ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ ಮಿದುಳಿಗೆ ಶಂಟ್‌ ಸರ್ಜರಿ

By Staff
|
Google Oneindia Kannada News

ಬೆಂಗಳೂರು : ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಇಂಗ್ಲೆಂಡಿನಲ್ಲಿ ಮಿದುಳಿನ ‘ಶಂಟ್‌ ಶಸ್ತ್ರಚಿಕಿತ್ಸೆ’ಯನ್ನು ಮಂಗಳವಾರ (ಮಾ.25) ಯಶಸ್ವಿಯಾಗಿ ಮಾಡಲಾಯಿತು.

ಲಂಡನ್ನಿನ ಕ್ರಾಮ್‌ವೆಲ್‌ ಆಸ್ಪತ್ರೆಯಲ್ಲಿ ಭಾರತೀಯ ಕಾಲಮಾನದಂತೆ ಬೆಳಗಿನ ಜಾವ 3 ಗಂಟೆಗೆ ಖ್ಯಾತ ನರ ತಜ್ಞ ಡಾ. ಆ್ಯಡಮ್ಸ್‌ ಹೆಗಡೆ ಅವರಿಗೆ ‘ಶಂಟ್‌ ಶಸ್ತ್ರಚಿಕಿತ್ಸೆ’ ಮಾಡಿದರು. ಮಿದುಳಿನಲ್ಲಿ ಒತ್ತಡವನ್ನು ಕಾಯ್ದುಕೊಳ್ಳುವುದಕ್ಕಾಗಿ ವಾಲ್ವ್‌ ಒಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಯಿತು.

ಹೆಗಡೆ ಅವರ ಖಾಸಗಿ ವೈದ್ಯ ಡಾ.ರಮಣ ರಾವ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾದುದನ್ನು ಸ್ಪಷ್ಟಪಡಿಸಿದರು. ರಮಣ ರಾವ್‌ ಅವರು ವರನಟ ರಾಜ್‌ಕುಮಾರ್‌ ಅವರ ಕುಟುಂಬ ವೈದ್ಯರೂ ಹೌದು.

ಹೆಗಡೆ ಅವರನ್ನು ವಾರ್ಡಿಗೆ ವರ್ಗಾಯಿಸಲಾಗಿದ್ದು, ಪ್ರಜ್ಞೆ ಬಂದಿದೆ. ಶಸ್ತ್ರಚಿಕಿತ್ಸೆಯ ನಂತರದ ವೈದ್ಯಕೀಯ ಪರೀಕ್ಷೆಗಳಿಂದ ದೇಹ ಸ್ಥಿತಿಯಲ್ಲಿ ಯಾವುದೇ ತೊಂದರೆಗಳಿಲ್ಲ ಎಂಬುದು ಗೊತ್ತಾಗಿದೆ. ಡಾ. ಆ್ಯಡಮ್ಸ್‌ ಜತೆ ಕೂಲಂಕಷವಾಗಿ ಮಾತಾಡಿರುವ ಡಾ. ರಮಣ ರಾವ್‌, ಹೆಗಡೆ ಅವರ ದೇಹ ಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರಾಯಶಃ ಇನ್ನಾರು ದಿನಗಳ ನಂತರ ಹೆಗಡೆ ಅವರಿಗೆ ‘ಪ್ರಾಸ್ಟ್ರೇಟ್‌ ಶಸ್ತ್ರಚಿಕಿತ್ಸೆ’ ಮಾಡಲಾಗುತ್ತದೆ ಎಂದು ರಮಣ ರಾವ್‌ ತಿಳಿಸಿದರು. ಕಳೆದ ಹಲವು ತಿಂಗಳಿಂದ ಅಸ್ವಸ್ಥರಾಗಿರುವ ರಾಮಕೃಷ್ಣ ಹೆಗಡೆ ವಿಶೇಷ ಚಿಕಿತ್ಸೆ ಪಡೆಯಲು ಇಂಗ್ಲೆಂಡಿಗೆ ಕಳೆದ ವಾರವಷ್ಟೆ ವಿಮಾನ ಹತ್ತಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ಅವರ ಮುಖದಲ್ಲಿ ನಗು ಮಾಸಿಲ್ಲ ವಂತೆ.

(ಪಿಟಿಐ)

ರಾಜಕೀಯ ಹಾಗೂ ಹೆಗಡೆ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X