ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರಿ ಮುಟ್ಟದ ವಿಪ್ರೋ, 225 ಕೋಟಿ ರು. ಲಾಭ

By Staff
|
Google Oneindia Kannada News

ಬೆಂಗಳೂರು : ಅಜೀಂ ಪ್ರೇಂಜಿ ಸಾರಥ್ಯದ ಪ್ರಸಿದ್ಧ ಐಟಿ ಕಂಪನಿ ವಿಪ್ರೋ ನಾಲ್ಕನೇ ತ್ರೆೃಮಾಸಿಕ ಅವಧಿಯಲ್ಲಿ 1,237 ಕೋಟಿ ರುಪಾಯಿ ನಿವ್ವಳ ಆದಾಯ ಗಳಿಸಿದೆ. ಈ ಪೈಕಿ ಬಂದ ಒಟ್ಟು ಲಾಭ 225.4 ಕೋಟಿ ರುಪಾಯಿ.

ಮಾರ್ಚ್‌ 31, 2003ಕ್ಕೆ ಮುಗಿದ ನಾಲ್ಕನೇ ತ್ರೆೃಮಾಸಿಕದ ವಿತ್ತ ವರದಿಯನ್ನು ಕಂಪನಿಯು ಸುದ್ದಿ ಹೇಳಿಕೆಯ ಮೂಲಕ ಗುರುವಾರ (ಏ.17) ಬಿಡುಗಡೆ ಮಾಡಿತು. 2001- 02ನೇ ಇಸವಿಯ ಇದೇ ತ್ರೆೃಮಾಸಿಕ ಅವಧಿಯಲ್ಲಿ ಕಂಪನಿ ಕೇವಲ 927 ಕೋಟಿ ರುಪಾಯಿ ಆದಾಯ ಹಾಗೂ 220 ಕೋಟಿ ರುಪಾಯಿ ಲಾಭ ಮಾಡಿತ್ತು. ಹೀಗಾಗಿ ಕಳೆದ ವಿತ್ತ ವರ್ಷದ ಈ ಅವಧಿಗೆ ಹೋಲಿಸಿದರೆ ಕಂಪನಿಯ ಆದಾಯ ಪ್ರತಿಶತ 32ರಷ್ಟು ಹಾಗೂ ಲಾಭ ಪ್ರತಿಶತ 2.5ರಷ್ಟು ಹೆಚ್ಚಿದೆ.

ಆದಾಯದಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದ್ದರೂ ಕಂಪನಿ ನಿರೀಕ್ಷಿಸಿದ ಲಾಭ ಗಳಿಕೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಕಂಪನಿ 5 ಪ್ರತಿಶತ ಲಾಭದ ಗುರಿ ಇಟ್ಟುಕೊಂಡಿತ್ತು.

ಒಟ್ಟಾರೆ ವರ್ಷದ ವಹಿವಾಟು

2002- 03ನೇ ವಿತ್ತ ಇಸವಿಯಲ್ಲಿ ಕಂಪನಿ ಒಟ್ಟು 4,338.3 ಕೋಟಿ ರುಪಾಯಿ ಆದಾಯ ಗಳಿಸಿದೆ. ಇದಕ್ಕೆ ಮುಂಚಿನ ವಿತ್ತ ವರ್ಷಕ್ಕೆ ಹೋಲಿಸಿದರೆ ಇದು 24 ಪ್ರತಿಶತ ಜಾಸ್ತಿ. ಹಾಗೆಯೇ ಲಾಭದಲ್ಲಿ 7 ಪ್ರತಿಶತ ಏರಿಕೆ ಕಂಡು ಬಂದಿದ್ದು, ಒಟ್ಟು 885.4 ಕೋಟಿ ರುಪಾಯಿ ಪ್ರಾಪ್ತಿಯಾಗಿದೆ. ಈ ವಿತ್ತ ವರ್ಷದ ಅವಧಿಯಲ್ಲಿ ಸ್ಪೆಕ್ಟ್ರಾಮೈಂಡ್‌, ಗ್ಲೋಬಲ್‌ ಎನರ್ಜಿ ಪ್ರಾಕ್ಟೀಸಸ್‌ ಆಫ್‌ ಎಎಂಎಸ್‌ ಹಾಗೂ ಎರಿಕ್ಸನ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳನ್ನು ಖರೀದಿಸುವಂಥಾ ದಿಟ್ಟ ಹೆಜ್ಜೆಯನ್ನು ಕಂಪನಿ ಇಟ್ಟಿತು. ಬರುವ ದಿನಗಳಲ್ಲಿ ಇನ್ನಷ್ಟು ಕಂಪನಿಗಳನ್ನು ತೆಕ್ಕೆಗೆ ತಂದುಕೊಳ್ಳುವುದರ ಮೂಲಕ ಅಭಿವೃದ್ಧಿಯ ದಾಪುಗಾಲಿಡಲಿದ್ದೇವೆ ಎಂದು ಅಜೀಂ ಪ್ರೇಂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ನಡೆಯುತ್ತಿರುವ ಏಪ್ರಿಲ್‌- ಜೂನ್‌ ಅವಧಿಯ 2003- 04ನೇ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ವಿಪ್ರೋ ಟೆಕ್ನಾಲಜೀಸ್‌ನಿಂದ 172 ದಶಲಕ್ಷ ಡಾಲರ್‌ ಹಾಗೂ ವಿಪ್ರೋ ಸ್ಪೆಕ್ಟ್ರಾಮೈಂಡ್‌ನಿಂದ 16 ದಶಲಕ್ಷ ಡಾಲರ್‌ ಆದಾಯದ ಗುರಿಯನ್ನು ಹೊಂದಿದ್ದೇವೆ ಎಂದು ಅಜೀಂ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಪಿಟಿಐ)

ಇವನ್ನೂ ಓದಿ-
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X