• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಕ್ಟರ್‌ ಆದರು ಇನ್ಫೋಸಿಸ್‌ ನಾರಾಯಣಮೂರ್ತಿ

By Staff
|

ಶ್ರೀನಗರ : ಪಾಕಿಸ್ತಾನದತ್ತ ಮತ್ತೆ ಸ್ನೇಹಹಸ್ತ ಚಾಚಿರುವ ಇಳಿವಯಸ್ಸಿನ ಪ್ರಧಾನಿ ವಾಜಪೇಯಿ ವೇದಿಕೆಯಲ್ಲಿದ್ದರು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮಹಮದ್‌ ಸಯೀದ್‌ ಹಾಜರಿದ್ದರು.

ಅದು ಕಾಶ್ಮೀರ ವಿಶ್ವ ವಿದ್ಯಾಲಯದ ಘಟಿಕೋತ್ಸವ !

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಗಿರೀಶ್‌ ಚಂದರ್‌ ಸಕ್ಸೇನ ಕೂಡ ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಘಟಿಕೋತ್ಸವ ಎಂದಮೇಲೆ ರಾಜ್ಯಪಾಲರ ಉಪಸ್ಥಿತಿ ಸಾಮಾನ್ಯ. ಆದರಿದು ವಿಶೇಷ ಘಟಿಕೋತ್ಸವ; ಆ ಕಾರಣದಿಂದಲೇ ಪ್ರಧಾನಿ ಹಾಗೂ ಮುಖ್ಯಮಂತ್ರಿ ಹಾಜರಿದ್ದರು.

ರಕ್ತರಂಜಿತ ಸುದ್ದಿಗಳದೇ ಮೇಲಾಟವಾದ ಕಾಶ್ಮೀರ ಕೊಳ್ಳದಲ್ಲಿ ನಡೆದ ಈ ಘಟಿಕೋತ್ಸವಕ್ಕೆ ತನ್ನದೇ ಆದ ಅನನ್ಯತೆಯಿತ್ತು . ಈ ಘಟಿಕೋತ್ಸವ ಮತ್ತೊಂದು ವಿಶೇಷ ಘಟನೆಗೂ ಸಾಕ್ಷಿಯಾಯಿತು. ಅದೆಂದರೆ-

ರಾಜ್ಯಪಾಲ ಸಕ್ಸೇನ ಅವರು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಗ್ರೇಸರ ಕಂಪನಿ ಇನ್ಫೋಸಿಸ್‌ನ ಮುಖ್ಯಸ್ಥ ಎನ್‌.ಆರ್‌.ನಾರಾಯಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದರು. ಘಟಿಕೋತ್ಸವ ಭವನದ ತುಂಬಾ ಚಪ್ಪಾಳೆ ಮೊರೆಯುತ್ತಿತ್ತು .

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ನಾರಾಯಣ ಮೂರ್ತಿ ಅವರಿಗೆ ಕಾಶ್ಮೀರ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತು.

ಇದು ಇನ್ಫೋಸಿಸ್‌ಗೆ ಸಂದ ಗೌರವ

ಕಾಶ್ಮೀರ ವಿಶ್ವ ವಿದ್ಯಾಲಯ ತಮಗೆ ನೀಡಿದ ಗೌರವ ಡಾಕ್ಟರೇಟ್‌ ಪದವಿ ಇನ್ಫೋಸಿಸ್‌ ಸಂಸ್ಥೆಗೆ ಸಲ್ಲುತ್ತದೆ . ಈ ಗೌರವ ಇನ್ಫೋಸಿಸ್‌ನ 15 ಸಾವಿರ ಉದ್ಯೋಗಿಗಳಿಗೆ ಸೇರುತ್ತದೆ ಎಂದು ನಾರಾಯಣಮೂರ್ತಿ ಭಾವುಕರಾಗಿ ನುಡಿದರು. ತಮ್ಮ ಕಂಪನಿ ದೇಶದ ನಿರೀಕ್ಷೆಗಳನ್ನು ಸಾಧಿಸುವಲ್ಲಿ ಮುಂದೆಯೂ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ಹೇಳಿದರು.

ಆನಂತರ ಇನ್ಫೋಸಿಸ್‌ ರಾಜಗುರುವಿನ ಮಾತು ಹೊರಳಿದ್ದು ದೇಶ ಕಟ್ಟುವ ಕೆಲಸದತ್ತ . ಅಭಿವೃದ್ಧಿ ಪಥದತ್ತ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳು ಹೊತ್ತುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಹೆಗಲು ನೀಡಬೇಕು ಎಂದು ಮೂರ್ತಿ ತಮ್ಮ ಯಾವತ್ತಿನ ವಾದವನ್ನು ಪುನರುಚ್ಚರಿಸಿದರು.

ಜಮ್ಮು ಮತ್ತು ಕಾಶ್ಮೀರದಂಥ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಕೈ ಕೈ ಹಿಡಿದು ಸಾಗಬೇಕು. ದೇಶದ ಆಶೋತ್ತರಗಳ ಈಡೇರಿಕೆಗೆ ಸರ್ಕಾರದೊಂದಿಗೆ ವಾಣಿಜ್ಯೋದ್ಯಮಿಗಳು ಕೈ ಜೋಡಿಸಬೇಕು ಎಂದರು.

ಗೌರವ ಡಾಕ್ಟರೇಟ್‌ ಪದವಿ ನೀಡಿದ ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ನಾರಾಯಣಮೂರ್ತಿ ತಮ್ಮ ಕೃತಜ್ಞತೆ ಸಲ್ಲಿಸಿದರು.

ಪಾಕ್‌ ಆಟ ನಡೆಯುವುದಿಲ್ಲ

ಕಳೆದೊಂದು ದಶಕದಿಂದಲೂ ಕಾಶ್ಮೀರ ಕೊಳ್ಳದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಪಾಕಿಸ್ತಾನ ತೊಡಗಿದೆ. ಆದರೆ, ಪಾಕಿಸ್ತಾನದ ಐಲಾಟಗಳು ಫಲ ನೀಡುವುದಿಲ್ಲ ಎಂದು ಘಟಿಕೋತ್ಸವದಲ್ಲಿ ಮಾತನಾಡಿದ ಪ್ರಧಾನಿ ವಾಜಪೇಯಿ ಹೇಳಿದರು.

ಕಾಶ್ಮೀರ ರಾಜ್ಯವನ್ನು ಮೇಲ್ಮಟ್ಟಕ್ಕೆ ಒಯ್ಯುವಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಜವಾಬ್ದಾರಿಯ ನೊಗ ಹೊರಲಿದೆ. ರಾಜ್ಯದಲ್ಲಿ ಪಾರದರ್ಶಕ ಚುನಾವಣೆ ನಡೆಸುವ ತನ್ನ ಮಾತನ್ನು ಕೇಂದ್ರ ಸರ್ಕಾರ ಉಳಿಸಿಕೊಂಡಿದೆ ಎಂದ ವಾಜಪೇಯಿ- ಭಯೋತ್ಪಾದನೆ ಹಾಗೂ ಮಿಲಿಟರಿ ಶಕ್ತಿಯ ಅಟ್ಟಹಾಸಕ್ಕೆ ಕಾಶ್ಮೀರದ ಜನತೆ ಪ್ರಜಾಸತ್ತಾತ್ಮಕ ಶಕ್ತಿಯ ಮೂಲಕ ಉತ್ತರ ಕೊಡಬೇಕು ಎಂದು ಕರೆ ನೀಡಿದರು.

(ಪಿಟಿಐ)

ಪೂರಕ ಓದಿಗೆ-

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more