ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಟ್‌ ವಿರೋಧ: ಬೆಂಗಳೂರು ಮಾರುಕಟ್ಟೆಗಳು ಬಿಕೋ

By Staff
|
Google Oneindia Kannada News

ಬೆಂಗಳೂರು : ಮೌಲ್ಯ ವರ್ಧಿತ ತೆರಿಗೆ ಪದ್ಧತಿ (ವ್ಯಾಟ್‌) ವಿರೋಧಿಸಿ ಕರ್ನಾಟಕ ವ್ಯಾಪಾರ ಮತ್ತು ಉದ್ಯಮಿಗಳ ಸಂಘ ಕರೆ ಕೊಟ್ಟಿದ್ದ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿನವೂ ವ್ಯಾಪಾರಿ ಭರಾಟೆಯಿಂದ ಗಿಜಿಗುಡುತ್ತಿದ್ದ ಆರ್‌.ಎಂ.ಸಿ.ಯಾರ್ಡ್‌, ಸಿಟಿ ಮಾರ್ಕೆಟ್‌, ಮೆಜೆಸ್ಟಿಕ್‌, ಚಿಕ್ಕಪೇಟೆ, ಜೆ.ಸಿ.ರಸ್ತೆ, ಕಲಾಸಿ ಪಾಳ್ಯ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಯಶವಂತಪುರ, ಜಯನಗರ ಮೊದಲಾದ ಜಾಗೆಗಳಲ್ಲಿ ಮಂಗಳವಾರ (ಮಾ.25) ಅರ್ಧಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿದ್ದವು. ಕೆಲವೆಡೆಗಳಲ್ಲಿ ಶೇ.90ರಷ್ಟು ಅಂಗಡಿಗಳು ಮುಚ್ಚಿದ್ದರೆ, ಇನ್ನು ಕೆಲವೆಡೆ ನಿಧಾನವಾಗಿ ವರ್ತಕರು ವ್ಯಾಪಾರಕ್ಕೆ ಇಳಿದರು.

ಉದ್ದಿಮೆದಾರರು ಹಾಗೂ ವರ್ತಕರು ಲೆಕ್ಕ ಪತ್ರಗಳನ್ನು ಸರಿಯಾಗಿ ತೋರದಿದ್ದರೆ, ಇಲಾಖೆಯವರು ಸ್ಥಳದಲ್ಲೇ ದಂಡ ಹಾಕುವ ಪದ್ಧತಿ ವ್ಯಾಟ್‌.

ವ್ಯಾಟ್‌ ಪದ್ಧತಿಯಿಂದ ಹೀಗಾಗುತ್ತದೆ-

  • ತೆರಿಗೆಯ ಇನ್‌ವಾಯ್ಸ್‌ ನೀಡದಿದ್ದರೆ 5 ಸಾವಿರ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
  • ನೋಂದಾವಣೆಯ ಭದ್ರತಾ ಠೇವಣಿಯೇ 6 ತಿಂಗಳ ತೆರಿಗೆಗೆ ಸಮವಾಗಿದೆ.
  • ಮೋಸದಿಂದ ತೆರಿಗೆ ತಪ್ಪಿಸಿಕೊಳ್ಳುವವರಿಗೆ 1 ಲಕ್ಷ ರುಪಾಯಿಯಷ್ಟು ದಂಡ ಹಾಗೂ 6 ತಿಂಗಳಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಕೊಡಬಹುದು.
  • ಗಡುವಿನೊಳಗೆ ಲೆಕ್ಕಪತ್ರ ತೋರದಿದ್ದರೆ, ದಿನಂಪ್ರತಿ 200 ರುಪಾಯಿ ದಂಡ ಹಾಕಬಹುದು.
  • ವ್ಯಾಪಾರಿಗಳ ಜೇಬಿನಿಂದ ಹಿಡಿದು, ಮನೆ, ಅಂಗಡಿಗಳ ಇಂಚಿಂಚನ್ನೂ ಯಾವಾಗ ಬೇಕಾದರೂ ಅಧಿಕಾರಿಗಳು ತಲಾಷು ಮಾಡಬಹುದು.
ಏಪ್ರಿಲ್‌ 1ರಿಂದ ವ್ಯಾಟ್‌ ಪದ್ಧತಿ ಜಾರಿಗೆ ಬರಲಿದೆ. ಹೀಗಾಗಿ ತಮ್ಮ ಲೆಕ್ಕ ಪತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಸಿದ್ಧ ಮಾಡಿಟ್ಟುಕೊಳ್ಳಲು ಇರುವ ಗಡುವು ಚಿಕ್ಕದು. ಸಾಲದ್ದಕ್ಕೆ, ಈ ಪದ್ಧತಿಯ ಕೆಲವು ಅಂಶಗಳಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ಜತೆಗೆ ನಿಗದಿಪಡಿಸಿರುವ ದಂಡ ತೀರಾ ಅತಿಯಾಯಿತು ಅನ್ನುವುದು ಕರ್ನಾಟಕ ವ್ಯಾಪಾರ ಮತ್ತು ಉದ್ಯಮಿಗಳ ಸಂಘದ ತಗಾದೆ. ಈ ಕಾರಣಗಳಿಂದ ಮಂಗಳವಾರ ನಡೆಸಿದ ಪ್ರತಿಭಟನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗದಿದ್ದರೂ, ಭಾಗಶಃ ಪ್ರತಿಕ್ರಿಯೆ ದೊರೆತಿದೆ. ಆದರೆ, ಪ್ರತಿಭಟನೆಗೆ ಕಿಂಚಿತ್ತೂ ಜಗ್ಗದ ಸರ್ಕಾರ ವ್ಯಾಟ್‌ ಪದ್ಧತಿಯನ್ನು ಜಾರಿಗೆ ತರುವ ವಿಷಯದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಟ್ಟು ಹಿಡಿದಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X