ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆಯ 267 ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ

By Staff
|
Google Oneindia Kannada News

ದಾವಣಗೆರೆ : ಜಿಲ್ಲೆಯ 267 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆ ಗುರ್ತಿಸಿದೆ.

ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಗುರುಪಾದಯ್ಯ ಸ್ವಾಮಿ ನೀರಿನ ಸಮೀಕ್ಷೆ ನಡೆಸಿದ್ದು, ವಸ್ತು ಸ್ಥಿತಿಯನ್ನು ಕಲೆ ಹಾಕಿದ್ದಾರೆ. ನೀರಿನ ತೊಂದರೆ ಇರುವ ಹಳ್ಳಿಗಳ ಪೈಕಿ 45 ಹೊನ್ನಾಳಿ ತಾಲ್ಲೂಕಿಗೆ ಸೇರಿದವು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಾದರೆ ಕನಿಷ್ಠ 217 ಕೊಳವೆಬಾವಿಗಳನ್ನು ಕೊರೆಸಬೇಕಾಗಿದೆ. 217 ಕೊಳವೆಬಾವಿಗಳ ಪುನಶ್ಚೇತನದ ಕೆಲಸ ಆಗಬೇಕಿದೆ. ಈ ಕಾಮಗಾರಿಗಳಿಗೆ ಒಟ್ಟು 348.96 ಲಕ್ಷ ರುಪಾಯಿ ಬೇಕಾಗುತ್ತದೆ- ಇವಿಷ್ಟು ಗುರುಪಾದಯ್ಯ ಕಲಾಹಾಕಿರುವ ಮಾಹಿತಿ.

ಕುಡಿಯುವ ನೀರಿಗಾಗಿ ಏಳೆಂಟು ಕಿಲೋಮೀಟರು ದೂರಕ್ಕೆ ಹೋಗಿ ಬರುವಂಥಾ ಕಷ್ಟವನ್ನು ಹಳ್ಳಿಗರು ಅನುಭವಿಸುತ್ತಿದ್ದಾರೆ. ಮನೆಯಾಂದಕ್ಕೆ ಅಬ್ಬಬ್ಬಾ ಅಂದರೂ 10 ಲೀಟರ್‌ ನೀರು ಗಿಟ್ಟುವುದೂ ದುಸ್ತರವಾಗಿದೆ.

(ಇನ್ಫೋ ವಾರ್ತೆ)

ನೀರಿಲ್ಲದ ನೆಲದಾಗ...
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X