ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ : ಏರ್‌ ಇಂಡಿಯಾ ಪ್ರಯಾಣ ದರ ಹೆಚ್ಚಳ

By Staff
|
Google Oneindia Kannada News

ನವದೆಹಲಿ: ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘದ ನಿರ್ಣಯದನ್ವಯ ಏಪ್ರಿಲ್‌ 16ರಿಂದ ವಿಮಾನ ಪ್ರಯಾಣ ದರವನ್ನು ಹೆಚ್ಚಿಸಲು ಏರ್‌ ಇಂಡಿಯಾ ನಿರ್ಧರಿಸಿದೆ.

ಈ ನಿರ್ಣಯದನ್ವಯ ವಿಮಾನ ಪ್ರಯಾಣ ದರದಲ್ಲಿ ಶೇ. 5ರಷ್ಟು ಹೆಚ್ಚಳವಾಗಲಿದೆ. ಜೊತೆಗೆ ಏಪ್ರಿಲ್‌ 1ರಿಂದ ಪ್ರತಿ ಟಿಕೆಟ್‌ಗೆ 10 ಡಾಲರು ಹೆಚ್ಚಿನ ಇಂಧನ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ಕಂಪೆನಿಗಳು ಯುದ್ಧ ಅಪಾಯ ವಿಮೆಯನ್ನು ರದ್ದುಗೊಳಿಸಿವೆ.

ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಹಾನಿ ತುಂಬಲು ಕುವೈತ್‌ನಿಂದ ಪ್ರಯಾಣಿಸುವ ವಿಮಾನಯಾನ ದರಕ್ಕೆ 3 ಸಾವಿರ ರುಪಾಯಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶನಾವಾಜ್‌ ಹುಸೇನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X