• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಶ್ರಮದಿ ಸಂಧ್ಯಾಜೀವಿಗಳು, ಕೃಷ್ಣ ಕೃಷ್ಣ-ಪೇಜಾವರ ಶ್ರೀ

By Staff
|

ಕೋಲಾರ : ಗಂಡ, ಹೆಂಡತಿ ಮಕ್ಕಳಿರುವ ಪುಟ್ಟ ಸಂಸಾರ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ. ಇದರಿಂದಾಗಿ ಸಂಧ್ಯಾ ಕಾಲದ ವೃದ್ಧ ತಂದೆ- ತಾಯಿಗಳು ವೃದ್ಧಾಶ್ರಮ ಸೇರುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ವಿಷಾದಿಸಿದ್ದಾರೆ.

ಮುಳಬಾಗಿಲು ತಾಲ್ಲೂಕು ಕಾಂತರಾಜ ವೃತ್ತದ ಬಳಿಯ ಫಾರಂ ಒಂದರಲ್ಲಿ ಜಯಲಕ್ಷ್ಮಿ ನಾರಾಯಣ ಶೆಟ್ಟಿ ದತ್ತಿ ಸಂಸ್ಥೆ ನಿರ್ಮಿಸಲು ಉದ್ದೇಶಿಸಿರುವ ವೃದ್ಧಾಶ್ರಮದ ಕಟ್ಟಡಕ್ಕೆ ಮಂಗಳವಾರ (ಏ. 8) ಕೆಸರುಗಲ್ಲು ಹಾಕಿ ತೀರ್ಥರು ಮಾತಾಡಿದರು. ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ಅನಪೇಕ್ಷಿತ ವೃದ್ಧಾಶ್ರಮಗಳು ಅತ್ಯವಶ್ಯಕವಾಗುತ್ತಿವೆ. ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ಹಿರಿಯ ಜೀವಗಳ ಇಳಿ ಬದುಕು ದುಸ್ತರವಾಗುತ್ತಿದೆ. ಈ ಬೆಳವಣಿಗೆಯಿಂದ ಈಗ ಮನೆಯಲ್ಲಿರುವ ಮಕ್ಕಳ ಮನಸ್ಸು ಕೂಡ ಕೆಡುತ್ತದೆ. ತಮ್ಮ ತಂದೆ- ತಾಯಿಗಳಿಗೆ ತಂದ ಗತಿಯನ್ನು ಮುಂದೆ ಅವರವರ ಮಕ್ಕಳು ತರುವ ಅಪಾಯ ಇರುತ್ತದೆ. ನಮ್ಮ ಸಾಮಾಜಿಕ ಜೀವನದ ಹಳಿಯನ್ನೇ ತಪ್ಪಿಸುವ ವಿಷಯವಿದು ಎಂದು ಸ್ವಾಮೀಜಿ ಖೇದದಿಂದ ಹೇಳಿದರು.

ಭೋಗ ಜೀವನವ ಬದಿಗೊತ್ತಿ , ಶ್ರೀರಾಮಚಂದ್ರನಂತೆ ತ್ಯಾಗ ಹಾಗೂ ಔದಾರ್ಯವನ್ನು ಅಳವಡಿಸಿಕೊಳ್ಳುವುದೇ ಭಗವಂತನ ಪೂಜೆ. ಅನ್ಯರ ಸುಖಕ್ಕಾಗಿ ದುಡಿಯುವುದರಲ್ಲಿ ಸಿಗುವ ಆನಂದವೇ ಪರಮಾನಂದ. ಇಂಥಾ ಆನಂದ ಕೊಡುವ ಸಮಾಜ ಸೇವೆಯ ಕೆಲಸವನ್ನು ನಾರಾಯಣ ಶೆಟ್ಟರು ಮಾಡುತ್ತಿದ್ದಾರೆ ಎಂದು ಪೇಜಾವರ ಶ್ರೀ ಶ್ಲಾಘಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more