• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಬ್ರಮಣ್ಯಂ ಸ್ವಾಮಿ ಪಕ್ಷಕ್ಕೆ ಬೀರು ದೊರೆಯ ಪಕ್ಷಾಂತರ

By Staff
|

Vijay Mallyaಬೆಂಗಳೂರು : ಬೀರು ದೊರೆ, ಭಾರೀ ವ್ಯಾಪಾರಿ ಕುಳ ಹಾಗೂ ರಾಜ್ಯಸಭಾ ಸದಸ್ಯ ವಿಜಯ್‌ ಮಲ್ಯ ಸೋಮವಾರ (ಏ.14) ಡಾ.ಸುಬ್ರಮಣ್ಯಂ ಸ್ವಾಮಿಯ ಜನತಾ ಪಾರ್ಟಿಗೆ ಸೇರುವ ಮೂಲಕ ರಾಜಕೀಯ ಚದುರಂಗದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ.

ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹುಟ್ಟಿಕೊಂಡು, ತಾಂತ್ರಿಕ ಅಡ್ಡಿಗಳಿಂದಾಗಿ ಚುನಾವಣಾ ಆಯೋಗದ ಮನ್ನಣೆ ಪಡೆಯಲು ಹೆಣಗಾಡುತ್ತಿರುವ ಅಖಿಲ ಭಾರತ ಜನತಾ ದಳದ ಉಪಾಧ್ಯಕ್ಷರಾಗಿದ್ದ ಮಲ್ಯ ಪಕ್ಷಾಂತರ ತೀರಾ ನಾಟಕೀಯ ಬೆಳವಣಿಗೆಯಾಗಿದೆ. ಅಂದಹಾಗೆ, ಜನತಾ ಪಾರ್ಟಿಗೆ ಮಲ್ಯ ಹೊಸ ಅಧ್ಯಕ್ಷ ಕೂಡ ಹೌದು. ಇದನ್ನು ಖುದ್ದು ಮಲ್ಯ ಸೋಮವಾರ ಘೋಷಿಸಿದರು.

ಕರ್ನಾಟಕದಲ್ಲಿ ಜನತಾ ದಳಗಳ ವಿಲೀನ ಪ್ರಕ್ರಿಯೆಗೆ ತಾವೂ ಸಾಕಷ್ಟು ಹೆಣಗಾಡಿದ್ದು, ಅದು ಸಾಧ್ಯವಾಗದ್ದಕ್ಕೆ ಮಲ್ಯ ವಿಷಾದಿಸಿದರು. ಅಖಿಲ ಭಾರತ ಜನತಾ ದಳ ಮತ್ತು ಜನತಾ ಪಾರ್ಟಿಯ ವಿಲೀನಕ್ಕೂ ಇವರು ವಿಫಲ ಯತ್ನ ನಡೆಸಿದ್ದರು.

ರಾಮಕೃಷ್ಣ ಹೆಗಡೆ ಮತ್ತು ಸುಬ್ರಮಣ್ಯಂ ಸ್ವಾಮಿ ನಡುವಿನ ಹಳಸಿದ ಸಂಬಂಧವನ್ನು ಸರಿಪಡಿಸಿದ್ದು ನಾನೇ. ಹೆಗಡೆ ಅವರ ಮನೆಗೆ ಸುಬ್ರಮಣ್ಯಂ ಸ್ವಾಮಿಯನ್ನು ಕರೆದುಕೊಂಡು ಹೋಗಿ, ಅವರಿಬ್ಬರೂ ಹಳೆಯದನ್ನಲ್ಲ ಮರೆತು ಒಂದಾಗುವಂತೆ ಮಾಡಿದೆ. ಹೆಗಡೆ ಅವರ ತಾತ್ವಿಕ ಒಪ್ಪಿಗೆ ಹಾಗೂ ಬೆಂಬಲದ ನಂತರವೇ ಅಖಿಲ ಭಾರತ ಜನತಾ ದಳ ಮತ್ತು ಜನತಾ ಪಾರ್ಟಿಯ ವಿಲೀನದ ಬಗ್ಗೆ ನಾನು ಉತ್ಸಾಹ ತೋರಿದ್ದು ಎಂದು ಮಲ್ಯ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

ಅಖಿಲ ಭಾರತ ಜನತಾ ದಳದ ಉಪಾಧ್ಯಕ್ಷರಾದ ನಂತರ ನನ್ನ ವಿರುದ್ಧ ಎದುರಿಗೆ ಕೂತು ಮಾತಾಡಲು ಧೈರ್ಯವಿಲ್ಲದವರು ಸುದ್ದಿ ಹೇಳಿಕೆಗಳನ್ನು ಕೊಡಲು ಶುರುವಿಟ್ಟರು. ಯಾವುದಾದರೂ ಒಂದು ಕೆಲಸಕ್ಕೆ ಕೈಹಾಕಿದರೆ, ಐದೋ ಆರೋ ಸದಸ್ಯರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದರು. ಇದರಿಂದ ಹತಾಶನಾಗಿದ್ದೇನೆ. ಆ ಕಾರಣಕ್ಕೇ ಅಖಿಲ ಭಾರತ ಜನತಾ ದಳ ಮತ್ತು ಜನತಾ ಪಾರ್ಟಿಯ ವಿಲೀನ ಸಾಧ್ಯವಾಗಲಿಲ್ಲ ಎಂದು ಮಲ್ಯ ಸಿಡಿಮಿಡಿಗೊಂಡರು.

ಜನರ ಮನಸ್ಸಿನಲ್ಲಿ ಜನತಾ ಪಾರ್ಟಿಯ ನೆನಪು ಇನ್ನೂ ಮಾಸಿಲ್ಲ. ಅದಕ್ಕೆ ಹೊಸ ಬಣ್ಣ ಕೊಟ್ಟು, ಕಳೆಗುಂದಿರುವ ಉತ್ಸಾಹವನ್ನು ಮತ್ತೆ ತುಂಬುತ್ತೇನೆ ಎಂಬುದು ಮಲ್ಯ ಮಾಡಿರುವ ಹೊಸ ಸಂಕಲ್ಪ.

ಜಾತ್ಯತೀತ ಜನತಾ ದಳದ ದೇವೇಗೌಡ ಸೇರಿದಂತೆ ಜನತಾ ದಳಗಳ ಹಲವು ನಾಯಕರು ಮಲ್ಯ ಪಕ್ಷಾಂತರ ಮಾಡದಂತೆ ಮಲ್ಯ ಮನವೊಲಿಸಲು ಮಾಡಿದ ಯತ್ನ ವಿಫಲವಾಯಿತು.

(ಪಿಟಿಐ)

Post your views

ವಾರ್ತಾ ಸಂಚಯ

ಬೀರು ದೊರೆಯ ಆರೋಗ್ಯ ಸೇವೆ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more