• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಕ್ಷಗಾನದ ವೇಷದಲ್ಲಿ ದ.ಕ. ರಾಜಕಾರಣಿಗಳು

By Staff
|

*ದಟ್ಸ್‌ಕನ್ನಡ ಬ್ಯೂರೋ

ಮಾರ್ಚ್‌ 29ರ ಶನಿವಾರ ರಾತ್ರಿ ದಕ್ಷಿಣ ಕನ್ನಡದ ರಾಜಕಾರಣಿಗಳು ಯಕ್ಷಗಾನದ ವೇಷ ಹಾಕಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ರಾಜಕಾರಣಿಗಳ ಪೌರಾಣಿಕ (ರಾಜಕೀಯವಲ್ಲ ಮತ್ತೆ !) ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಒಂದು ರಾತ್ರಿಯಲ್ಲಿ ಮೂರು ಯಕ್ಷಗಾನ ಪ್ರಸಂಗಗಳು ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡಲಿದೆ. ಮಹಿಷ ಮರ್ದಿನಿ, ಸೀತಾ ಕಲ್ಯಾಣ, ಮಾನದಿಗೆದ ಮಾನೆ(ತುಳು) ಪ್ರಸಂಗಗಳು ಮಾರ್ಚ್‌ 29ರ ರಾತ್ರಿಯನ್ನು ಬೆಳಕಾಗಿಸಲಿವೆ. ಈ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಕಲಾವಿದರು ಯಕ್ಷಗಾನ ವೇಷದಲ್ಲಿ ರಂಗಸ್ಥಳಕ್ಕೆ ಪ್ರವೇಶಿಸಲಿದ್ದಾರೆ.

ಶಾಸಕರಾದ ವಿಜಯಕುಮಾರ್‌ ಶೆಟ್ಟಿ , ಎನ್‌. ಯೋಗೀಶ್‌ ಭಟ್‌, ಅಭಯ ಚಂದ್ರಜೈನ್‌, ಡಿ. ವಿ. ಸದಾನಂದ ಗೌಡ ಇವರೊಂದಿಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು, ಕ್ಯಾಂಪ್ಕೋ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಮತ್ತಿತರರು ಕೂಡ ಅಂದು ಯಕ್ಷಗಾನದ ಬಣ್ಣ ಹಚ್ಚಲಿದ್ದಾರೆ.

ರಾಜಕಾರಣಿಗಳ ಯಕ್ಷಗಾನದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಳು ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿವೆ.

ದಕ್ಷಿಣ ಕನ್ನಡದ ವೈವಿಧ್ಯಮಯ ಸಂಸ್ಕೃತಿಯ ಹರವು ವಿಶಾಲವಾದುದು. ಯಕ್ಷಗಾನ, ಭೂತ ಕೋಲ, ಪಾಡ್ದನ, ಕಬಿತೆ, ನಾಗಾರಾಧನೆ, ಕಂಬಳ, ಕೊಂಕಣಿ ಸಮುದಾಯದ ಆಚರಣೆಗಳು, ತುಳುವರ ಸಂಪ್ರದಾಯಗಳು, ಬ್ಯಾರಿ ಜನಾಂಗದ ಸಂಸ್ಕೃತಿ...ಎಲ್ಲವನ್ನೂ ಸಾಂಸ್ಕೃತಿಕ ಹಬ್ಬದಲ್ಲಿ ಬಿಂಬಿಸುವುದು ಸಾಧ್ಯವಿಲ್ಲವಾದರೂ, ಈ ಬಾರಿ ಪ್ರಮುಖವಾದ ಎಲ್ಲ ಸಾಂಸ್ಕೃತಿಕ ಆಚರಣೆಗಳನ್ನೂ ಬಿಂಬಿಸುವ ಪ್ರಯತ್ನವನ್ನು ಆಯೋಜಕರು ನಡೆಸುತ್ತಿದ್ದಾರೆ.

ಸಾಲು ಸಾಲು ದೀಪ !

ಸಾಂಸ್ಕೃತಿಕ ಹಬ್ಬದಲ್ಲಿ , ರಾಜಕಾರಣಿಗಳ ಯಕ್ಷಗಾನದ ಆಕರ್ಷಣೆ , ಕೊಂಕಣಿ ಗುಮ್ಮಟೆ ನೃತ್ಯ, ಶಿವಳ್ಳಿ ತುಳು ಬ್ರಾಹ್ಮಣರ ಹಾಸ್ಯ ಪ್ರಸಂಗಗಳು, ಮಹ್ಮದ್‌ ಮಾರಿಪಳ್ಳ ನೇತೃತ್ವದಲ್ಲಿ ಬ್ಯಾರಿ ಸಮುದಾಯದ ದಫ್‌ ನೃತ್ಯ, ಬ್ಯಾರಿ ಪದ್ಯಗಳು, ವಸಂತ ಕದ್ರಿ ಸಾರಥ್ಯದಲ್ಲಿ ಭಗವದ್ಗೀತೆ ಪಠಣ.. ಹೀಗೆ, ಮಾರ್ಚ್‌ 29ರ ರಾತ್ರಿ ಪೂರ ಸಾಲು ಸಾಲು ಕಾರ್ಯಕ್ರಮಗಳು.

ಯಕ್ಷಗಾನದಲ್ಲಿ ಪ್ರೇಮ ಪ್ರಸಂಗಗಳು ಎಂಬ ಪ್ರತ್ಯೇಕ ಮನೋರಂಜನಾ ಕಾರ್ಯಕ್ರಮ, ಭೂತ ಕೋಲ, ಜಾನಪದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಶರವು ಮಹಾಗಣಪತಿ ದೇವಳದ ನಿರ್ವಹಣಾ ಟ್ರಸ್ಟಿ ರಾಘವೇಂದ್ರ ಶಾಸ್ತ್ರಿ ದಕ್ಷಿಣ ಕನ್ನಡ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸುವರು. ಸಾರಿಗೆ ಸಚಿವ ಬಿ. ರಮಾನಾಥ ರೈ, ಸಂಸದ ಧನಂಜಯ ಕುಮಾರ್‌, ಮೇಯರ್‌ ಶಶಿಧರ್‌ ಹೆಗ್ಡೆ ಸಮಾರಂಭದಲ್ಲಿ ಭಾಗವಹಿಸುವರು. ಯಕ್ಷಗಾನದ ವೇಷ ಕಟ್ಟುತ್ತಾರಾ ? ಉತ್ತರ ಕೃಷ್ಣ ಪರಮಾತ್ಮನಿಗೇ ಗೊತ್ತು !

ವಾರ್ತಾ ಸಂಚಯ

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more