• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ರೈಲ್ವೆ ಬಜೆಟ್‌ 2003-04, ಮುಖ್ಯಾಂಶಗಳು...

By Staff
|

ನವದೆಹಲಿ : ರೈಲು ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ, ಯಶವಂತಪುರ- ಸೇಲಂ ನಡುವೆ ಪ್ರತಿನಿತ್ಯ ಸಂಚಾರ ಸೇರಿದಂತೆ ದೇಶದ ಹಲವೆಡೆ 50 ಹೊಸ ರೈಲುಗಳ ಸಂಚಾರ, ಹಿರಿಯ ನಾಗರಿಕರಿಗೆ ಸಿಗುವ ರೈಲು ಪ್ರಯಾಣ ದರ ಸೋಡಿಗಾಗಿ ಇರುವ ಕನಿಷ್ಠ ವಯಸ್ಸು 65ರಿಂದ 60ಕ್ಕೆ ಇಳಿಕೆ- ಇವು 2003- 04ನೇ ಇಸವಿಯ ಕೇಂದ್ರ ರೈಲ್ವೆ ಮುಂಗಡ ಪತ್ರದ ಮುಖ್ಯಾಂಶಗಳು.

ಕೇಂದ್ರ ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಬುಧವಾರ (ಫೆ.26) ಮಂಡಿಸಿದ 10, 607 ಕೋಟಿ ರುಪಾಯಿಯ ರೈಲ್ವೆ ಬಜೆಟ್‌ನ ಮುಖ್ಯಾಂಶಗಳು ಹೀಗಿವೆ-

  • ಪ್ರಯಾಣ ದರ ಹಾಗೂ ಸರಕು ಸಾಗಣೆ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ರಾಜಧಾನಿ ಮತ್ತು ಶತಾಬ್ದಿ ರೈಲುಗಳ ಮೂಲ ಪ್ರಯಾಣ ದರದಲ್ಲಿ ಕೊಂಚ ಇಳಿಕೆ.
  • ಯಶವಂತಪುರ- ಸೇಲಂ ನಡುವೆ ಸೇರಿದಂತೆ ದೇಶದ ವಿವಿಧೆಡೆ 50 ಹೊಸ ರೈಲು ಸಂಚಾರ. 13 ರೈಲುಗಳ ಸಂಚಾರಿ ಆವರ್ತನೆಯಲ್ಲಿ ಹೆಚ್ಚಳ.
  • ಜುಲೈ 15ರಿಂದ ಸೆಪ್ಟೆಂಬರ್‌ 15, 2003- ಈ ಅವಧಿಯಲ್ಲಿ ಪ್ರಥಮ ದರ್ಜೆ ಎ.ಸಿ. ಮತ್ತು ಎ.ಸಿ. 2 ಟಯರ್‌ ವರ್ಗದ ಎಲ್ಲಾ ರಾಜಧಾನಿ ರೈಲು ಪ್ರಯಾಣ ದರದಲ್ಲಿ ರಿಯಾಯಿತಿ.
  • ಕಬಕಪುತ್ತೂರು- ಮಂಗಳೂರು ಸೇರಿದಂತೆ 9 ರೈಲು ಮಾರ್ಗಗಳಲ್ಲಿ 775 ಕಿ.ಮೀ. ಉದ್ದದ ಗೇಜ್‌ ಪರಿವರ್ತನೆ ಕಾಮಗಾರಿ. 340 ಕಿ.ಮೀ. ಉದ್ದದ ಹಾದಿಯಲ್ಲಿ ಎರಡು ಹಳಿಮಾರ್ಗ ನಿರ್ಮಿಸುವ ಕೆಲಸ 2003ರಲ್ಲಿ ಶುರುವಾಗುತ್ತದೆ.
  • ರೈಲು ಪ್ರಯಾಣ ದರದ ಸೋಡಿ ಅನುಭವಿಸಲು ಹಿರಿಯ ನಾಗರಿಕರ ವಯಸ್ಸು ಈವರೆಗೆ 65 ವರ್ಷ ನಿಗದಿಯಾಗಿತ್ತು. ಇದನ್ನು 60 ವರ್ಷಕ್ಕೆ ಇಳಿಸಲಾಗಿದೆ.
  • ಕ್ಯಾನ್ಸರ್‌, ಥ್ಯಾಲಸೇಮಿಯ ಮತ್ತು ಹೃದ್ರೋಗಿಗಳಿಗೆ ರೈಲು ಪ್ರಯಾಣ ದರದಲ್ಲಿ ಪ್ರತಿಶತ 75ರವರೆಗೆ ರಿಯಾಯಿತಿ.
  • ಚಿಕಿತ್ಸೆಗಾಗಿ ಪ್ರಯಾಣಿಸುವ ಮೂತ್ರಕೋಶ ರೋಗಿಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ. ರೈಲುಗಳ ನಡುವೆ ಡಿಕ್ಕಿ ತಪ್ಪಿಸಲು ಪ್ರತಿ ರೈಲಲ್ಲೂ ಹೊಸ ಉಪಕರಣ ಅಳವಡಿಸುವ ಯೋಚನೆಯಿದೆ.
  • ರೈಲ್ವೆ ಭದ್ರತೆಯ ಜಂಘಾಬಲವನ್ನು ಇನ್ನಷ್ಟು ವರ್ಧಿಸಲು 3,500 ಪೇದೆಗಳ ನೇಮಕ.
  • 5,400 ಕಿ.ಮೀ. ಉದ್ದದ ಹಳಿಮಾರ್ಗದ ಪುನರ್‌ನವೀಕರಣ ಕಾಮಗಾರಿ 2003ನೇ ಇಸವಿಯಲ್ಲಿ ಮುಗಿಯಲಿದೆ.
  • ಪ್ರಸ್ತುತ ಪತ್ರಕರ್ತರಿಗೆ ಇರುವ ರೈಲ್ವೆ ಪ್ರಯಾಣ ದರದ ರಿಯಾಯಿತಿಯನ್ನು ರಾಜಧಾನಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ಗಳಿಗೂ ವಿಸ್ತರಿಸಲಾಗುವುದು.
  • ರೈಲ್ವೆ ವಲಯಗಳಲ್ಲಿ ಶುಚಿತ್ವ ಕಾಪಾಡಲು ಖಾಸಗಿ ಸಹಭಾಗಿತ್ವದಲ್ಲಿ ಹೊಸ ಕಾರ್ಯ ಪಡೆಯನ್ನು ರಚಿಸಲಾಗುವುದು.
  • ಕೊಂಕಣ ರೈಲ್ವೆ ಸಾಕಷ್ಟು ಅಭಿವೃದ್ಧಿಯಾಗಿದೆ. ಅದಕ್ಕೆ ಇನ್ನೂ ಸಾಕಷ್ಟು ವಿತ್ತೀಯ ನೆರವಿನ ಅಗತ್ಯವಿದೆ.
  • 1750 ಕಿ.ಮೀ. ಉದ್ದದಷ್ಟು ದೂರ ವಿವಿಧ ಮಾರ್ಗಗಳಲ್ಲಿ ಹೊಸ ರೈಲು ಸಂಚಾರ ಪ್ರಾರಂಭಿಸುವ ಯೋಚನೆಯಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more