ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರ ಹಿರಿಯ ನಾಗರಿಕರಿಗೆ ವಿಶೇಷ ಗುರ್ತುಚೀಟಿ

By Staff
|
Google Oneindia Kannada News

ಬೆಂಗಳೂರು : ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ರೈಲ್ವೆ ಇಲಾಖೆ, ನಗರ ಸಾರಿಗೆ ಮುಂತಾದೆಡೆ ಕೆಲಸಗಳಿಗೆ ಮೊದಲ ಆದ್ಯತೆ ನೀಡಲು ಅನುಕೂಲವಾಗುವಂತೆ ಬೆಂಗಳೂರಿನ ಹಿರಿಯ ನಾಗರಿಕರಿಗೆ ವಿಶೇಷ ಗುರುತಿನ ಚೀಟಿಗಳನ್ನು ಸದ್ಯದಲ್ಲಿಯೇ ವಿತರಿಸಲಾಗುವುದು ಎಂದು ಬೆಂಗಳೂರು ಮಹಾನಗರಪಾಲಿಕೆಯ ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಕ್ಯೂ ನಿಂತು ಕೆಲಸ ಮಾಡಿಸಿಕೊಳ್ಳುವ ಬವಣೆಯನ್ನು ಹಿರಿಯ ನಾಗರಿಕರು ತಪ್ಪಿಸಿಕೊಳ್ಳಲಿದ್ದಾರೆ. ಈ ವಿಶೇಷ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಹಿರಿಯ ನಾಗರಿಕರು ಆದ್ಯತೆಯ ಸೇವೆಯನ್ನು ಪಡೆಯಬಹುದು ಎಂದು ಪಾಲಿಕೆಯ ವಿಶೇಷ ಆಯುಕ್ತ ಐ.ಎಸ್‌.ಎನ್‌.ಪ್ರಸಾದ್‌ ತಿಳಿಸಿದರು.
ನಗರ ಪೊಲೀಸ್‌ ಆಯುಕ್ತರ ಕಚೇರಿಯ ಆವರಣದಲ್ಲಿ ಮಂಗಳವಾರ ನಡೆದ ಹಿರಿಯರ ಸಹಾಯವಾಣಿ ಮೊದಲ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.

ವೃದ್ಧರಿಗೆ ಹೆಚ್ಚಿನ ರಕ್ಷಣೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಹಿರಿಯರ ಸಹಾಯವಾಣಿ ಹಾಗೂ ಪೊಲೀಸರು ಮುಂದಾಗಬೇಕು. ನೆರೆಹೊರೆ, ಮಕ್ಕಳು ಹಾಗೂ ಬಾಡಿಗೆದಾರರಿಂದ ವೃದ್ಧರು ಎದುರಿಸುವ ಸಮಸ್ಯೆಗಳಿಗೆ ಕೂಡ ಸಹಾಯವಾಣಿ ಸ್ಪಂದಿಸಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಎಂ.ಡಿ.ಸಿಂಗ್‌ ಹೇಳಿದರು.

2002 ನೇ ಇಸವಿಯ ಏಪ್ರಿಲ್‌ ತಿಂಗಳಲ್ಲಿ ಪ್ರಾರಂಭವಾದ ಹಿರಿಯ ನಾಗರಿಕರ ಸಹಾಯವಾಣಿಯಲ್ಲಿ ಈವರೆಗೆ 1900 ದೂರುಗಳು ದಾಖಲಾಗಿದ್ದು , ಈ ಪೈಕಿ 913 ಇತ್ಯರ್ಥಗೊಂಡಿವೆ. ಅನೇಕ ವೃದ್ಧರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಕೆಲವರಿಗೆ ಕಾನೂನು ನೆರವು ಒದಗಿಸಲಾಗಿದೆ ಎಂದು ಡಿಸಿಪಿ ನೋಡೆಲ್‌ ಅಧಿಕಾರಿ ಕೆ.ಎಲ್‌.ಸುಧೀರ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X