ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕಾಶಿ ಗೋಕರ್ಣದಲ್ಲಿ ಓಂ ನಮಃ ಶಿವಾಯ

By Staff
|
Google Oneindia Kannada News

ಗೋಕರ್ಣ : ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಗೋಕರ್ಣದಲ್ಲಿ ಶಿವರಾತ್ರಿ ಪೂಜಾ ಉತ್ಸವಗಳು ಫೆ.25ರ ಮಂಗಳವಾರದಿಂದಲೇ ಪ್ರಾರಂಭವಾಗಿದ್ದು , ಈ ಕಾರ್ಯಕ್ರಮಗಳು ಮಾರ್ಚ್‌ 5 ರವರೆಗೂ ನಡೆಯಲಿವೆ.

ಗಣೇಶ ಪೂಜೆ, ಮೃತ್ತಿಕಾಹರಣೋತ್ಸವ ಪೂಜಾ ಉತ್ಸವಗಳು ಶಿವರಾತ್ರಿ ಪ್ರಯುಕ್ತ ನಡೆಯಲಿವೆ. ಮಾರ್ಚ್‌ 1 ರಂದು ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಾರ್ಚ್‌ 5 ರಂದು ಅವಭೃತ ಮತ್ತು ಅಂಕುರ ಪ್ರಸಾದ ವಿತರಣೆ ನಡೆಯಲಿದೆ.

ಶಿವರಾತ್ರಿಯ ದಿನ ಗೋಕರ್ಣದಲ್ಲಿ ಮಹಾ ರಥೋತ್ಸವವಿದ್ದು , ಈ ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳ ಸಾವಿರಾರು ಮಂದಿ ಸೇರುವರು. ಶಿವರಾತ್ರಿಯ ದಿನ ಗೋಕರ್ಣದಲ್ಲಿ ಅಮಾವಾಸ್ಯೆ ಪೂಜೆ, ಪಿಂಡಪ್ರದಾನ ಹಾಗೂ ಆತ್ಮಲಿಂಗ ದರ್ಶನ ಶುಭಕರವೆಂದು ಹಿಂದೂ ಶಾಸ್ತ್ರಗಳು ಹೇಳುತ್ತವೆ.

ಪ್ರತಿವರ್ಷ ಮಾಘ ಅಷ್ಟಮಿಯಿಂದ ಫಾಲ್ಗುಣ ಶುದ್ಧ ಬಿದಿಗೆಯ 9 ದಿನಗಳ ಕಾಲ ಗೋಕರ್ಣದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X