• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡ ಮಕ್ಕಳ ಕೈಲಿ ಕಂಪ್ಯೂಟರ್‌ ಮೌಸ್‌ ಇಟ್ಟ ಇಂಟೆಲ್‌

By Staff
|

Underprivileged get an opportunity to log on to PCs. Thanks to Intelಬೆಂಗಳೂರು : ಸೌಕರ್ಯ ವಂಚಿತ ಮಕ್ಕಳ ಕೈಗೆ ಹೆಸರಾಂತ ಐಟಿ ಕಂಪನಿ ಇಂಟೆಲ್‌, ಕಂಪ್ಯೂಟರ್‌ ಮೌಸ್‌ ಕೊಟ್ಟಿದೆ.

ಜಕ್ಕೂರು ಬಳಿಯ ಸಿಎಲ್‌ಟಿ (Childrens Lovecastles Trust) ಯಲ್ಲಿ ಇಂಟೆಲ್‌ ಕಂಪ್ಯೂಟರ್‌ ಕ್ಲಬ್‌ಹೌಸ್‌ (ಐಸಿಸಿ) ಶುರುವಾಗಿದೆ.

ಮಕ್ಕಿಕಾಮಕ್ಕಿ ಪಾಠದಿಂದ ಹೊರಬಂದು, ತಾವೇ ಡಿಜಿಟಲ್‌ ಕಲೆ ಮೂಡಿಸುವ, ತಾವೇ ಕಥೆ ಬರೆದು ಪುಟ್ಟ ಚಿತ್ರ ತೆಗೆದು ಎಡಿಟ್‌ ಮಾಡುವ ಅವಕಾಶ ಈ ಕ್ಲಬ್‌ನಲ್ಲಿ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಸಮುದಾಯ ಕೇಂದ್ರಿತ ಯೋಜನೆಗಳನ್ನೂ ಮಕ್ಕಳು ಖುದ್ದು ಮಾಡಬಹುದಾಗಿದೆ ಎಂದು ಇಂಟೆಲ್‌ ಏಷ್ಯಾ ಪ್ರಾದೇಶಿಕ ಶಿಕ್ಷಣ ಮ್ಯಾನೇಜರ್‌ ದೇಬ್‌ಜಾನಿ ಘೋಷ್‌ ಬುಧವಾರ ಸುದ್ದಿಗಾರರಿಗೆ ಹೇಳಿದರು.

ಎಂಟರಿಂದ 18 ವರ್ಷ ವಯಸ್ಸಿನ 1,200 ಬಡ ಮಕ್ಕಳಿಗೆ ಇಂಟೆಲ್‌ ಕ್ಲಬ್‌ ಹೌಸ್‌ನಲ್ಲಿ ಕಂಪ್ಯೂಟರ್‌ ಪಾಠ ನಡೆಯಲಿದೆ. ಇದಕ್ಕಾಗೇ 32 ಆಧುನಿಕ ಕಂಪ್ಯೂಟರ್‌ಗಳಿವೆ.

ಬೋಸ್ಟನ್‌ನ ಮ್ಯೂಸಿಯಂ ಆಫ್‌ ಸೈನ್ಸ್‌ ಹಾಗೂ ಎಂಐಟಿ ಮೀಡಿಯಾ ಲ್ಯಾಬೊರೇಟರಿಯಲ್ಲಿನ ತದ್ರೂಪು ತಂತ್ರಜ್ಞಾನ ಇರುವ ಇಂಟೆಲ್‌ ಕಂಪ್ಯೂಟರ್‌ ಕ್ಲಬ್‌ಹೌಸ್‌ನ ಒಂದು ಘಟಕ ಈಗಾಗಲೇ ದೆಹಲಿಯಲ್ಲಿದೆ.

ಸರ್ಕಾರ, ಕಾರ್ಪೊರೇಟ್‌ ವಲಯ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದ ಪರಿಕಲ್ಪನೆಯಿಂದ ಈ ಯೋಜನೆ ಹುಟ್ಟಿದೆ. ಹಳ್ಳಿಗಳಲ್ಲಿ ಇ- ಆಡಳಿತ ಜಾರಿಗೆ ತರುವ ಮುನ್ನ ಪೂರ್ವಭಾವಿ ಜಾಗೃತಿ ಯೋಜನೆ ಪ್ರಾರಂಭಿಸುವುದೂ ನಮ್ಮ ಕನಸು ಎಂದು ಸಿಎಲ್‌ಟಿಯ ವ್ಯವಸ್ಥಾಪಕಿ ಹಾಗೂ ಮ್ಯಾನೇಜಿಂಗ್‌ ಟ್ರಸ್ಟಿ ಭಾಗ್ಯ ರಂಗಾಚಾರ್‌ ತಿಳಿಸಿದರು.

(ಪಿಟಿಐ)

Post your views

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more