• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತಿಗೆ ಬಾರಾ - ಸದ್ದಾಂ ; ನಾಟಕ ಬೇಡ - ಬುಷ್‌

By Staff
|

Iraq President Saddam HussainUS President George W Bushನ್ಯೂಯಾರ್ಕ್‌ : ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ನನ್ನ ಜೊತೆ ಟೀವಿ ಸಂವಾದದ ನೇರ ಪ್ರಸಾರದ ಚರ್ಚೆಗೆ ಕೂರಲಿ. ಬಾಗ್‌ದಾದ್‌ ಮೇಲೆ ಮಿಲಿಟರಿ ಕ್ರಮ ಯಾಕೆ ತೆಗೆದುಕೊಳ್ಳಬೇಕು ಎಂದು ಮಾತಾಡಲಿ. ಆಗ ಜನತೆಗೆ ಯಾರ ಭುಜಬಲ ಪರಾಕ್ರಮ ಎಂಥದು ಅಂತ ಗೊತ್ತಾಗುತ್ತದೆ ಎಂದು ಇರಾಕ್‌ ಅಧ್ಯಕ್ಷ ಸದ್ದಾಂ ಹುಸೇನ್‌ ತೊಡೆ ತಟ್ಟಿದರೆ, ಸೂಟುಬೂಟುಧಾರಿ ಬುಷ್‌ ಈ ಕರೆಯನ್ನು ಗಂಭೀರ ಭಂಗಿಯಲ್ಲೇ ನಿರಾಕರಿಸಿದ್ದಾರೆ.

ಅಮೆರಿಕ- ಇರಾಕ್‌ ನಡುವೆ ಯುದ್ಧ ನಡೆಯುವುದು ಈಗ ಪ್ರತಿಶತ 99ರಷ್ಟು ಖಚಿತ ಎಂಬಂಥಾ ವಾತಾವರಣವಿದೆ. ಇಂಥಾದರಲ್ಲೂ , ಹೇಗಾದರೂ ಯುದ್ಧ ತಪ್ಪಿದರೆ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ ಅನ್ನೋದು ಸದ್ದಾಂ ಆಶಯ. ಸಿಬಿಎಸ್‌ ಟೀವಿಯ ಸಂದರ್ಶನವೊಂದರಲ್ಲಿ ಸದ್ದಾಂ ಮಾತಾಡುತ್ತಿದ್ದಾಗ ಈ ಕಳಕಳಿ ಇಟ್ಟರು.

ಸದ್ದಾಂ ಹೇಳುತ್ತಾರೆ- ನನಗೆ ಅಮೆರಿಕನ್ನರು ಹಾಗೂ ಇರಾಕ್‌ ಜನರ ಮೇಲೆ ಗೌರವವಿದೆ. ವಿಶ್ವದ ಜನತೆಯ ಮೇಲೂ ಗೌರವವಿದೆ. ಯುದ್ಧ ಅನ್ನೋದು ಜೋಕ್‌ ಅಲ್ಲ. ಆ ಕಾರಣಕ್ಕೇ ನಾನು ಇಂಥಾ ಚರ್ಚೆಗೆ ಕರೆಯುತ್ತಿರುವುದು. ಯುದ್ಧ ನಡೆದುಹೋಗಲಿ ಅನ್ನೋದು ಬುಷ್‌ ನಿರ್ಧಾರವೇ ಆಗಿದ್ದಲ್ಲಿ, ಅದಕ್ಕೆ ಪೂರಕ ಸಮರ್ಥನೆಗಳನ್ನು ಕೊಡಲು ಚರ್ಚೆ ಒಂದು ವೇದಿಕೆಯೂ ಆಗುತ್ತದೆ.

ಸದ್ದಾಂ ಸುಖಾಸುಮ್ಮನೆ ಹಾಸ್ಯಾಸ್ಪದ ನಾಟಕದ ಯತ್ನ ಮಾಡುತ್ತಿದ್ದಾರೆ. ಅವರ ಇಂಥಾ ವರಸೆಗಳಿಗೆ ಸೊಪ್ಪು ಹಾಕೋದಿಲ್ಲ ಅಂತ ಶ್ವೇತ ಭವನ ಖಂಡಾತುಂಡಾಗಿ ಹೇಳಿದೆ. ಶ್ವೇತ ಭವನದ ವಕ್ತಾರ ಅರಿ ಫ್ಲೀಷರ್‌ ಪ್ರಕಾರ ಸದ್ದಾಂ ಅವರದ್ದು ಗಂಭೀರ ಕರೆಯೇನಲ್ಲ. ಇಲ್ಲಿರುವುದು ಚರ್ಚೆಯ ಪ್ರಶ್ನೆಯಲ್ಲ. ನಿಶ್ಶಸ್ತ್ರೀಕರಣದ ವಿಷಯ. ಇರಾಕ್‌ ನಿಶ್ಶಸ್ತ್ರೀಕೃತವಾಗಬೇಕೆಂಬುದು ಜಗತ್ತಿನ ಸಲಹೆ. ಆಲ್‌- ಸಮೌಂಡ್‌ ಕ್ಷಿಪಣಿಗಳ ವಿಷಯವಾಗಿ ಗಂಭೀರ ನಿಲುವು ತಳೆಯದ ಸದ್ದಾಂ ಹುಸೇನರು ವಿಷಯವನ್ನು ಬೇರೆ ಕಡೆ ಹೊರಳಿಸುತ್ತಿರುವುದು ಯಾಕೋ ಅಂತ ಹಾರುತ್ತಾರೆ ಫ್ಲೀಷರ್‌.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನೇಮವನ್ನು ಇರಾಕಿನ ಆಲ್‌- ಸಮೌಂಡ್‌ ಕ್ಷಿಪಣಿಗಳು ಮುರಿಯುವಂತಿವೆ. ಇವು ನಿಗದಿಗಿಂತ 150 ಕಿಲೋ ಮೀಟರುಗಳಷ್ಟು ದೂರ ಹಾರುತ್ತವೆ. ಅವನ್ನು ಒಂದೂ ಬಿಡದಂತೆ ನಾಶ ಪಡಿಸಬೇಕು ಅನ್ನೋದು ವಿಶ್ವಸಂಸ್ಥೆಯ ತಾಕೀತು. ಮಾರ್ಚ್‌ 1ರಿಂದಲೇ ಅವನ್ನು ನಾಶಪಡಿಸುವ ಕೆಲಸ ಶುರುಮಾಡಿ ಎಂದು ವಿಶ್ವಸಂಸ್ಥೆಯ ಶಸ್ತ್ರಾಸ್ತ್ರಗಳ ಮುಖ್ಯ ಇನ್ಸ್‌ಪೆಕ್ಟರ್‌ ಹ್ಯಾನ್ಸ್‌ ಬ್ಲಿಕ್ಸ್‌ ಇರಾಕಿಗೆ ಆದೇಶ ಕೊಟ್ಟಿದ್ದಾರೆ.

ಅಮೆರಿಕ ಮಾತಿಗೆ ಕೂರೋದು ಬಿಟ್ಟು ವಿಶ್ವಸಂಸ್ಥೆ ಮೂಲಕ ಇಂಥಾ ಫರ್ಮಾನು ಹೊರಡಿಸಿದರೆ ನಾವು ಜಗ್ಗೋದಿಲ್ಲ. ತಾಂತ್ರಿಕ ನಿರ್ವಹಣೆಯ ವ್ಯವಸ್ಥೆಯಿಲ್ಲದ್ದರಿಂದ ಮಾತ್ರ ಕ್ಷಿಪಣಿಗಳು ಹೇಳಿದ್ದಕ್ಕಿಂತ ಹೆಚ್ಚು ದೂರ ಹಾರಿವೆ ಅಷ್ಟೆ. ಇದನ್ನೇ ನೆಪ ಮಾಡಿಕೊಂಡು ಅವನ್ನು ನಾಶಪಡಿಸಿದರೆ ನಮ್ಮ ಜಂಘಾಬಲ ಉಡುಗೀತು. ಮಿಲಿಟರಿ ಶಕ್ತಿ ಕೇಂದ್ರದ ಹೃದಯ ಬಾಗ್‌ದಾದ್‌ ಇಂಥಾ ಶಸ್ತ್ರಾಸ್ತ್ರ ನಾಶದ ಧಮಕಿಗಳಿಗೆ ಕಿಂಚಿತ್ತೂ ಹೆದರುವುದಿಲ್ಲ ಎಂದು ಸದ್ದಾಂ ಕೆನೆದಿದ್ದಾರೆ.

ತಣ್ಣಗೆ ಬನ್ನಿ, ಮಾತಾಡೋಣ ಅಂತ ಸದ್ದಾಂ ಮೆಲ್ಲಗೆ ಕರೆದರೆ ಶ್ವೇತ ಭವನ ಒಲ್ಲೆ ಎನ್ನುತ್ತಿದೆ. ಕ್ಷಿಪಣಿಗಳನ್ನು ನಾಶಪಡಿಸಿ ಎಂದು ವಿಶ್ವಸಂಸ್ಥೆ ಹೇಳಿದರೆ ಸದ್ದಾಂ ಸದ್ದು ಜಾಸ್ತಿಯಾಗುತ್ತಿದೆ. ಹಾಗಾದರೆ ಯುದ್ಧ ನಡೆದೇ ಬಿಡುತ್ತದಾ? ಜಗತ್ತು ಇನ್ನೊಂದು ಟಂಗಾಟುಂಗಿಯನ್ನು ನೋಡಲೇಬೇಕಾ?

(ಪಿಟಿಐ)

Post your views

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more