ಒಂದೆಡೆ ಉತ್ಖನನ, ಇನ್ನೊಂದೆಡೆ ಪ್ರತಿಭಟನೆಗೆ ಸಿದ್ಧತೆ
ಹುಬ್ಬಳ್ಳಿ : ಒಂದೆಡೆ ಅಯೋಧ್ಯೆಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಅಯೋಧ್ಯೆಯಲ್ಲಿನ ವಿವಾದಾತೀತ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಜ್ಜಾಗಿವೆ.
ಅಯೋಧ್ಯೆಯಲ್ಲಿನ 67 ಎಕರೆ ವಿವಾದಾತೀತ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮಾರ್ಚ್ 27 ರ ಗುರುವಾರದಿಂದ ಪಾರ್ಲಿಮೆಂಟ್ ಭವನದ ಮುಂಭಾಗ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಅನಿರ್ದಿಷ್ಟಾವಧಿಯ ಧರಣಿ ನಡೆಸುವರು.
ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ವಲಯದ ಸಂಯೋಜಕ ಪ್ರಮೋದ್ ಮುತಾಲಿಕ್ ಈ ವಿಷಯವನ್ನು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಂಘ ಪರಿವಾರದ ಕಾರ್ಯಕರ್ತರು ಮಾ.17 ರಂದು ದೆಹಲಿಗೆ ತೆರಳಲಿದ್ದು , ಮಾರ್ಚ್ 29 ರಂದು ಧರಣಿಯಲ್ಲಿ ಪಾಲ್ಗೊಳ್ಳುವರು ಎಂದು ಮುತಾಲಿಕ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications