ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರೆದಿದೆ ಫರ್ನ್‌ಹಿಲ್‌ ಅರಮನೆ ಹೋಟೆಲ್‌ ಬಾಗಿಲು

By Staff
|
Google Oneindia Kannada News

ಮೈಸೂರು : ಮೈಸೂರು ಒಡೆಯರ್‌ ಕಾಲದ ಸ್ಮರಣಿಕೆಯಾಗಿ ಉಳಿದಿರುವ ಊಟಿಯಲ್ಲಿನ ಫರ್ನ್‌ಹಿಲ್‌ ಅರಮನೆ ಹೊಸರೂಪದಲ್ಲಿ ವರ್ತಮಾನಕ್ಕೆ ಮುಖಾಮುಖಿಯಾಗಿದೆ. ಪ್ರಸ್ತುತ, ನವೀಕರಣದೊಂದಿಗೆ ಹೊಸರೂಪು ಪಡೆದಿರುವ ಫರ್ನ್‌ಹಿಲ್‌ ಅರಮನೆ ವೈಭವೋಪೇತ ಸ್ಟಾರ್‌ ಹೋಟೆಲ್‌ ಆಗಿ ಬದಲಾಗಿದೆ.

160 ವರ್ಷಗಳಷ್ಟು ಹಳೆಯದಾದ ಫರ್ನ್‌ಹಿಲ್‌ ಅರಮನೆಯನ್ನು ಮಹಾರಾಜ ಚಾಮರಾಜ ಒಡೆಯರ್‌ ಅವರು 1860ರಲ್ಲಿ ಓರ್ವ ಯುರೋಪಿಯನ್‌ನಿಂದ 10 ಸಾವಿರ ರುಪಾಯಿಗಳಿಗೆ ಖರೀದಿಸಿದ್ದರು. 1974ರಲ್ಲಿ ಈ ಅರಮನೆಯನ್ನು ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಹೋಟೆಲ್‌ ಆಗಿ ಪರಿವರ್ತಿಸಿದ್ದರು.

1996ರಲ್ಲಿ ನವೀಕರಣ ಕಾರ್ಯಕ್ಕಾಗಿ ಬಾಗಿಲು ಮುಚ್ಚಿದ್ದ ಪ್ರತಿಷ್ಠಿತ ಅರಮನೆ ಹೋಟೆಲ್‌ ಈಗ ಮತ್ತೆ ಬಾಗಿಲು ತೆರೆದಿದೆ. ನವೀಕರಣಗೊಂಡಿದ್ದರೂ ಕಟ್ಟಡದ ಮೂಲ ರೂಪ ಹಾಗೂ ಅನನ್ಯತೆಯನ್ನು ಉಳಿಸಿಕೊಳ್ಳಲಾಗಿದೆ.

ಅರಮನೆ ಹೋಟೆಲ್‌ ಕಟ್ಟಡದ ಮರದ ಕೆತ್ತನೆ ಕೆಲಸಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದ್ದು , ಈ ಮೂಲ ಗುಣಲಕ್ಷಣಗಳನ್ನು ನವೀಕರಣ ಸಂದರ್ಭದಲ್ಲಿ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಪ್ರಾಚೀನ ಪೀಠೋಪಕರಣಗಳನ್ನು ಕೂಡ ರಿಪೇರಿಯ ನಂತರ ಉಳಿಸಿಕೊಳ್ಳಲಾಗಿದೆ ಎಂದು ಶ್ರೀಕಂಠದತ್ತ ಒಡೆಯರ್‌ ಹಾಗೂ ಅವರ ಪತ್ನಿ ಪ್ರಮೋದಾ ದೇವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X