• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಹುಪಯೋಗಿ ಇನ್ಸಾಟ್‌-3ಎ ಯಶಸ್ವಿ ಉಡಾವಣೆ

By Staff
|

ಬೆಂಗಳೂರು : ಭಾರತದ ಬಹು ಉಪಯೋಗಿ ಇನ್ಸಾಟ್‌-3ಎ ಉಪಗ್ರಹವನ್ನು ಫ್ರೆಂಚ್‌ ಗಯಾನಾದ ಕೌರು ಉಡ್ಡಯನ ನೆಲೆಯಿಂದ ಗುರುವಾರ ಯಶಸ್ವಿಯಾಗಿ ಉಡಾಯಿಸಲಾಯಿತು.

ಗುರುವಾರ ಬೆಳಗಿನ ಜಾವ 4.20 ರ ಸುಮಾರಿಗೆ ಉಪಗ್ರಹ ಉಡಾವಣೆ ಯಶಸ್ವಿಯಾಗಿ ನಡೆಯಿತು ಎಂದು ಇಸ್ರೋ ಪ್ರಕಟಣೆ ತಿಳಿಸಿದೆ. ಇನ್ಸಾಟ್‌-3ಎ ಉಪಗ್ರಹ ಉಡಾವಣೆ ಬುಧವಾರವೇ ನಡೆಯಬೇಕಿದ್ದರೂ, ಕೊನೆ ನಿಮಿಷದ ತಾಂತ್ರಿಕ ತೊಂದರೆಯ ಕಾರಣದಿಂದ ಉಪಗ್ರಹ ಉಡಾವಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.

2950 ಕೇಜಿ ತೂಕದ ಇನ್ಸಾಟ್‌-3ಎ ಉಪಗ್ರಹ ಉಡಾವಣೆಯ ನಂತರದ ಕಾರ್ಯಗಳು ಕೂಡ ಸುಗಮವಾಗಿದ್ದು- ಉಪಗ್ರಹ ಹಾಸನದ ನಿಯಂತ್ರಣ ಕೇಂದ್ರದ ಸಂಪರ್ಕದಲ್ಲಿದೆ.

ಟೆಲಿ ಕಮ್ಯುನಿಕೇಷನ್‌, ಟೆಲಿವಿಷನ್‌ ಬ್ರಾಡ್‌ಕಾಸ್ಟಿಂಗ್‌, ಹವಾಮಾನ ಹಾಗೂ ಬಾಹ್ಯಾಕಾಶ ಸಂಬಂಧಿತ ಸಂಶೋಧನೆಗಳಿಗೆ ಇನ್ಸಾಟ್‌-3ಎ ಉಪಗ್ರಹ ನೆರವು ನೀಡಲಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more