ಕಥೆ ಮುಗಿಯುವುದಿಲ್ಲ . Denver Post ಪ್ರಕಟಿಸಿರುವ ಕಥೆಯೇ ಬೇರೆ; ಅದೆಂದರೆ-

ಸಹಿಲ್‌ ಲ್ಯುಕೇಮಿಯಾದಿಂದ ಬಳಲುತ್ತಿದ್ದ . ಕ್ಯಾನ್ಸರ್‌ನ ದವಡೆಯಿಂದ ಎಂತಾದರೂ ಪಾರಾಗಬೇಕು, ಚೆಂದದೊಂದು ಬದುಕನ್ನು ತನ್ನದಾಗಿಸಿಕೊಳ್ಳಬೇಕು ಎಂಬುದು ಹನ್ನೊಂದರ ಹುಡುಗನ ಕನಸು. ಐದು ವರ್ಷಗಳ ಕಾಲ ಕ್ಯಾನ್ಸರ್‌ನೊಂದಿಗೆ ಹೋರಾಡಿದ ಸಹಿಲ್‌, ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಂಡಿದ್ದ .

ಕನಸುಗಳು ಮರಳಿದ್ದವು. ಸಹಿಲ್‌ ವೀಡಿಯಾ ಗೇಮ್ಸ್‌ ಜೊತೆ ಮೈಮರೆಯುತ್ತಿದ್ದ. ಬದುಕಿನ ಬಂಡಿ ಸರಿಯಾದ ದಾರಿಗೆ ಸೇರಿತು ಅನ್ನುವಷ್ಟರಲ್ಲಿ ಈ ಬಾಲಕನನ್ನು ಬಂದೂಕಿನ ಗುಂಡಿನ ರೂಪದಲ್ಲಿ ಸಾವು ಸೆಳೆದೊಯ್ಯಬೇಕೆ ?

ಆಟವಾಡುತ್ತಿದ್ದಾಗ ಗೆಳೆಯನ ಬಳಿಯಿದ್ದ ಸೆಮಿ ಆಟೊಮ್ಯಾಟಿಕ್‌ ಗನ್‌ನಿಂದ ಅಚಾನಕ್ಕಾಗಿ ಸಿಡಿದ ಗುಂಡು ಸಹಿಲ್‌ನ ಹೋರಾಟದ ಬದುಕಿಗೆ ಕೊನೆ ಹೇಳಿತು. ಸಹಿಲ್‌ ಕ್ಯಾನ್ಸರ್‌ನ ವಿರುದ್ಧ ವಿಜಯಿಯಾಗಿದ್ದ ; ಆದರೆ ಬಂದೂಕಿನ ಎದುರು ಅವರ ಬದುಕು ನುಚ್ಚುನೂರಾಗಿತ್ತು .

ಈ ದುರ್ಘಟನೆ ನಡೆದದ್ದು - ಏಪ್ರಿಲ್‌ 19ರ ಶುಕ್ರವಾರ.

ಘಟನೆ ನಡೆದದ್ದು ಹೀಗೆ-

ಅಕ್ಕ ಶಹನಾ(18) ಜೊತೆ ಸಹಿಲ್‌ ಗೆಳೆಯನ ಮನೆಗೆ ತೆರಳಿದ್ದ . 15ರ ವಯಸ್ಸಿನ ಗೆಳೆಯನೊಂದಿಗೆ ಆಟವಾಡುತ್ತಿದ್ದಾಗ ಮನೆಯಲ್ಲಿ ಗನ್‌ ಕಣ್ಣಿಗೆ ಬಿತ್ತು . ಬಂದೂಕು ಖಾಲಿಯಾಗಿರಬೇಕು ಎಂದು ಭಾವಿಸಿದ ಹುಡುಗರು, ತುಪಾಕಿಯನ್ನು ಆಟಿಕೆಯಾಗಿ ಬಳಸತೊಡಗಿದರು. ಸಹಿಲನತ್ತ ಗುರಿ ಮಾಡಿದ ಗೆಳೆಯ ಟ್ರಿಗರ್‌ ಎಳೆದ. ಖಾಲಿ ಎಂದುಕೊಂಡಿದ್ದ ಗನ್‌ ಭರ್ತಿಯಿತ್ತು ; ಗುಂಡು ಹಾರಿತು. ಡಾಕ್ಟರ್‌ ಬರುವಷ್ಟರಲ್ಲಿ ಸಹಿಲ್‌ ಕೊನೆಯುಸಿರೆಳೆದಿದ್ದ .

ಕ್ಯಾನ್ಸರ್‌ನಿಂದ ಗುಣಪಡಿಸಲೆಂದೇ ಸಹಿಲ್‌ನನ್ನು ಭಾರತದಿಂದ ಅಮೆರಿಕಾಗೆ ಕರೆತರಲಾಗಿತ್ತು . ಸಹಿಲ್‌ ಕ್ಯಾನ್ಸರ್‌ನಿಂದೇನೋ ತಪ್ಪಿಸಿಕೊಂಡ. ಆದರೆ, ಸಾವಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ ಎಂದು ಶೋಕಿಸುತ್ತಾರೆ, ಶಕಿಲನ್‌ ಅಂಕಲ್‌- ಮ್ಯಾಕ್ಸ್‌ ಆಲಿ.

ಸಹಿಲನತ್ತ ತಿಳಿಯದೇ ಗುಂಡು ಹಾರಿಸಿದ ಬಾಲಕನ ಮನೆಯವರು ಕೂಡ ಮೊನ್ನೆ ಭಾನುವಾರ ಸಹಿಲನ ಮನೆಗೆ ಬಂದಿದ್ದರು. ದುಃಖದಲ್ಲಿ ಅವರೂ ಭಾಗಿಗಳು.

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಎನ್ನುವ ಡಿ.ವಿ.ಗುಂಡಪ್ಪನವರ ಮಾತು ನೆನಪಾಗುತ್ತದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more