• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಡು ಧಗೆಯಲ್ಲಿ ರಾಮ ಹಾಗೂ ಕೋಸಂಬರಿ ನೆನಪು

By Staff
|

*ಚ.ಹ. ರಘುನಾಥ

Lord Ramaಏಪ್ರಿಲ್‌ 11 ರ ಶುಕ್ರವಾರ ಶ್ರೀರಾಮ ನವಮಿ. ಭಕುತ ಕೋಟಿಯ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳುವ ರಾಮದೇವರು ಹುಟ್ಟಿದ ದಿನ. ಈ ದಿನ ರಾಮಭಕ್ತರ ಪಾಲಿಗೆ ರಾಮನಾಮವೇ ಅನ್ನ ಹಾಗೂ ಪಾನ !

ಪಾನ ಎಂದ ಕೂಡಲೇ ನೆನಪಾಗುತ್ತದೆ; ರಾಮನವಮಿಯಾಂದಿಗೆ ಥಳುಕು ಹಾಕಿಕೊಂಡಿರುವ ಕೋಸಂಬರಿ, ನೀರು ಮಜ್ಜಿಗೆ ಹಾಗೂ ತಣ್ಣನೆಯ ಷರಬತ್ತು . ರಾಮ ನವಮಿಗೂ ಕೋಸಂಬರಿ ಷರಬತ್ತಿಗೂ ಅದೇನು ನಂಟೋ ಗೊತ್ತಿಲ್ಲ - ಸಾಮಾನ್ಯವಾಗಿ ನಗರ ಪಟ್ಟಣದಿಂದ ಹಿಡಿದು ಹಳ್ಳಿಗಳಲ್ಲಿನ ರಾಮದೇವರ ಗುಡಿಯಲ್ಲಿ ಪಾನಕ ಪನಿವಾರದ ವ್ಯವಸ್ಥೆ ಇದ್ದೇ ಇರುತ್ತದೆ.

ರಾಮ ಮಂತ್ರವ ಜಪಿಸೊ ಹೇ ಮನುಜ ಅನ್ನುವ ಹಳೆಯ ತಲೆಗಳಿಂದ ಹಿಡಿದು ಹರೇ ರಾಮ ಹರೇ ರಾಮ ಸಂಸ್ಕೃತಿಯ ಈ ಪೀಳಿಗೆಗೂ ರಾಮ ನವಮಿಯನ್ನು ಪ್ರೀತಿಸಲಿಕ್ಕೆ ಕಾರಣಗಳುಂಟು. ಮೊದಲನೆಯಾದಾಗಿ ರಾಮ ನವಮಿ ಖರ್ಚಿನ ಹಬ್ಬವಲ್ಲ . ಕೃಷ್ಣ ಜಯಂತಿಯ ಆಡಂಬರ ರಾಮನವಮಿಗಿಲ್ಲ . ಶಿವರಾತ್ರಿಯಂತೆ ಈ ದಿನ ಉಪವಾಸದ ಗೋಜೂ ಇಲ್ಲ . ಹೆಂಡತಿಯ ಮಾತಿಗೆ ಹೂಂಗುಟ್ಟಿದ ಅಪ್ಪನ ಮಾತಿಗೆ ಹೂಗುಟ್ಟಿ , ನಾರುಮಡಿಯುಟ್ಟು ಕಾಡಿಗೆ ತೆರಳಿದ ರಾಮನ ಸರಳತೆಯಂತೆಯೇ ಆತನ ಜಯಂತಿಯೂ ಸರಳ.

ಪಾನಕ ಪರಿವಾರಗಳ ಆಕರ್ಷಣೆಯೂ ರಾಮ ನವಮಿಯನ್ನು ಪ್ರೀತಿಸುವಂತೆ ಮಾಡುತ್ತದೆ. ನೆತ್ತಿಯನ್ನು ಸುಡುವ, ಅಂಗಾಲುಗಳನ್ನು ಭಗಭಗಿಸೊ, ಅಂಗಾಂಗವಿಡೀ ತಲ್ಲಣಿಸುವಂತೆ ಮಾಡುವ ಧಗೆ ಕಾಲಕ್ಕೆ ಪಾನಕ ಪನಿವಾರ ಆಪ್ಯಾಯಮಾನವೆನ್ನಿಸುತ್ತವೆ.

ನೀವು ಹಬ್ಬ ಮಾಡದಿದ್ದರೂ ಚಿಂತೆಯಿಲ್ಲ . ಸುಮ್ಮನೇ ರಾಮ ಗುಡಿಗಳಿಗೊಂದು ಪ್ರದಕ್ಷಿಣೆ ಹಾಕಿ- ರಾಮನಿಗೊಂದು ನಮಸ್ಕಾರ ಹಾಕಿದಂತೆಯೂ ಆದೀತು, ಹೊಟ್ಟೆಯೂ ತಂಪಾದೀತು. ಅರವಟ್ಟಿಗೆಗಳನ್ನು ಇಡಿಸುವ ಭಕ್ತರು ಇನ್ನೂ ಇದ್ದಾರೆ ಸ್ವಾಮಿ!

ರಾಮ ನವಮಿಯಾಂದಿಗೆ ನೆನಪಾಗುವ ಮತ್ತೊಂದು ಹಿತವಾದ ಸಂಗತಿಯೆಂದರೆ, ರಾಮ ನವಮಿ ಸಂಗೀತ ಕಛೇರಿಗಳು. ರಾಮನಿಗೂ ಸಂಗೀತಕ್ಕೂ ಅದೇನು ನಂಟೋ, ಖ್ಯಾತನಾಮರು ಭಾಗವಹಿಸುವ ಭರ್ಜರಿ ಸಂಗೀತ ಕಛೇರಿಗಳು ಈ ಸಂದರ್ಭದಲ್ಲಿ ವಾರಗಟ್ಟಲೆ ಏರ್ಪಾಡಾಗುತ್ತವೆ. ಸಂಗೀತ ಪ್ರಿಯರ ಪಾಲಿಗಂತೂ ಶ್ರೀರಾಮನವಮಿ ಸಂಗೀತ ಸುಗ್ಗಿಯ ಹಬ್ಬ!

ರಾಜ್ಯ ಬರದ ದವಡೆಗೆ ಸಿಲುಕಿದ್ದರೂ, ವಾರ್ಷಿಕ ಸಂಪ್ರದಾಯದಂತೆ ಈ ಬಾರಿಯೂ ರಾಜ್ಯಾದ್ಯಂತ ರಾಮನವಮಿ ಕಾರ್ಯಕ್ರಮಗಳು ಏರ್ಪಾಡಾಗಿವೆ. ಉದಾಹರಣೆಗೆ ಬೆಂಗಳೂರಿನ ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಲಿಯ ಕಾರ್ಯಕ್ರಮವನ್ನೇ ನೋಡಿ- ರಾಮನವಮಿಯಂದು ಮುಖ್ಯಮಂತ್ರಿ ಕೃಷ್ಣ ಅವರು ಉದ್ಘಾಟಿಸುವ ಸಂಗೀತೋತ್ಸವ ಏಪ್ರಿಲ್‌ 27 ರವರೆಗೂ ನಡೆಯಲಿದೆ.

ಕದ್ರಿ ಗೋಪಾಲನಾಥ್‌, ವಿದ್ಯಾಭೂಷಣ, ರಾಜಕುಮಾರ್‌ ಭಾರತಿ, ಕುನ್ನಕ್ಕಡಿ ವೈದ್ಯನಾಥನ್‌, ವಿಜಯ ಶಿವ, ಉನ್ನಿ ಕೃಷ್ಣನ್‌, ಹೈದರಾಬಾದ್‌ ಸಹೋದರರು... ಹೀಗೆ ಸೇವಾ ಮಂಡಲಿಯ ಸಂಗೀತೋತ್ಸವದಲ್ಲಿ ಭಾಗವಹಿಸುವ ದೊಡ್ಡವರ ಸಂಖ್ಯೆ ದೊಡ್ಡದು. ರಾಮ ನವಮಿಯ ಸಂದರ್ಭದಲ್ಲಿ ಸೇವಾ ಮಂಡಳಿಯ ವೆಬ್‌ಸೈಟ್‌ ಬಿಡುಗಡೆಯಾಗುತ್ತಿರುವುದು ಇನ್ನೊಂದು ವಿಶೇಷ.

ರಾಮ ಹಾಗೂ ರಾಮ ನವಮಿ ಈ ಪರಿಯ ಸಂತೋಷವನ್ನು ನಮಗೆ ನೀಡುತ್ತಿರುವಾಗ- ಅಯೋಧ್ಯೆಯಲ್ಲಿ ರಾಮ ಮಂದಿರ ಕುರಿತು ಚಿಂತಿಸುವುದು, ಆ ವಿಷಯವನ್ನು ಸಂಘರ್ಷವನ್ನಾಗಿಸುವುದು ಎಂಥ ಸಣ್ಣತನ ಎನ್ನಿಸುತ್ತದೆ. ಅಂಥ ಪ್ರಯತ್ನಗಳು ಮರ್ಯಾದಾ ಪುರುಷೋತ್ತಮನಾದ ಸೀತಾಪತಿಗೆ ಮರ್ಯಾದೆ ತರುತ್ತವಾ ಎಂದು ಸ್ವಘೋಷಿತ ರಾಮಭಕ್ತರು ಏಕೆ ಯೋಚಿಸುವುದಿಲ್ಲವೋ? ಇವರನ್ನೆಲ್ಲಾ ರಾಮನೇ ಕಾಪಾಡಬೇಕು ! ನಮಗಂತೂ ನಮ್ಮೂರಿನ ಸೀತಾ ಲಕ್ಷಣ ಹನುಮ ಸಮೇತ ರಾಮದೇವರೇ ಸಾಕು ; ಅಲ್ಲಿಯೇ ನಮ್ಮ ಸಾಂಸ್ಕೃತಿಕ ಕನಸುಗಳು ಗರಿಕೆದರಲಿ.

Post your views

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more