ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತಾ ಪರಿವಾರ ವಿಲೀನದ ಕಿರಿಕ್ಕಿಗೆ ಮತ್ತಷ್ಟು ಕಿಕ್ಕು

By Staff
|
Google Oneindia Kannada News

ಬೆಂಗಳೂರು : ಸಂಯುಕ್ತ ಜನತಾ ದಳ ಮುಖಂಡ ರಾಮಕೃಷ್ಣ ಹೆಗಡೆ ಅನುಯಾಯಿಗಳು ಅಖಿಲ ಭಾರತ ಜನತಾ ದಳ (ಎಬಿಜೆಡಿ) ದ ಅಧ್ಯಕ್ಷ ಎಸ್‌.ಆರ್‌.ಬೊಮ್ಮಾಯಿಯವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಜನತಾ ಪರಿವಾರದ ಒಗ್ಗೂಡಿಸುವಿಕೆಯ ಗೊಂದಲ ಇನ್ನಷ್ಟು ಬಿಗಡಾಯಿಸಿದೆ.

ಕಳೆದ ಭಾನುವಾರ (ಮಾ.23) ಸಂಯುಕ್ತ ಜನತಾ ದಳದ ರಾಜ್ಯ ಘಟಕದ ವಕ್ತಾರರಾಗಿ ನೇಮಕಗೊಂಡ ಎನ್‌.ತಿಪ್ಪಣ್ಣ ಮಂಗಳವಾರ (ಮಾ.25) ಸುದ್ದಿಗೋಷ್ಠಿಯಲ್ಲಿ ಮಾತಾಡಿದರು. ತಮ್ಮನ್ನು ರಾಜ್ಯ ಘಟಕದ ವಕ್ತಾರರಾಗಿ ನೇಮಿಸಿರುವ ಪಕ್ಷದ ರಾಷ್ಟ್ರಾಧ್ಯಕ್ಷ ಶರದ್‌ ಯಾದವ್‌, ಜನತಾ ಪರಿವಾರದ ವಿಲೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಹೇಳಿದ್ದಾರೆ. ಆದರೆ, ವಿಲೀನ ಪ್ರಕ್ರಿಯೆಗೆ ಬೊಮ್ಮಾಯಿ ಅಡ್ಡಗೋಡೆ ಕಟ್ಟುತ್ತಾ ನಿಂತಿದ್ದಾರೆ ಎಂದು ತಿಪ್ಪಣ್ಣ ದೂರಿದರು.

ಹೆಗಡೆ ಮತ್ತಿತರ ನಾಯಕರು ವಿಲೀನ ಸೂತ್ರ ಹೊಸೆಯುವಂತೆ ಬೊಮ್ಮಾಯಿಯವರಿಗೆ ಹೇಳಿದ್ದರು. ಆದರೆ, ಅದನ್ನು ಕಿವಿ ಮೇಲೆ ಹಾಕಿಕೊಳ್ಳದ ಬೊಮ್ಮಾಯಿ ಎಬಿಜೆಡಿ ಎಂಬ ಪಕ್ಷ ಕಟ್ಟಿಬಿಟ್ಟರು. ಸಂಯುಕ್ತ ಜನತಾ ದಳ ಹಾಗೂ ಜಾತ್ಯತೀತ ಜನತಾದಳದ ನಾಯಕರ ಒಮ್ಮತವನ್ನು ಪಡೆಯದೆ ಈ ಕೆಲಸ ಮಾಡಿದ ಅವರು, ತಮ್ಮ ಕೆಲಸಕ್ಕೆ ಹೆಗಡೆ ಆಶೀರ್ವಾದ ಇದೆ ಎಂದು ಸುಳ್ಳು ಹೇಳಿಕೊಂಡರು. ಅಷ್ಟು ಸಾಲದೆಂಬಂತೆ ಹೊಸ ಪಕ್ಷದ ರಾಜ್ಯ ಘಟಕದ ಮುಖ್ಯ ಗಾದಿಗಳಿಗೆ ತೋಚಿದವರನ್ನು ತಂದು ಕೂರಿಸಿ, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರು ಎಂದು ತಿಪ್ಪಣ್ಣ ಕಿಡಿ ಕಾರಿದರು.

ಸಂಯುಕ್ತ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ನರಸಿಂಹಪ್ಪ , ಮಾಜಿ ಸಚಿವ ಟಿ.ಕೃಷ್ಣಪ್ಪ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ತಿಪ್ಪಣ್ಣ ನವರ ಜತೆಗಿದ್ದರು.

ನೆನಪಿನ ಶಕ್ತಿಯ ಅರೆಕೊರೆಯಿಂದ ಬಳಲುತ್ತಿರುವ ಹೆಗಡೆ ಅವರೀಗ ಇಂಗ್ಲೆಂಡಿನ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಲಗಿದ್ದಾರೆ. ಬೊಮ್ಮಾಯಿಗೆ ಇದೇ ಟ್ರಂಪ್‌ ಕಾರ್ಡ್‌ ಆಯಿತೆ ?

(ಪಿಟಿಐ)

ವಾರ್ತಾ ಸಂಚಯ
ಚಿಂತಾಮಣಿಯಲ್ಲಿ ಅಖಿಲ ಭಾರತ ಜನತಾದಳ ಉದಯ
ಹೆಗಡೆ ಮಿದುಳಿಗೆ ಶಂಟ್‌ ಸರ್ಜರಿ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X