• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತೆ ಮಹಾದೇವಿಯ ಕಲ್ಯಾಣ ಪರ್ವಕ್ಕೆ ವಿರೋಧ

By Staff
|

ಬೀದರ್‌ : ಇಲ್ಲಿನ ಬಸವ ಕಲ್ಯಾಣದಲ್ಲಿ ಏಪ್ರಿಲ್‌ ಕೊನೆಯ ವಾರ ನಡೆಯಲಿರುವ ಕಲ್ಯಾಣ ಪರ್ವದಿಂದ ದೂರ ಸರಿಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಅನುಭವ ಮಂಟಪ ಹಾಗೂ ವಚನ ಸಂರಕ್ಷಣಾ ಸಮಿತಿ ನಿರ್ಧರಿಸಿವೆ.

ಅನುಭವ ಮಂಟಪ ಅಧ್ಯಕ್ಷ ವಿ. ಸಿದ್ಧರಾಮಣ್ಣ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕಲ್ಯಾಣ ಪರ್ವಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಮಾತುಕತೆ ನಡೆಯಿತು.

ಬಸವಣ್ಣನವರ ವಚನಗಳ ಅಂಕಿತ ನಾಮವನ್ನು ಬದಲಾಯಿಸಿದ ಮಾತೆ ಮಹಾದೇವಿ ಕಲ್ಯಾಣ ಪರ್ವದ ಅಧ್ಯಕ್ಷತೆ ವಹಿಸುವರು. ವಾಸ್ತವವಾಗಿ ಮಾತೆ ಮಹಾದೇವಿಗೆ ಬಸವಣ್ಣನವರ ನೆಲದಲ್ಲಿ ಇಂತಹ ಉತ್ಸವಗಳನ್ನು ನಡೆಸುವ ನೈತಿಕ ಅರ್ಹತೆಯೇ ಇಲ್ಲ. ಆದ್ದರಿಂದ ಕಲ್ಯಾಣ ಪರ್ವವವನ್ನು ನಿಷೇಧಿಸಬೇಕು ಎಂದು ಸಿದ್ಧರಾಮಣ್ಣ ಸರಕಾರವನ್ನು ಆಗ್ರಹಿಸಿದರು.

ಕಲ್ಯಾಣ ಪರ್ವವನ್ನು ಬೆಂಬಲಿಸದಂತೆ ಎಲ್ಲ ಮಠಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಲೂ ಈ ಸಭೆಯಲ್ಲಿ ನಿರ್ಧರಿಸಲಾಯಿತು. ಲಿಂಗಾಯಿತರ ದೃಷ್ಠಿಕೋನವನ್ನೇ ಬದಲಿಸಲು ಪ್ರಯತ್ನಿಸುತ್ತಿರುವ ಮಾತೆ ಮಹಾದೇವಿಯನ್ನು ಖಂಡಿಸಿದ ಸಮಿತಿಯ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಕಳೆದ ಬಾರಿ ಜಿಲ್ಲೆಯನ್ನು ಉದ್ರಿಕ್ತ ಪರಿಸ್ಥಿತಿಗೆ ದೂಡಿದ್ದ ಕಲ್ಯಾಣ ಪರ್ವವವನ್ನು ಈ ಬಾರಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more