ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುಮಗನ ಎಚ್‌ಐವಿ ಟೆಸ್ಟ್‌ : ಪ್ರಚಾರಕ್ಕೆ ನಾಟಕ

By Staff
|
Google Oneindia Kannada News

ಮುಂಬಯಿ : ಮದುವೆಯಾದ ನಂತರ ತನ್ನ ಗಂಡನಿಗೆ ಏಡ್ಸ್‌ ರೋಗವಿದೆ ಎಂಬುದು ಗೊತ್ತಾಗಿ, ನಕರಯಾತನೆ ಅನುಭವಿಸುವ ಹೆಣ್ಣು ಮಕ್ಕಳ ಸಮಸ್ಯೆಗೆ ಕಡಿವಾಣ ಹಾಕಲು ನಗರದ ಮಹಿಳಾ ನ್ಯಾಯ್‌ ಮಂಚ್‌ ಟೊಂಕ ಕಟ್ಟಿದೆ. ತಾನು ಮದುವೆಯಾಗುವ ಗಂಡಿನ ರಕ್ತ ಪರೀಕ್ಷೆ ಮಾಡಿಸಿ, ಏಡ್ಸ್‌ ಇಲ್ಲ ಎಂಬುದನ್ನು ಖಾತ್ರಿ ಪಡೆಸಿಕೊಂಡ ನಂತರವೇ ಮದುವೆಯಾಗಬೇಕೆಂಬ ಸಂದೇಶ ಸಾರುವ ಬೀದಿ ನಾಟಕಗಳನ್ನು ಮಹಿಳಾ ನ್ಯಾಯ್‌ ಮಂಚ್‌ ಆಡುತ್ತಿದೆ.

ಮುಂಬಯಿಯ ಆಸುಪಾಸಲ್ಲಿ ಕಳೆದ ಆರು ತಿಂಗಳಲ್ಲಿ ಏಳು ಹೆಂಗಸರಿಗೆ ತಮ್ಮ ಗಂಡನಿಗೆ ಏಡ್ಸ್‌ ಇದೆ ಎಂಬುದು ಮದುವೆಯ ನಂತರ ಗೊತ್ತಾಗಿದೆ. ಇವರೆಲ್ಲರಿಗೆ ಮಧುಚಂದ್ರದ ನಂತರ ಆಗಿರುವ ಕರಾಳ ಅನುಭವ ಇದು. ಮದುವೆಯಾಗಿ ಇನ್ನೂ ತಿಂಗಳೂ ಆಗಿಲ್ಲದಿರುವಾಗ, ಇಂತಹ ಆಘಾತ ಎದುರಿಸಲು ಇವರು ಸಜ್ಜಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳಾ ನ್ಯಾಯ್‌ ಮಂಚ್‌ ವಕ್ತಾರೆ ಸುದ್ದಿಗಾರರಿಗೆ ಹೇಳಿದರು.

ಮದುವೆಗೆ ಮುಂಚೆಯೇ ಗಂಡಸಿನ ರಕ್ತ ಪರೀಕ್ಷೆ ಮಾಡಿಸಿ, ಆತನಿಗೆ ಏಡ್ಸ್‌ ಇಲ್ಲ ಎಂಬುದನ್ನು ಹೆಂಗಸರು ಕಡ್ಡಾಯವಾಗಿ ಖಾತ್ರಿ ಪಡೆಸಿಕೊಳ್ಳಬೇಕೆಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಬೀದಿ ನಾಟಕಗಳನ್ನು ಆಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮುಂಬಯಿಯಂಥಾ ಜನನಿಬಿಡ ನಗರದಲ್ಲಿ ಸಂಪ್ರದಾಯಸ್ಥ ಹಾಗೂ ಶಿಕ್ಷಿತ ವರ್ಗದ ಗಂಡಸರೂ ಕರೆವೆಣ್ಣುಗಳ ತೆವಲು ಇಟ್ಟುಕೊಂಡಿದ್ದಾರೆ. ಇಂಥವರನ್ನು ಮದುವೆಯಾಗಿ ತಮಗೂ ಏಡ್ಸ್‌ ಅಂಟಿಸಿಕೊಳ್ಳುವಂಥಾ ಪರಿಸ್ಥಿತಿಗೆ ಹೆಂಗಸರು ಸಿಲುಕುತ್ತಿರುವುದು ಖೇದಕರ. ಸರ್ಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮದುವೆಗೆ ಮುಂಚೆ ಗಂಡಸರು ರಕ್ತ ಪರೀಕ್ಷೆ ಮಾಡಿಸುವುದನ್ನು ಕಡ್ಡಾಯಗೊಳಿಸಬೇಕೆಂಬುದು ಮಂಚ್‌ನ ಒತ್ತಾಯ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X