ಮಾ. 25ರಂದು ಕೊಲ್ಲೂರು ಮಹಾರಥೋತ್ಸವ
ಕುಂದಾಪುರ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಿಯ ರಥೋತ್ಸವವು ಮಾರ್ಚ್ 25ರ ಮಂಗಳವಾರದಂದು ನಡೆಯಲಿದೆ.
ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಕೊಲ್ಲೂರು ದೇವಾಲಯವು ಇತ್ತೀಚೆಗೆ ಸಾಕಷ್ಟು ಅಭಿವೃದ್ಧಿಗೊಂಡಿದ್ದು, ಯಾತ್ರಿಕರ ವಸತಿಗೆ ಪೂರಕವಾಗುವಂತೆ ಭವ್ಯವಾದ ಯಾತ್ರಿ ನಿವಾಸ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಜೊತೆಗೆ ಸುಸಜ್ಜಿತ ಬಸ್ ನಿಲ್ದಾಣ, ದ್ವಾರ ಗೋಪುರಗಳು ನವೀಕರಣಗೊಂಡಿವೆ. ಈ ವರ್ಷದ ಜಾತ್ರೆಯ ಸಂದರ್ಭದಲ್ಲಿ ನೂತನ ಯಾತ್ರಿ ನಿವಾಸ ಉದ್ಘಾಟನೆಗೊಳ್ಳಲಿದೆ.
ಮಾರ್ಚ್ 18ರಿಂದ ಆರಂಭವಾಗುವ ಜಾತ್ರೆ ಮಾರ್ಚ್ 25ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಳದ ಆಡಳಿತ ಮೊಕ್ತೇಸರ ಬಿ. ಎಂ. ಸುಕುಮಾರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications