ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ವಾರ್ಷಿಕ ಲೆಕ್ಕಪಟ್ಟಿ

By Staff
|
Google Oneindia Kannada News

Nandan Nilekani, The CEO of Infosysಬೆಂಗಳೂರು : ಭಾರತೀಯ ಮಾಹಿತಿ ತಂತ್ರಜ್ಞಾನದ ಅಗ್ರೇಸರ ಕಂಪನಿಗಳಲ್ಲೊಂದಾದ ಇನ್ಫೋಸಿಸ್‌ ಟೆಕ್ನಾಲಜಿಸ್‌ ಸಂಸ್ಥೆ ತನ್ನ ವಾರ್ಷಿಕ ಲೆಕ್ಕಪಟ್ಟಿಯನ್ನು ಪ್ರಕಟಿಸಿದ್ದು , 2002-03 ನೇ ಇಸವಿಯಲ್ಲಿ 957.93 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

2002-03 ನೇ ಸಾಲಿನಲ್ಲಿ 3,622.69 ಕೋಟಿ ರುಪಾಯಿಗಳ ಮೊತ್ತದ ಮಾರಾಟ ದಾಖಲೆ ಸಾಧಿಸಿದೆ. ಕಳೆದ ವರ್ಷ ಸಂಸ್ಥೆ 2,603.59 ಕೋಟಿ ರುಪಾಯಿ ಮಾರಾಟ ನಡೆಸಿತ್ತು ಎಂದು ಗುರುವಾರ ಬಿಡುಗಡೆಯಾದ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇನ್ಫೋಸಿಸ್‌ನ 2002-03ನೇ ಇಸವಿಯ ವಾರ್ಷಿಕ ಲೆಕ್ಕಪಟ್ಟಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದಾದರೆ :

  • 2002-03 ನೇ ಇಸವಿಯ ನಿವ್ವಳ ಲಾಭ 957.93 ಕೋಟಿ ರುಪಾಯಿ.
  • 2001-02 ನೇ ಇಸವಿಯಲ್ಲಿ ಕಂಪನಿ ಗಳಿಸಿದ್ದ ನಿವ್ವಳ ಲಾಭ 807.96 ಕೋಟಿ ರುಪಾಯಿ.
  • 2003ನೇ ಇಸವಿಯ ಜನವರಿಯಿಂದ ಮಾರ್ಚ್‌ವರೆಗಿನ ತ್ರೆೃಮಾಸಿಕ (ವಿತ್ತ ವರ್ಷದ ನಾಲ್ಕನೇ ತ್ರೆೃಮಾಸಿಕ) ದಲ್ಲಿ ಕಂಪನಿ ಗಳಿಸಿದ ಆದಾಯ 1,019.85 ಕೋಟಿ ರುಪಾಯಿ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ಗಳಿಸಿದ್ದ ಆದಾಯ 680.14 ಕೋಟಿ ರುಪಾಯಿ.
  • 5 ರುಪಾಯಿಯ ಪ್ರತಿ ಷೇರಿಗೆ ಕಂಪನಿ ಘೋಷಿಸಿರುವ ಅಂತಿಮ ಡಿವಿಡೆಂಡ್‌ ಮೌಲ್ಯ 14.50 ರುಪಾಯಿ. ಅಂದರೆ 5 ರು.ನ ಪ್ರತಿ ಷೇರಿಗೆ ಶೇ.290 ಮೌಲ್ಯ ದೊರೆತಿದೆ.
  • ಪ್ರತಿ ಷೇರಿನ ಮೇಲೆ 144.68 ರುಪಾಯಿ ಸಂಪಾದನೆ. ಕಳೆದ ವರ್ಷ ಈ ಸಂಪಾದನೆ 122.12 ರುಪಾಯಿ ಆಗಿತ್ತು .
  • ಹಣಕಾಸಿನ ಸೇವೆಗಳ ವಿಭಾಗವು ಕಂಪನಿಯ ಬೆಳವಣಿಗೆಯ ಪ್ರಮುಖ ಪಾತ್ರ ವಹಿಸಿದ್ದು - 1,355.94 ಕೋಟಿ ರುಪಾಯಿಗಳ ಮಾರಾಟ ದಾಖಲೆ ಸ್ಥಾಪಿಸಿದೆ. ಕಳೆದ ವರ್ಷ ಈ ಮೊತ್ತ 953.98 ಕೋಟಿ ರುಪಾಯಿಗಳಷ್ಟಿತ್ತು . ಅಂದರೆ ಈ ಸಾಲಿನಲ್ಲಿ 431.88 ಕೋಟಿ ರುಪಾಯಿಗಳಷ್ಟಿರುವ ಲಾಭದ ಪ್ರಮಾಣ, ಕಳೆದ ಸಾರಿ 350.87 ಕೋಟಿ ರುಪಾಯಿ ಆಗಿತ್ತು .
  • ಉತ್ಪನ್ನಗಳ ಮಾರಾಟದಿಂದ ಬಂದ ಮೊತ್ತ 597.87 ಕೋಟಿ ರುಪಾಯಿ. ಈ ಮೊತ್ತ ಕಳೆದ ವರ್ಷ 350.87 ಕೋಟಿ ರುಪಾಯಿ. ಅಂದರೆ ನಿವ್ವಳ ಆದಾಯವು ಕಳೆದ ವರ್ಷದ ಮೊತ್ತ 152.76 ಕೋಟಿ ರುಪಾಯಿಗಳಿಂದ 196.14 ಕೋಟಿ ರುಪಾಯಿಗೆ ಹೆಚ್ಚಿದೆ.
  • ಟೆಲಿಕಾಂ ವಿಭಾಗದಿಂದ ಇನ್ಫೋಸಿಸ್‌ ಗಳಿಸಿರುವ ಆದಾಯ 543.14 ಕೋಟಿ ರುಪಾಯಿ. ಕಳೆದ
  • ವರ್ಷ ಈ ಮೊತ್ತ 406.79 ಕೋಟಿ ರುಪಾಯಿ. ನಿವ್ವಳ ಲಾಭದ ಲೆಕ್ಕದಲ್ಲಿ ಹೇಳುವುದಾದರೆ, ಕಳೆದ ವರ್ಷ 191.16 ಕೋಟಿ ರುಪಾಯಿಗಳಷ್ಟಿದ್ದ ಲಾಭ 212.39 ಕೋಟಿ ರುಪಾಯಿಗೆ ಹೆಚ್ಚಿದೆ.
ಹೊಸ ನಂಟು, ಮುಂದುವರಿದ ನಾಗಾಲೋಟ

ಸಾಗರೋತ್ತರ ಕಂಪನಿಗಳೊಂದಿಗೆ ವ್ಯಾಪಾರ ಒಡಂಬಡಿಕೆಗಳನ್ನು ಮುಂದುವರಿಸಿರುವ ಇನ್ಫೋಸಿಸ್‌- ಪ್ರಸ್ತುತ ಅಮೆರಿಕ ಮೂಲದ, ತಂತ್ರಜ್ಞಾನ ಸೇವೆಗಳನ್ನು ಒದಗಿಸುವ PerformanceRetail, Inc ಕಂಪನಿಯಾಂದಿಗೆ ವ್ಯಾಪಾರ ಒಡಂಬಂಡಿಕೆ ಸಾಧಿಸಿದೆ.

ವ್ಯಾಪಾರದ ಬಹುಪಾಲು ವಹಿವಾಟನ್ನು ಅಮೆರಿಕದಲ್ಲಿ ಹೊಂದಿರುವುದರಿಂದ, ಕೊಲ್ಲಿ ಯುದ್ಧದ ಪರಿಣಾಮ ಇನ್ಫೋಸಿಸ್‌ನ ಪ್ರಗತಿಯ ಮೇಲೆ ಏಟು ಬೀಳಬಹುದೆಂದು ವಿಶ್ಲೇಷಕರು ಅಂದಾಜು ಮಾಡಿದ್ದರು. ಆದರೆ, ಭಾರೀ ಎನ್ನುವ ಪ್ರಗತಿಯನ್ನು ಇನ್ಫೋಸಿಸ್‌ ದಾಖಲಿಸದಿದ್ದರೂ- ನಿರಾಶಾದಾಯಕ ಆರ್ಥಿಕ ಹಿಂಜರಿತ ಸಂದರ್ಭದಲ್ಲಿಯೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಇದೇ ಅವಧಿಯಲ್ಲಿ ಶ್ರೀಧರ್‌ ಅಯ್ಯಂಗಾರ್‌ ಅವರನ್ನು ಇನ್ಫೋಸಿಸ್‌ನ ಹೆಚ್ಚುವರಿ ನಿರ್ದೇಶಕರಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಆದೇಶ ಹೊರಡಿಸಿರುವುದಾಗಿ ಇನ್ಫೋಸಿಸ್‌ನ ರಾಜಗುರು ಎನ್‌.ಆರ್‌. ನಾರಾಯಣ ಮೂರ್ತಿ ತಿಳಿಸಿದ್ದಾರೆ.

(ಪಿಟಿಐ)

Post your views

ಪೂರಕ ಓದಿಗೆ-
ನಂದನ್‌ ನಿಲೇಕಣಿ ಸಂದರ್ಶನ
‘ಗುಡಿಯನೆಂದು ಕಟ್ಟದಿರಿ’
ನೆಹರೂ ಮೂಸೆಯಲ್ಲಿ ಮೂಡಿದ ನಾರಾಯಣಮೂರ್ತಿ

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X