For Daily Alerts
ಉಡುಪಿಯಲ್ಲಿ ವಜ್ರಕವಚ ಅರ್ಪಣಾ ಕಾರ್ಯಕ್ರಮ
ಉಡುಪಿ: ಶ್ರೀಕೃಷ್ಣದೇವರಿಗೆ ವಜ್ರ ಕವಚವನ್ನು ಸಮರ್ಪಣೆಗೆ ಸಂಬಂಧಿಸಿದಂತೆ ಧಾರ್ಮಿಕ ಕಾರ್ಯಕ್ರಮಗಳು ಫೆ. 28ರಿಂದ ಮಾರ್ಚ್ 11ರವರೆಗೆ ಉಡುಪಿ ಕೃಷ್ಣ ಮಠದಲ್ಲಿ ಜರುಗಲಿವೆ.
ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದರಾಬಾದ್ನ ಶ್ರೀಕಾಂತ್ ಜ್ಯುವೆಲ್ಲರ್ಸ್ ಅವರು ನಿರ್ಮಿಸುತ್ತಿರುವ ವಜ್ರಕವಚದ ಕೆಲಸ ಮುಕ್ತಾಯ ಹಂತಕ್ಕೆ ಬಂದಿದೆ. ವಜ್ರ ಕವಚ ಸಮರ್ಪಣೆಯ ಧಾರ್ಮಿಕ ವಿಧಿಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಊರ ಪರವೂರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದೇ ಕಾರ್ಯಕ್ರಮದ ಜೊತೆಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸಪ್ತಾಹ ದಶಮಾನೋತ್ಸವವನ್ನೂ ಆಚರಿಸಲಾಗುವುದು.
ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿರುವ ವಜ್ರ ಕವಚ ಸಮರ್ಪಣೆಯ ಧಾರ್ಮಿಕ ಕಾರ್ಯಕ್ರಮಗಳು :
- ಫೆಬ್ರವರಿ 28ರಿಂದ ಮಾರ್ಚ್ 11ರವರೆಗೆ ದಿನ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳು. ಪ್ರತಿ ದಿನ ಬೆಳಗ್ಗೆ ಉಪನ್ಯಾಸ, ಹವನ, ಸಂಜೆ ಉಪನ್ಯಾಸ, ಪ್ರತಿ ರಾತ್ರಿ ಏಳೂವರೆಗೆ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.
- ಮಾರ್ಚ್ 5ರಿಂದ 10ರವರೆಗೆ ದಾಸ ಸಾಹಿತ್ಯ ಕುರಿತು ರಾಜಾಂಗಣ ಮಹಡಿಯಲ್ಲಿ ವಿಶೇಷ ವಸ್ತು ಪ್ರದರ್ಶನ
- ರಾಘವೇಂದ್ರ ಸಪ್ತಾಹ ದಶಮಾನೋತ್ಸವದ ಅಂಗವಾಗಿ ಮಧ್ವ ಮಂಟಪದಲ್ಲಿ ಬೆಳಗ್ಗೆ ವಿಶೇಷ ಪೂಜೆಗಳು, ಮಾರ್ಚ್ 9ರ ಬೆಳಗ್ಗೆ ಗುರುರಾಜರಿಗೆ ಸಹಸ್ರ ಕಲಶ ಕ್ಷೀರಾಭಿಷೇಕ.
- ಮಾರ್ಚ್ 8ರಂದು ಬಿಗಿ ಭದ್ರತೆಯ ಪುರ ಮೆರವಣಿಗೆಯಲ್ಲಿ ಸಂಜೆ ವಜ್ರ ಕವಚಕ್ಕೆ ಸ್ವಾಗತ.
- ಮಾರ್ಚ್ 9ರಂದು ಸಾರ್ವಜನಿಕರ ವೀಕ್ಷಣೆಗೆ ವಜ್ರ ಕವಚ ಪ್ರದರ್ಶನ
- ಮಾರ್ಚ್ 10, ಬೆಳಗ್ಗೆ ಶ್ರೀ ಕೃಷ್ಣ ದೇವರಿಗೆ ವಜ್ರ ಕವಚ ಸಮರ್ಪಣೆ
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...