ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ‘ವ್ಯಾಟ್‌’ ಜಾರಿ ಅನಿರ್ದಿಷ್ಟಾವಧಿ ಮುಂದಕ್ಕೆ

By Staff
|
Google Oneindia Kannada News

ಬೆಂಗಳೂರು : ಇಂದಿನಿಂದ (ಏಪ್ರಿಲ್‌ 1,2003) ಜಾರಿಗೆ ಬರಬೇಕಿದ್ದ ವಿವಾದಿತ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌ ) ಅಳವಡಿಕೆ ಪದ್ಧತಿಯನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ.

ವಾಣಿಜ್ಯ ತೆರಿಗೆ ಆಯುಕ್ತ ಸಿ. ಮನೋಳಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಮೌಲ್ಯ ವರ್ಧಿತ ತೆರಿಗೆ ವಿಧೇಯಕವನ್ನು ಕೇಂದ್ರ ಸರಕಾರದ ಮತ್ತು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗಿದೆ. ಕೇಂದ್ರದ ಅನುಮತಿ ದೊರೆತ ತಕ್ಷಣ ವ್ಯಾಟ್‌ ಜಾರಿ ಮಾಡಲಾಗುವುದು ಎಂದು ಮನೋಳಿ ಹೇಳಿದರು.

ಮೌಲ್ಯ ತೆರಿಗೆ ಕಾಯ್ದೆಯಡಿಯಲ್ಲಿ ನೋಂದಣಿ ಪಡೆದ ಮತ್ತು ಈಗಾಗಲೇ ತಾತ್ಕಾಲಿಕ ವ್ಯಾಟ್‌ ನೋಂದಣಿ ಮತ್ತು ತೆರಿಗೆದಾರರ ಸೂಚ್ಯ ಸಂಖ್ಯೆ ಪಡೆದ ವ್ಯಾಪಾರಸ್ಥರಿಗೆ ಪ್ರಸ್ತುತ 1957ರ ಮಾರಾಟ ತೆರಿಗೆ ಕಾಯ್ದೆ ಅನ್ವಯವಾಗುತ್ತದೆ ಎಂದು ಮನೋಳಿ ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X