ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ಆಸ್ಪತ್ರೆಯಲ್ಲಿ ಎಂಆರ್‌ಐ ಹೈಟೆಕ್‌ ಸೌಲಭ್ಯ

By Staff
|
Google Oneindia Kannada News

ಬೆಂಗಳೂರು : ಶೀಘ್ರ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ರೋಗಿಗಳ ಸಂಪೂರ್ಣ ತಪಾಸಣೆಯನ್ನು ನಡೆಯುವ ಅತ್ಯಾಧುನಿಕ ಎಂಆರ್‌ಐ (ಮ್ಯಾಗ್ನೆಟಿಕ್‌ ರೆಸೊನೆನ್ಸ್‌ ಇಮೇಜಿಂಗ್‌) ಹೈಟೆಕ್‌ ಸೌಲಭ್ಯವನ್ನು ನಗರದ ಮಲ್ಯ ಆಸ್ಪತ್ರೆ ಹೊಂದಿದೆ.

ಸಂಯುಕ್ತ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದ ವಿಜಯ ಮಲ್ಯ ಎಂಆರ್‌ಐ ಸೌಲಭ್ಯವನ್ನು ಬುಧವಾರ ಮಲ್ಯ ಆಸ್ಪತ್ರೆಯಲ್ಲಿ ಉದ್ಘಾಟಿಸಿದರು.

ಎಂಆರ್‌ಐ ವ್ಯವಸ್ಥೆಯಲ್ಲಿ ಮೂರು ಆಯಾಮದ ಚಿತ್ರಣ ದೊರೆಯುತ್ತದೆ. ಹೃದಯ, ಬೆನ್ನು ಮತ್ತಿತರ ದೇಹದ ಎಲ್ಲಾ ಅಂಗಗಳಿಗೆ ಸಂಬಂಧಿಸಿದ ಸಮಗ್ರ ತಪಾಸಣೆ ಈ ಸೌಲಭ್ಯದಿಂದ ಸಾಧ್ಯವಾಗಲಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು , ಅತ್ಯಾಧುನಿಕ ಸೌಲಭ್ಯಗಳು ಬೆಂಗಳೂರಿನ ನಾಗರಿಕರಿಗೆ ಮಲ್ಯ ಆಸ್ಪತ್ರೆ ಒದಗಿಸುವುದು. ಸದ್ಯದಲ್ಲಿಯೇ ನ್ಯೂಕ್ಲಿಯರ್‌ ಮೆಡಿಸಿನ್‌ಗಳ ಸೌಲಭ್ಯ ಕೂಡ ಮಲ್ಯ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದು ಮಲ್ಯ ತಿಳಿಸಿದರು.

ಮಲ್ಯ ಫೌಂಡೇಶನ್ನಿನ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಬಡ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಕೊಳೆಗೇರಿಗಳಲ್ಲಿ ಕಲ್ಪಿಸುವ ಕಾರ್ಯಕ್ರಮಗಳನ್ನು ಫೌಂಡೇಶನ್‌ ಹಮ್ಮಿಕೊಳ್ಳಲಿದೆ ಎಂದು ವಿಜಯ ಮಲ್ಯ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X