• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾ ಹೆಂಗಸು ಭಾರತಕ್ಕೆ ತಂದಳೆ ಹೊಸ ರೋಗ?

By Staff
|

ಮುಂಬಯಿ : ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ (ಎಸ್‌ಎಆರ್‌ಎಸ್‌) ನಿಂದ ಬಳಲುತ್ತಿರುವ ಅಮೆರಿಕನ್‌ ಹೆಂಗಸೊಬ್ಬರು ನಗರದ ಕಸ್ತೂರಿ ಬಾ ಆಸ್ಪತ್ರೆಗೆ ಸೇರಿದ್ದು, ಭಾರತದಲ್ಲಿ ಈ ರೋಗವಿರುವ ಮೊದಲ ಮಹಿಳೆ ಈಕೆ ಎಂದು ವೈದ್ಯರು ಶಂಕಿಸಿದ್ದಾರೆ.

ಗಂಟಲು ಸೋಂಕಿನಿಂದ ಉಂಟಾಗುವ ಈ ರೋಗ ಭಾರತಕ್ಕೆ ಹೊಸದಾಗಿ ಕಾಲಿಟ್ಟಿರುವ ಆತಂಕವಿದೆ. ರೆಬೆಕಾ ರಾಲಗ್‌ ಎಂಬ 23ರ ಹರೆಯದ ಶಿಕಾಗೋ ಫೋಟೋಗ್ರಾಫರ್‌ ಏಪ್ರಿಲ್‌ 2ನೇ ತಾರೀಕು ಭಾರತಕ್ಕೆ ಬಂದಿಳಿದರು. ಭಾರತಕ್ಕೆ ಬರುವ ಮುನ್ನ ಈಕೆ ಕಾಂಬೋಡಿಯಾ, ಚೀನಾ, ವಿಯಟ್ನಾಂ ಹಾಗೂ ಥೈಲ್ಯಾಂಡ್‌ ಸುತ್ತಿ ಬಂದಿದ್ದರು. ಕಾಂಬೋಡಿಯಾ ಹೊರತು ಪಡಿಸಿ ಮಿಕ್ಕೆಲ್ಲಾ ದೇಶಗಳಲ್ಲಿ ಎಸ್‌ಎಆರ್‌ಎಸ್‌ ರೋಗಿಗಳಿದ್ದಾರೆ. ಅಲ್ಲಿಂದ ಈಕೆಗೂ ರೋಗದ ಸೋಂಕು ತಗುಲಿರಬಹುದು ಎಂದು ವೈದ್ಯರು ಅಂದಾಜು ಮಾಡಿದ್ದಾರೆ.

ಕಳೆದ ಭಾನುವಾರ (ಏ. 6) ತೀವ್ರ ಜ್ವರದಿಂದ ಬಳಲುತ್ತಿದ್ದ ರೆಬೆಕಾ ಕಸ್ತೂರಿ ಬಾ ಆಸ್ರತ್ರೆಗೆ ಸೇರಿದರು. ನಂತರ ವೈದ್ಯರು ಸಾಕಷ್ಟು ತಪಾಸಣೆ ಮಾಡಿದ ನಂತರ ರೋಗ ಇರುವ ಅನುಮಾನ ಬಂದಿತು. ಏಷ್ಯಾ ಮತ್ತು ಕೆನಡಾದಲ್ಲಿ ಸುಮಾರು 100 ಜನರನ್ನು ಈ ರೋಗ ಬಲಿ ತೆಗೆದುಕೊಂಡಿರುವುದರಿಂದ ಭಾರತದ ವೈದ್ಯರಲ್ಲಿ ಈಗ ಆತಂಕ ಹುಟ್ಟಿದೆ.

ಬೆಂಗಳೂರು ವರದಿ : ಸಿಂಗಪೂರದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೇಂದ್ರ ಸರಕಾರ ಕಳುಹಿಸಿರುವ ಕಾಯಿಲೆ ನಿಯಂತ್ರಣ ಮಾರ್ಗ ಸೂಚಿಯನ್ನು ವಿಮಾನ ನಿಲ್ದಾಣ ಹಾಗೂ ಪಾಲಿಕೆ ಅಧಿಕಾರಿಗಳಿಗೆ ವಿವರಿಸಲಾಗಿದೆ. ರೋಗ ಹರಡದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಸಾರ್ಸ್‌ ರೋಗದ ಲಕ್ಷಣ- 38 ಸೆಂಟಿಗ್ರೇಡ್‌ನಲ್ಲಿ ಸಣ್ಣ ಜ್ವರ, ಮೈಕೈ ನೋವು, ಶ್ವಾಸಕೋಶದ ತೊಂದರೆಗಳು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಇರುವವರು ಈ ರೋಗದ ಬಗ್ಗೆ ಸಂಶಯಪಡಬಹುದು. ಅಲ್ಲದೆ ಕಾಯಿಲೆ ಇರುವ ದೇಶದಿಂದ ಇತ್ತೀಚೆಗೆ ವಾಪಸ್ಸಾದವರು ಈ ರೋಗದ ಕುರಿತು ಜಾಗರೂಕರಾಗಿರಬೇಕು.

ದೆಹಲಿ ವರದಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಎಸ್‌ಎಆರ್‌ಎಸ್‌ ರೋಗದ ಸೋಂಕು ತಗುಲದಂತೆ ಎಚ್ಚರ ವಹಿಸಲು ಎಲ್ಲಾ ಸಿಬ್ಬಂದಿಗೆ ರಕ್ಷಾ ಮುಖ ಕವಚ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚುವರಿ ಕವಚಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲಾಗಿದ್ದು, ಅಗತ್ಯವಿರುವ ಅಧಿಕಾರಿಗಳಿಗೆ ಪೂರೈಸಲಾಗುವುದು ಎಂದು ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಸುಜಿತ್‌ ಕುಮಾರ್‌ ಹೇಳಿದ್ದಾರೆ.

ಜಿರಳೆಗಳಿಂದಲೂ ಈ ರೋಗ ಹರಡುತ್ತದೆ ಎಂದು ಗುಲ್ಲೆದ್ದಿದ್ದು, ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರು ನ್ಯುಮೋನಿಯಾ ನಿಯಂತ್ರಣದ ನೋಡಲ್‌ ಅಧಿಕಾರಿಗಳಾಗಿರುತ್ತಾರೆ. ಈ ಕಾಯಿಲೆ ಕುರಿತಂತೆ ಯಾವುದೇ ಸಂಶಯಗಳಿಗೆ ಅವರಿಂದ ಉತ್ತರ ಪಡೆಯಬಹುದು. ದೂರವಾಣಿ ಸಂಖ್ಯೆಗಳು : 080- 2386331, 2873151, 2873263. ಫ್ಯಾಕ್ಸ್‌- 2386331.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more