• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ವೈದ್ಯರಿಗೆ 2.4 ಕೋಟಿ ರು. ಪ್ರಶಸ್ತಿ

By Staff
|

ಬೆಂಗಳೂರು : ಡಯಾಬಿಟಿಸ್‌(ಟೈಪ್‌-ಬಿ) ರೋಗಕ್ಕೆ ಪರಿಣಾಮಕಾರಿ ಔಷಧಿ ಪ್ರಯೋಗದ ಸಾಧನೆಗಾಗಿ ಬೆಂಗಳೂರು ಮೂಲದ ಡಾ.ಜ್ಯೋತಿ ಘೋಷ್‌ ಅವರು 5 ಲಕ್ಷ ಡಾಲರ್‌ಗಳ (2.4 ಕೋಟಿ ರುಪಾಯಿ) ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಪ್ರಶಸ್ತಿ ನೊಬೆಲ್‌ ಪ್ರಶಸ್ತಿಯ ನಂತರ ಎರಡನೇ ಅತಿದೊಡ್ಡ ಪ್ರಶಸ್ತಿಯಾಗಿದೆ.

ಏಪ್ರಿಲ್‌ 7 ರಂದು ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಅಟ್ಲಾಂಟದಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಜ್ಯೋತಿ ಘೋಷ್‌ ಅವರಿಗೆ ಪ್ರದಾನ ಮಾಡಲಾಗುವುದು. ಡಯಾಬಿಟಿಸ್‌ ಫೌಂಡೇಶನ್‌ನ 2.4 ಕೋಟಿ ರುಪಾಯಿ ಮೊತ್ತದ ಈ ಪ್ರಶಸ್ತಿ ಸ್ಮರಣಿಕೆಯನ್ನೂ ಒಳಗೊಂಡಿದೆ.

ಡಾ.ಜ್ಯೋತಿ ಘೋಷ್‌ ಅವರು ಅಭಿವೃದ್ಧಿಪಡಿಸಿರುವ ಔಷಧಿ ಮಾರಣಾಂತಿಕ ಡಯಾಬಿಟಿಸ್‌ ರೋಗಕ್ಕೆ ರಾಮಬಾಣವೆನಿಸಿದೆ. ಈ ಔಷಧಿಯು ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಫೌಂಡೇಷನ್‌ ಪ್ರಕಟಣೆ ತಿಳಿಸಿದೆ.

ಔಷಧಿಯ ಅಭಿವೃದ್ಧಿ ಮಾತ್ರವಲ್ಲದೆ ರೋಗಿಗಳೊಂದಿಗೆ ಘೋಷ್‌ ಅವರು ಸಾಧಿಸಿರುವ ಸೌಹಾರ್ದ ಸಂಬಂಧ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಕೂಡ ಪ್ರಶಸ್ತಿಗೆ ಅವರನ್ನು ಪರಿಗಣಿಸಲು ಕಾರಣವಾಗಿವೆ. ಅಪಾರ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಡಾ.ಘೋಷ್‌, ಪ್ರತಿಫಲವಾಗಿ ಚಿಕ್ಕಾಸನ್ನೂ ಪಡೆಯದಿರುವುದನ್ನು ಫೌಂಡೇಷನ್‌ ಗುರ್ತಿಸಿದೆ.

ಪ್ರಾಯೋಗಿಕ ಪರೀಕ್ಷೆಗಳಿಂದ ಔಷಧಿಯ ಗುಣಮಟ್ಟ ಖಾತರಿಗೊಂಡಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ರೇಮಂಡ್‌ ಇ.ಕನ್ಹಿಂಗ್‌ಹ್ಯಾಂ ತಿಳಿಸಿದ್ದಾರೆ.

ಡಯಾಬಿಟಿಸ್‌ ಎಂಬ ಜಾಗತಿಕ ಪೀಡೆ

ವೈದ್ಯಕೀಯ ಕ್ಷೇತ್ರಕ್ಕೆ ಅತಿ ದೊಡ್ಡ ಸವಾಲಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಡಯಾಬಿಟಿಸ್‌ ಕೂಡ ಒಂದು. ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದಂತೆ, 2000 ಇಸವಿಯಲ್ಲಿ ವಿಶ್ವದಲ್ಲಿದ್ದ ಡಯಾಬಿಟಿಸ್‌ ರೋಗಿಗಳ ಸಂಖ್ಯೆ 177 ಮಿಲಿಯನ್‌. ಇಷ್ಟು ಮಂದಿಯ ಉತ್ಪಾದಕತೆಗೆ ಮಾರಕವಾಗಿರುವ ಡಯಾಬಿಟಿಸ್‌ ಚಿಕಿತ್ಸೆಗಾಗಿ 54 ಬಿಲಿಯನ್‌ ಡಾಲರ್‌ ವೆಚ್ಚವಾಗಿದೆ.

ಈ ಮುನ್ನ ಶ್ರೀಮಂತರ ಕಾಯಿಲೆಯೆಂದು ಹೆಸರಾಗಿದ್ದ ಡಯಾಬಿಟಿಸ್‌ ಬದಲಾದ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಜನರನ್ನೂ ಕಾಡುತ್ತಿದೆ. ಭಾರತದಲಂತೂ ಡಯಾಬಿಟಿಸ್‌ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ನನಗೆ ಖುಷಿಯಾಗಿದೆ..

ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ತಮಗೆ ದೊರೆತಿರುವ ಕುರಿತು ಡಾ.ಜ್ಯೋತಿ ಘೋಷ್‌ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಡಯಾಬಿಟಿಸ್‌ ಕುರಿತು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಲು ಈ ಪ್ರಶಸ್ತಿ ಪ್ರೇರಕವಾಗಿದೆ. ಅದರಲ್ಲೂ ಯುವಜನತೆಯಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್‌ ಗುಣಪಡಿಸಲು ಹೆಚ್ಚಿನ ಪ್ರಯೋಗ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ಅಂದಹಾಗೆ, ಬೆಂಗಳೂರಿನ ಜರ್ಮನ್‌ ಫಾರ್ಮಾಸ್ಯುಟಿಕಲ್‌ನಲ್ಲಿ ಡಾ.ಘೋಷ್‌ ಅವರು ನಿರ್ದೇಶಕರಾಗಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more