ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇನ್ಸಾಟ್‌-3ಎ’ ಉಪಗ್ರಹ ಉಡಾವಣೆ ಮುಂದಕ್ಕೆ

By Staff
|
Google Oneindia Kannada News

ಬೆಂಗಳೂರು : ಕೊನೆ ನಿಮಿಷದ ತಾಂತ್ರಿಕ ಅನಿಶ್ಚಿತತೆಯ ಕಾರಣ ಇನ್ಸಾಟ್‌-3ಎ ಉಪಗ್ರಹ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಫ್ರೆಂಚ್‌ನ ಗಯಾನದ ಸ್ಪೇಸ್‌ಪೋರ್ಟ್‌ನಲ್ಲಿ ಬುಧವಾರ ಮುಂಜಾನೆ ಉಪಗ್ರಹದ ಉಡ್ಡಯನವಾಗಬೇಕಿತ್ತು. ಆದರೆ, ಟೆಲೆಮೆಟ್ರಿ ಟ್ರಾನ್ಸ್‌ಮಿಟರ್‌ಗಳ ಪೈಕಿ ಎರಡರ ಸೂಚನಾ ಶಕ್ತಿ ನಿರೀಕ್ಷೆಗಿಂತ ಕಡಿಮೆ ಇದ್ದ ಕಾರಣ ಅಂತಿಮ ಕ್ಷಣಗಳಲ್ಲಿ ಉಡ್ಡಯನವನ್ನು ಮುಂದೂಡಲಾಯಿತು. ಸದ್ಯದಲ್ಲೇ ಯಾವ ದಿನ ಉಪಗ್ರಹವನ್ನು ಉಡಾಯಿಸಬೇಕೆಂಬ ದಿನಾಂಕ ನಿರ್ಧರಿಸುವುದಾಗಿ ಇಸ್ರೋ ಹೇಳಿದೆ.

ಕಳೆದ 8 ತಿಂಗಳಿಂದ ಇಸ್ರೋ ಈ ಉಪಗ್ರಹ ಸಿದ್ಧ ಪಡಿಸಿತ್ತು. ಈ ಮಹತ್ವಾಂಕಾಂಕ್ಷೆಯ ಉಪಗ್ರಹ ಉಡಾವಣೆಗೆ ಅನೇಕರು ಕಾತರದಿಂದ ಕಾಯುತ್ತಿದ್ದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X