ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟ ಬಜೆಟ್‌-ಪ್ರತಿಪಕ್ಷ , ಚೆನ್ನಾಗಿದೆ-ಆಡಳಿತ ಪಕ್ಷ

By Staff
|
Google Oneindia Kannada News

ಬೆಂಗಳೂರು : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮಂಡಿಸಿರುವ ವೋಟರ್‌ ಫ್ರೆಂಡ್ಲೀ ರಾಜ್ಯ ಬಜೆಟ್‌- 2003-04ಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬಜೆಟ್‌ ಕುರಿತ ಪರ ವಿರೋಧ ಅಭಿಪ್ರಾಯಗಳು ಇಂತಿವೆ-

‘ಇದು ರೈತ ಪರ ಬಜೆಟ್‌ ಅಲ್ಲ. ಬಡ್ಡಿ ಮನ್ನಾ, ಸಬ್ಸಿಡಿಗಳಂತಹ ನೆರವಿಗೋಸ್ಕರ ಕೇಂದ್ರದಿಂದ ನೆರವು ಕೋರುವ, ಶಾಸಕರ ನಿಧಿಯನ್ನು ಬಳಸಿಕೊಳ್ಳುವ ಸರಕಾರ ಉತ್ತರ ಕರ್ನಾಟಕದಲ್ಲಿ ಕಚೇರಿಗಳನ್ನು ತೆರೆಯುತ್ತಿದೆಯೇ ಹೊರತು ಪ್ರಾಯೋಗಿಕವಾಗಿ ಯೋಜನೆಗಳನ್ನು, ಕಾರ್ಯಕ್ರಮಗಳ ಸ್ಪಷ್ಟ ಕ್ರಮಗಳನ್ನು ಹೊಂದಿಲ್ಲ ’
-ಪ್ರತಿ ಪಕ್ಷ ಬಿಜೆಪಿ ನಾಯಕ ಯಡಿಯೂರಪ್ಪ

‘ಕೃಷ್ಣ ಮಂಡಿಸಿದ ಬಜೆಟ್‌ ಮೋಸದಿಂದ ಕೂಡಿದೆ. ದೇಶದಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದ ನಿವ್ವಳ ಆದಾಯ ಕಡಿಮೆಯಾಗಿದೆ. ಹೊಸದಾಗಿ ಹಾಕಿಕೊಂಡ ಕಾರ್ಯಕ್ರಮಗಳಿಗೆ ಎಲ್ಲಿಂದ ಹಣ ಹೊಂದಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ತರ್ಕ ಇಲ್ಲ. ಆರ್ಥಿಕ ವಲಯದಲ್ಲಿ ಶಿಸ್ತು ತರುತ್ತೇವೆ ಎಂದು ಘೋಷಿಸುತ್ತಿರುವ ಸರ್ಕಾರ, ಆ ನಿಟ್ಟಿನಲ್ಲಿ ಸರಕಾರ ವಿಫಲವಾಗಿದೆ. ಸಾಲ ಮಾಡಿ ಓಲೆ ತಂದು, ಓಲೆಯನ್ನು ಅಡವಿಟ್ಟು, ಬಡ್ಡಿ ಕಟ್ಟುವ ಕೆಲಸವನ್ನು ಸರಕಾರ ಮಾಡುತ್ತಿದೆ. ಇದು ಚುನಾವಣೆಗೆ ಸಜ್ಜಾದ, ಪ್ರಚಾರ ಪ್ರಿಯ ಬಜೆಟ್‌.’
- ಬಿ. ಸೋಮಶೇಖರ, ಜನತಾ ಪರಿವಾರ ನಾಯಕ

‘ಕಳೆದ ಹದಿನಾಲ್ಕು ವರ್ಷಗಳಲ್ಲಿ ಮಂಡನೆಯಾದ ಬಜೆಟ್‌ಗಳಲ್ಲಿ ಈ ಬಜೆಟ್‌ ಕೃಷಿ , ಗ್ರಾಮೀಣಾಭಿವದ್ಧಿ, ನೀರಾವರಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ. ಇದೇ ಮೊದಲ ಬಾರಿಗೆ ಕಾವೇರಿ ಕಣಿವೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದು ಒಳ್ಳೆಯ ಬಜೆಟ್‌’
- ಬಿ. ಶಿವರಾಂ, ಕಾಂಗ್ರೆಸ್‌ ಶಾಸಕ

‘ಈ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಒತ್ತು ಕೊಟ್ಟಂತೆ ಕಾಣಿಸಿದರೂ, ಆ ಕುರಿತಂತೆ ವಿಶೇಷ ಕಾರ್ಯಕ್ರಮಗಳೇನೂ ಕಾಣಿಸುತ್ತಿಲ್ಲ. ರೈತರ ಬೆಳೆಗೆ ಬೆಲೆ ಸಿಗುತ್ತಿಲ್ಲ , ಬರದಿಂದ ಕಂಗೆಟ್ಟ ರೈತನಿಗೆ ನೆರವಾಗುವ ಯಾವುದೇ ಕಾರ್ಯಕ್ರಮಗಳಿಲ್ಲ . ಯಾವ ಬೆಳೆಗೆ ಯಾವ ಪ್ರಮಾಣದಲ್ಲಿ ಪ್ರೋತ್ಸಾಹ ಕೊಡಲಾಗುವುದು ಎಂಬ ಬಗ್ಗೆ ಸೊಲ್ಲಿಲ್ಲ .’
- ಎಸ್‌. ಸಿದ್ಧರಾಮಯ್ಯ, ಜಾತ್ಯತೀತ ಜನತಾ ದಳ ನಾಯಕ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X