• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ - ಚತುರ್ವೇದಿ

By Staff
|

ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ . ಕುಡಿಯುವ ನೀರು, ಪಡಿತರ, ಆರೋಗ್ಯ ಹಾಗೂ ವಸತಿ ಕ್ಷೇತ್ರಗಳಿಗೆ ಸರ್ಕಾರ ಒತ್ತು ನೀಡುತ್ತದೆ ಎಂದು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹೇಳಿದರು.

ಫೆ.27 ರ ಗುರುವಾರ ಪ್ರಾರಂಭವಾದ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ಚತುರ್ವೇದಿ ಮಾತನಾಡುತ್ತಿದ್ದರು.

ಸರ್ಕಾರದ ಮುಂದಿನ ಕಾರ್ಯಯೋಜನೆ ಹಾಗೂ ದಿಕ್ಕುದೆಶೆಗಳನ್ನು ತಮ್ಮ 36 ಪುಟಗಳ ಇಂಗ್ಲಿಷ್‌ ಭಾಷಣದಲ್ಲಿ ರಾಜ್ಯಪಾಲ ಚತುರ್ವೇದಿ ತೆರೆದಿಟ್ಟರು. ಅವರ ಭಾಷಣದ ಮುಖ್ಯಾಂಶಗಳು :

  • ನಗರಗಳ ಮಿತಿ ಮೀರಿದ ಬೆಳವಣಿಗೆಗೆ ತಡೆ
  • 2.5 ಲಕ್ಷ ಮನೆಗಳ ನಿರ್ಮಾಣ
  • 10 ಸಾವಿರ ಕಿಲೋ ಮೀಟರ್‌ ಉದ್ದದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ.
  • ಜವಳಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಶೀಘ್ರದಲ್ಲೇ ಜವಳಿ ನೀತಿ ಪ್ರಕಟ.
  • ಬರಗಾಲ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ 287.60 ಕೋಟಿ ರುಪಾಯಿಗಳ ನೆರವು ಕೇಳಿಕೆ. ಜೂನ್‌ ತಿಂಗಳಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗುವ ಆಶಯ.
  • ಮೇ ತಿಂಗಳ ಒಳಗೆ ಸುಮಾರು 47 ಲಕ್ಷ ಬಡ ಕುಟುಂಬಗಳಿಗೆ ಹಳದಿ ಕಾರ್ಡ್‌.
  • ಪಶು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಪ್ರಗತಿಯನ್ನು ಗ್ರಾಮೀಣ ಪ್ರದೇಶಗಳಿಗೆ ಮುಟ್ಟಿಸುವ ಉದ್ದೇಶದಿಂದ ಪಶು ಸಂಗೋಪನಾ ಇಲಾಖೆಯ ಪುನರ್ರಚನೆ.
  • ದಿಕ್ಕೂ ಇಲ್ಲ ದೆಸೆಯೂ ಇಲ್ಲ : ಸರ್ಕಾರದ ನೀತಿ ಗುರಿಗಳನ್ನು ತಿಳಿಸುವ ರಾಜ್ಯಪಾಲರ ಭಾಷಣದಲ್ಲಿ ಹೊಸದೇನೂ ಇಲ್ಲ ಎಂದು ಪ್ರತಿಪಕ್ಷಗಳು ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯಿಸಿವೆ. ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ದಿಕ್ಕೂ ಇಲ್ಲ ದೆಸೆಯೂ ಇಲ್ಲ ಎಂದು ಪ್ರತಿಪಕ್ಷಗಳ ಮುಖಂಡರು ಹೇಳಿದ್ದಾರೆ.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more