• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಸಿಲೆಂದರೆ ಬರಿ ಬಿಸಿಲಲ್ಲವೊ ಶಿವನುರಿಗಣ್ಣು !

By Staff
|

*ದಟ್ಸ್‌ಕನ್ನಡ ಬ್ಯೂರೊ

ಅದು ಮಧ್ಯಾಹ್ನದ ಸುಡು ಬಿಸಿಲು. ಸುಟಿ ಸುಟಿ ಕಿರಣಗಳು.

ಇಬ್ಬರು ಹೆಂಗಸರು ತುರುಬು ತುಂಬಾ ಮಲ್ಲಿಗೆ ಹೂವು ಮುಡಿದು ಕೊಂಡು ನಡೆದುಕೊಂಡು ಹೋಗುತ್ತಿದ್ದರಂತೆ. ಒಬ್ಬಾಕೆ ಬರಿಗಾಲಿನಲ್ಲಿ ನಡೆಯುತ್ತಿದ್ದಳು. ಆದರೆ ಕೊಡೆ ಹಿಡಿದುಕೊಂಡಿದ್ದಳು. ಮತ್ತೊಬ್ಬಳು ಚಪ್ಪಲಿ ಹಾಕಿದ್ದಳು. ಆದರೆ ಆಕೆಯ ಬಳಿ ಕೊಡೆ ಇರಲಿಲ್ಲ. ಅವರಿಬ್ಬರು ಸುಮಾರು ಒಂದು ಗಂಟೆ ಕಾಲ ನಡೆದು ನಡೆದು, ತಲುಪಬೇಕಿದ್ದ ಜಾಗ ತಲುಪಿದರು. ಕೊಡೆ ಹಿಡಿದು ನಡೆಯುತ್ತಿದ್ದವಳ ಹೂವು ಕರ್ರಗಾಗಿತ್ತು. ಆದರೆ ಚಪ್ಪಲಿ ಹಾಕಿಕೊಂಡವಳ ಹೂವು ಸ್ವಲ್ಪ ಬಾಡಿತ್ತು ಅಷ್ಟೆ.

ವ್ಯತ್ಯಾಸ ಇಷ್ಟೇ. ಈ ಬಿಸಿಲು ಕಾಲದಲ್ಲಿ ನಿಮ್ಮ ಪಾದಗಳನ್ನು ಜೋಪಾನ ಮಾಡಿಕೊಳ್ಳಿ. ಪ್ಲಾಸ್ಟಿಕ್‌ ಚಪ್ಪಲಿಗಳನ್ನು ಹಾಕಬೇಡಿ. ನೀವು ಉಷ್ಣ ದೇಹ ಪ್ರಕೃತಿಯವರಾದರೆ, ರಾತ್ರಿ ಮಲಗುವಾಗ ಅಂಗಾಲಿಗೆ ಒಂದಿಷ್ಟು ಎಣ್ಣೆ ನೀವಿಕೊಳ್ಳಿ.

ಹಾಗಂತ ಬಿಸಿಲಿನಲ್ಲಿ ನಡೆಯುವಾಗ ಕೊಡೆ ಹಿಡಿದುಕೊಂಡು ಹೋಗಬೇಡಿ ಅಂತೇನಲ್ಲ. ಪಾದ ಮತ್ತು ನೆತ್ತಿಯನ್ನು ಸೂರ್ಯ ಕಿರಣಗಳಿಂದ ಕಾಪಾಡಿಕೊಳ್ಳುವುದು ಮುಖ್ಯವೇ.

ಎಲ್ಲಿ ಇಟ್ಟಿದ್ದೀರಿ ನಿಮ್ಮ ಕೂಲಿಂಗ್‌ ಗ್ಲಾಸ್‌... ಬೀರುವಿನ ಮೂಲೆಯಲ್ಲಾ. ಬಿಸಿಲ ಕಾಲ ಬಂದಿದೆ. ಕೊಡೆ, ಬೇಸಗೆ ದಿರಿಸುಗಳು, ತಂಪು ಕನ್ನಡಕ್ಕಗಳನ್ನು ಆಚೆಗೆ ತೆಗೆಯಿರಿ. ಈ ಸಾರಿ ಫೆಬ್ರವರಿಯಲ್ಲೇ ಸುಡು ಬಿಸಿಲು ಬಂದಿದೆ ಏನು ಕಾಲವಪ್ಪಾ ಅಂತ ಹವಾಮಾನ ಇಲಾಖೆಯ ನಿರ್ದೇಶಕ ಎ. ಎಲ್‌. ಕೊಪ್ಪರ್‌ ಅವರನ್ನು ಮಾತನಾಡಿಸಿದರೆ ಅವರು ಕೂಲ್‌ ಆಗಿ ಈ ಬೇಸಗೆಯಲ್ಲಿ ಬೆಂಗಳೂರು ತೀರಾ ಬಿಸಿಯಾಗಲಿದೆ ಎಂಬ ಸುದ್ದಿ ಹೇಳುತ್ತಾರೆ...

ಫೆಬ್ರವರಿಯಲ್ಲಿ ಬೇಸಗೆ ಶುರುವಾಗುತ್ತದೆ. ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಲೇ ಇರುತ್ತದೆ. ಈ ಬದಲಾವಣೆ ನಿರೀಕ್ಷಿತ. ಸದ್ಯಕ್ಕೆ ಮಿತಿ ಮೀರಿದ ಬಿಸಿಲೇನೂ ಬಂದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ -ದಿನಕ್ಕೆ ಸುಮಾರು 3 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚುತ್ತಲೇ ಇದೆ. ಈ ಉಷ್ಣಾಂಶದ ಗರಿಷ್ಠ ಮಿತಿ 43 ಡಿಗ್ರಿ ಸೆಂಟಿಗ್ರೇಡ್‌ ಮುಟ್ಟಬಹುದು! ಬೆಂಗಳೂರಿಗರಿಗಂತೂ ನೆಮ್ಮದಿಯ ನಿದ್ರೆಯಿಲ್ಲ ! ಒಟ್ಟಿನಲ್ಲಿ ಈ ಬಾರಿ ಸೆಕೆ ಸ್ವಲ್ಪ ಹೆಚ್ಚಾಗಿಯೇ ಕಾಟ ಕೊಡುವ ಲಕ್ಷಣಗಳಿವೆ. ಏಪ್ರಿಲ್‌ ಕೊನೆಯ ವಾರದಲ್ಲಿ ಒಂದಿಷ್ಟು ಮಳೆಯಾಗುವ ನಿರೀಕ್ಷೆಯಿದೆ.

ಬೇಸಗೆಯಲ್ಲಿ ಉಷ್ಣಾಂಶ ಒಂದೇ ರೀತಿ ಇರುವುದೇ ಇಲ್ಲ. ದಿನದಲ್ಲಿ ಪ್ರತಿ ಕ್ಷಣಕ್ಕೂ ಹೆಚ್ಚು ಕಡಿಮೆಯಾಗುತ್ತಲೇ ಇರುತ್ತದೆ. ಈ ಉಷ್ಣವನ್ನು ಕಡಿಮೆ ಮಾಡಲು ಉತ್ತರದಿಂದ ಚುಂಬಕ ಗಾಳಿ ಬೀಸಬೇಕು. ಆ ಗಾಳಿ ಯಾವಾಗ ಬರುತ್ತದೆ ಅಂತ ಕೊಪ್ಪರ್‌ ಅವರಿಗೂ ಗೊತ್ತಿಲ್ಲ. ಅದನ್ನು ನಿಖರವಾಗಿ ಹೇಳಲು ಬರುವುದಿಲ್ಲ. ಏನಿದ್ದರೂ ಕಾಮನ್‌ ಸೆನ್ಸ್‌ ಹೇಳುವ ಪ್ರಕಾರ ಏಪ್ರಿಲ್‌ ಮೇ ತಿಂಗಳಂತ್ಯದವರೆಗೂ ಸುಡು ಬಿಸಿಲು ಅನುಭವಿಸಿಯೇ ತೀರಬೇಕು.

ಈ ನಡುವೆ ಕೊಪ್ಪರ್‌ ಅವರ ಲೆಕ್ಕ ತಪ್ಪಿ, ಹಿಂದಿನ ಕಾಲದವರ ಲೆಕ್ಕ ಪ್ರಕಾರ, ಸಂಕ್ರಾಂತಿ ದಿನದಂದೋ, ಯುಗಾದಿಯ ಆಸು ಪಾಸಿಗೋ ನಾಲ್ಕು ಹನಿ ಮಳೆ ಚೆಲ್ಲಿದರೆ ಚಾತಕ ಪಕ್ಕಿಯ ಬಳಿ ಶುಕ್ಲ ಪಕ್ಷ ಬಂದ ಹಾಗೆ. ಖುಷಿಯಾಗುತ್ತದೆ.

ಸೋ, ನಾವು ಮಳೆಯ ಹನಿಗಳಿಗಾಗಿ ಹಾಗೂ ಉತ್ತರದ ಚುಂಬಕ ಗಾಳಿಗಾಗಿ ಎದುರು ನೋಡೋಣ.

ಮತ್ತೆ ಶಿವರಾತ್ರಿ ಬಂತು. ಮಾರ್ಚ್‌ 1ರ ಶನಿವಾರ ಶಿವರಾತ್ರಿ. ಶಿವರಾತ್ರಿ ಆಸು ಪಾಸಿನಲ್ಲಿ ಗಾಳಿ ಶಿವ ಶಿವ ಎನ್ನುತ್ತಾ ಭರ್ರನೇೕ ಬೀಸುತ್ತದಂತೆ. ಆ ಗಾಳಿ ತಂಪಾಗಿರಲಿ. ಸುಡು ಬಿಸಿಲಿನಿಂದ ನಮ್ಮ ನಿಮ್ಮನ್ನೆಲ್ಲ ಪಾರು ಮಾಡಲಿ...

ಅಲ್ಲಿಯವರೆಗೆ ಬೇಸಗೆಯನ್ನೆದುರಿಸಲು ನಿಮಗೆ ನಾಲ್ಕು ಟಿಪ್ಸ್‌ :

  • ಕೋಲ್ಡ್‌ ಪೆಪ್ಸಿ ಕೋಲಾ, ಸಿಹಿ ತಿಂಡಿ, ಕರಿದ ತಿಂಡಿಗಳನ್ನು ತಿನ್ನಬೇಡಿ. ಸಳ್ಳಿ, ಕೋಸಂಬರಿ, ಜ್ಯೂಸ್‌, ಪಾನಕ, ಮಜ್ಜಿಗೆ ನೀರನ್ನು ಹೆಚ್ಚು ಸೇವಿಸಿ. ಬೇಸಗೆಯಲ್ಲಿ ಕುಡಿಯುವ ನೀರು ಬೇಗನೆ ಕಲುಷಿತವಾಗುತ್ತದೆ. ಸೇವಿಸುವ ಆಹಾರವೂ ಸರಳವಾಗಿ ಸುರಕ್ಷಿತವಾಗಿದ್ದಷ್ಟೂ ಒಳ್ಳೆಯದು.
  • ಸಿಂಥೆಟಿಕ್‌ ಬಟ್ಟೆಗಿಂತ ಹತ್ತಿ ಬಟ್ಟೆಗಳು ನಿಮ್ಮ ಚರ್ಮದ ಮೇಲೆ ಸಾಕಷ್ಟು ಗಾಳಿಯಾಡಲು ಅವಕಾಶ ಕೊಡುವುದರಿಂದ ಕಾಟನ್‌ ಬಟ್ಟೆಗಳನ್ನೇ ಧರಿಸಿ.
  • ಚರ್ಮದ ರಕ್ಷಣೆಗಾಗಿ ಕ್ರೀಮ್‌ಗಳನ್ನು ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸಿ.
  • ಸುಡುವ ಬಿಸಿಲಿನಿಂದ ನಿಮ್ಮ ನೆತ್ತಿ - ಪಾದ, ಕಣ್ಣುಗಳನ್ನು ರಕ್ಷಿಸುವಲ್ಲಿ ಅಲಕ್ಷ್ಯ ತೋರಿಸಬೇಡಿ.

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more